ಮೂರ್ನಾಡು ಆ.5 NEWS DESK : ಮೂರ್ನಾಡಿನಲ್ಲಿ ನೂತನವಾಗಿ ಆರಂಭವಾಗಿರುವ ಜೈಭೀಮ್ ಯುವಕ ಸಂಘದ ಕಚೇರಿಯನ್ನು ಮಡಿಕೇರಿ ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಎಂ.ನಂದಕುಮಾರ್ ಉದ್ಘಾಟಿಸಿದರು.
ನಂತರ ಮತನಾಡಿದ ಅವರಿ, ನಮ್ಮಜನಾಂಗವು ಒಗ್ಗಟ್ಟಿನಿಂದ ಮುಂದುವರೆದಾಗ ಮಾತ್ರ ನಮ್ಮಲ್ಲಿ ಅಭಿವೃದ್ದಿ ಕಾಣಲುಸಾಧ್ಯ. ಸರ್ಕಾರದ ಅನೇಕ ಸೌಭ್ಯಗಳು ತಾನಾಗಿಸಿಗುವಂತಾಗುತ್ತದೆ. ಸಂಘದ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸುವಂತಾಗಬೇಕು ಎಂದು ಹೇಳಿದರು.
ಸಮಾರಂಭದಕ್ಕೆ ಮುಖ್ಯಅತಿಥಿಗಳಾಗಿ ಆಗಮಿಸಿದ್ದ ಮಡಿಕೇರಿಯ ದೇವರಾಜ್ಮಣಿ, ಶಿಕ್ಷಕ ಹೆಚ್.ಎಲ್. ಭೈರ, ಕಂತೂರು-ಮೂರ್ನಾಡು ಅಭಿವೃದ್ದಿ ಅಧಿಕಾರಿ ಚಂದ್ರಮೌಳಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಪಾಪುಸಣ್ಣಯ್ಯ ಮತ್ತು ಹೆಚ್.ಪಿ.ಸುಬ್ರಮಣಿ ಮಾತನಾಡಿದರು.
ಹೆಚ್.ಎಸ್.ಹೀರಾಸುಬ್ಬಯ್ಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳನ್ನು ಶಾಲುಹೊದಿಸಿ, ನೆನಪಿನಕಾಣಿಕೆ ನೀಡಿ ಸನ್ಮಾನಿಸಲಾಯಿತು. ಸಂಘದ ಸದಸ್ಯರಾದ ರಘು ಸ್ವಾಗತಿಸಿದರು. ದಿನೇಶ್ ವಂದಿಸಿದರು.
ನೂತನ ಸಮಿತಿ ರಚನೆ : ನೂತನವಾಗಿ ರಚಿಸಲಾಗಿರುವ ಜೈಭೀಮ್ ಯುವಕ ಸಂಘದ ಅಧ್ಯಕ್ಷರಾಗಿ ಹೆಚ್.ಎಸ್.ಹೀರಾಸುಬ್ಬಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದು, ಸಂಘದ ಕಾರ್ಯದರ್ಶಿಯಾಗಿ ಹೆಚ್.ಬಿ.ಮಂಜು ಆಯ್ಕೆಯಾಗಿದ್ದಾರೆ. 30 ಮಂದಿ ಯುವಕ ಸಂಘದ ಸದಸ್ಯರಾಗಿರುತ್ತಾರೆ.