*ತೋಳೂರುಶೆಟ್ಟಳ್ಳಿ ಮಳೆಹಾನಿ ಪ್ರದೇಶಗಳಿಗೆ ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್ ಭೇಟಿ : ಆಹಾರ ಕಿಟ್ ವಿತರಣೆ*
1 Min Read
ಸೋಮವಾರಪೇಟೆ ಆ.5 NEWS DESK : ತೋಳೂರುಶೆಟ್ಟಳ್ಳಿ ಸುತ್ತಮುತ್ತಲ ಮಳೆಹಾನಿ ಪ್ರದೇಶಗಳಿಗೆ ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭ ಸಂತ್ರಸ್ತರಿಗೆ ಧೈರ್ಯ ಹೇಳಿದ ಅವರು ತೀವ್ರ ಸಂಕಷ್ಟದಲ್ಲಿರುವ ಕೆಲವು ಕುಟುಂಬಕ್ಕೆ ಪಡಿತರ ಸಾಮಾಗ್ರಿ ವಿತರಿಸಿದರು. ಈ ಸಂದರ್ಭ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ ಹಾಗೂ ಮತ್ತಿತರ ಪ್ರಮುಖರು ಹಾಜರಿದ್ದರು.