ಮಡಿಕೇರಿ ಜು.26 NEWS DESK : ಕೊಡಗು ಜಿಲ್ಲಾ ಬುಡಕಟ್ಟು ಕೃಷಿಕರ ಸಂಘದ ಪದಾಧಿಕಾರಿಗಳು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರನ್ನು ಭೇಟಿ ಮಾಡಿ ತಮ್ಮನ್ನು ಅಲೆಮಾರಿ ಸಮುದಾಯದಿಂದ ಕೈಬಿಟ್ಟು ಪಿ.ವಿ.ಜಿ.ಟಿ ಪಟ್ಟಿಗೆ (ನಿರ್ದಿಷ್ಟ ದುರ್ಬಲ ಬುಡಕಟ್ಟು ಗುಂಪು) ಸೇರಿಸುವಂತೆ ಮನವಿ ಮಾಡಿದರು. ಹಿಂದಿನಿಂದಲೂ ಕೊಡಗಿನ ನಿವಾಸಿಗಳಾಗಿರುವ ಎರವ, ಬೆಟ್ಟಕುರುಬ, ಸೋಲಿಗ ಕುಟುಂಬಕ್ಕೆ ಸೇರಿದ ತಾವುಗಳು ಅರಣ್ಯ ಹಕ್ಕು ಪತ್ರವನ್ನು ಹೊಂದಿದ್ದು ಸರ್ಕಾರ ಅಲೆಮಾರಿ ಬುಡಕಟ್ಟು ಜನಾಂಗ ಎಂದು ಗುರುತಿಸಿರುವುದರಿಂದ ಸರ್ಕಾರದ ಸೌಲಭ್ಯದಿಂದ ವಂಚಿತರಾಗುತ್ತದೇವೆ. ಈ ಹಿಂದೆ ಗಿರಿಜನ ಉಪಯೋಜನೆಯಡಿ ಸೌಲಭ್ಯ ಪಡೆಯುತ್ತಿದ್ದೆವು.
ಪ್ರಸ್ತುತ ಅಲೆಮಾರಿ ಬುಡಕಟ್ಟು ವರ್ಗ ಎಂದು ದಾಖಲಾಗಿರುವುದರಿಂದ ಈ ಸೌಲಭ್ಯ ಸಿಗುತ್ತಿಲ್ಲ. ಆದ್ದರಿಂದ ತಮ್ಮನ್ನು ಪಿ ವಿ ಜಿ ಟಿ ಪಟ್ಟಿಗೆ ಸೇರಿಸುವಂತೆ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕಾಗಿ ಮನವಿ ಪತ್ರದಲ್ಲಿ ವಿನಂತಿಸಿಕೊಂಡಿದ್ದಾರೆ.
ಲ್ಯಾಂಪ್ಸ್ ಅಧ್ಯಕ್ಷ ಮಣಿ, ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಸಿದ್ದಪ್ಪ, ಬೆಟ್ಟ ಕುರುಬರ ಸಂಘದ ತಾಲ್ಲೂಕು ಅಧ್ಯಕ್ಷ ಪಾಪು, ಹಾಡಿ ಅಧ್ಯಕ್ಷ ವೈ.ಪಿ.ತಮ್ಮಯ್ಯ ನಿಯೋಗದಲ್ಲಿದ್ದರು.