ಮಡಿಕೇರಿ NEWS DESK ಆ.5 : ನಗರದ ಕೊಡಗು ವಿದ್ಯಾಲಯದ ಎನ್.ಸಿ.ಸಿ ಕೆಡೆಟ್ ಗಳಾದ ಜ್ಯೋತಿರಾದಿತ್ಯ ಬಿ ವೈ., ಕೃತಾರ್ಥ್ ಸಿ. ಪಿ. ಮತ್ತು ಇರ್ಶಾನ್ ವಿ ಐ. ಇವರು ಕೊಡಗು, ಮಂಗಳೂರು, ಉಡುಪಿ, ಕುಂದಾಪುರ, ಶಿವಮೊಗ್ಗ ಒಳಗೊಂಡ ಮಂಗಳೂರು ವಿಭಾಗ ಮಟ್ಟದ ಶೂಟಿಂಗ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಆಯ್ಕೆಯಾದ 6 ಜೂನಿಯರ್ ಕೆಡೆಟ್ ಗಳ ಪೈಕಿ ಈ 3 ಕೆಡೆಟ್ ಗಳು ಮಡಿಕೇರಿಯ ಕೊಡಗು ವಿದ್ಯಾಲಯದವರಾಗಿದ್ದು. ಕರ್ನಾಟಕ ಮತ್ತು ಗೋವಾ ಡೈರೆಕ್ಟರೇಟ್ ಮಟ್ಟದ ಶೂಟಿಂಗ್ ಸ್ಪರ್ಧೆಗೆ ಮಂಗಳೂರು ವಿಭಾಗ ಪ್ರತಿನಿಧಿಸಲು ಆಯ್ಕೆಯಾಗಿರುತ್ತಾರೆ. ಇವರು 14 ಕರ್ನಾಟಕ ಬೆಟಾಲಿಯನ್ ಎನ್.ಸಿ. ಸಿ.ಕೆಡೆಟ್ ಗಳಾಗಿದ್ದು. ಮೈಸೂರಿನಲ್ಲಿ ಆಗಸ್ಟ್ 1 ರಿಂದ 10 ರವರೆಗೆ ನಡೆಯುವ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕೊಡಗು ವಿದ್ಯಾಲಯದ ಪ್ರಕಟಣೆ ತಿಳಿಸಿದೆ.