ಮಡಿಕೇರಿ ಆ.12 NEWS DESK : ದೇಶದ ರಕ್ಷಣೆಗಾಗಿ ಯುದ್ಧದಲ್ಲಿ ವೈರಿಗಳ ವಿರುದ್ಧ ಸೆಣೆಸಾಡಿ ಭಾರತ ಭೂಮಿಯನ್ನು ಉಳಿಸಿದ ನಿವೃತ್ತ ಯೋಧರನ್ನು ಗೌರವಿಸುವ ಅರ್ಥಪೂರ್ಣ ಕಾರ್ಯಕ್ರಮ ನಗರದಲ್ಲಿ ನಡೆಯಿತು. ನಗರದ ಕಾವೇರಿ ಹಾಲ್ ಸಭಾಂಗದಣಲ್ಲಿ ನಡೆದ ಕೊಡಗು ಜಿಲ್ಲಾ ಮಾಜಿ ಸೈನಿಕರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ವಾರ್ಷಿಕ ವರದಿ, ಲೆಕ್ಕಪತ್ರ ಮಂಡನೆ, ಸಾಧಕ-ಬಾಧಕ ಚರ್ಚೆಯ ಜೊತೆಗೆ ಕದನ ಕಲಿಗಳಿಗೆ ಗೌರವ, ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮಾಜಿ ಸೈನಿಕರು, ಅವರ ಕುಟುಂಬ ಹಾಗೂ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಮಾಜಿ ಸೈನಿಕರ ಮಕ್ಕಳನ್ನು ಸನ್ಮಾನಿಸಲಾಯಿತು. 1965, 1971 ಭಾರತ, ಪಾಕಿಸ್ತಾನ ಯುದ್ಧ, 1963ರ ಭಾರತ ಚೀನಾ ಯದ್ಧದಲ್ಲಿ ಭಾಗಿಯಾದ ನಿವೃತ್ತ ಕರ್ನಲ್ ಕೆ.ಸಿ.ಸುಬ್ಬಯ್ಯ, ನಿ.ಲೆ.ಕ.ಪಿ.ಸಿ.ಕರುಂಬಯ್ಯ, ಮುಂಡಚಾರಿಕ ಬೋಪಯ್ಯ, ಟಿ.ಬಿ.ತಿಮ್ಮಯ್ಯ, ಎಂ.ಯು.ಕುಶಾಲಪ್ಪ, ಸಿ.ಎಂ.ಕಾರ್ಯಪ್ಪ, ರಾಮಯ್ಯ, ಬಿ.ಎಸ್.ಗಣಪತಿ, ಎಂ.ಸಿ.ಅಪ್ಪಯ್ಯ, ಬಿ.ಸಿ.ಮುತ್ತಣ್ಣ, ಪಿ.ಕೆ.ಪಾಪಯ್ಯ, ಸೋಮಣ್ಣ, ಎಂ.ಎಸ್.ಕುಂಞಪ್ಪ, ಪಿ.ಎಂ.ಕುಶಾಲಪ್ಪ, ಕೆ.ಯು.ಗಣಪತಿ, ಡಬ್ಲ್ಯೂ.ಪಿ.ಸುಬ್ಬಯ್ಯ, ಕೆ.ಎಂ.ದೇವಯ್ಯ, ಬಿ.ಯು.ಕಾಳಪ್ಪ, ಎಂ.ಬಿ.ಅಪ್ಪಣ್ಣ, ಎಂ.ಎಸ್.ಪೂವಯ್ಯ, ಎಂ.ಸಿ.ಕರುಂಬಯ್ಯ, ಎಂ.ಎ.ಸೋಮಯ್ಯ, ಬಿ.ಎ.ಬೆಳ್ಯಪ್ಪ, ಬಿ.ವೈ.ಉತ್ತಪ್ಪ, ಬಿ.ಎಸ್.ಉತ್ತಪ್ಪ, ಬಿ.ಎಸ್.ಜಪ್ಪು ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಶೈಕ್ಷಣಿಕ ಸಾಧಕರಿಗೆ ಸನ್ಮಾನ :: ಶೈಕ್ಷಣಿಕವಾಗಿ ಸಾಧನೆಗೈದ ಮಾಜಿ ಸೈನಿಕರ ಮಕ್ಕಳಿಗೆ ಪ್ರತಿಭಾಪುರಸ್ಕಾರ ನೀಡಲಾಯಿತು. ಎಸ್.ಎಸ್.ಎಲ್.ಸಿ. ಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಧೃತಿ ದೇಚಮ್ಮ, ಹೆಚ್.ಯು.ಸುಪ್ರೀತ್, ಶಾನ್ ಮಂದಣ್ಣ, ದ್ವಿತೀಯ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಉಜ್ವಲ, ಡಿ.ಯು. ಚಿಂತನ್, ಪಿ.ಡಿ.ವಿಕಾಸ್, ನೇಹಾ ಪ್ರಭು, ನಿಖಿತ್ ಪೂವಯ್ಯ, ವಂಶಿ, ಪಿ.ಜಿ.ಕವನ್ ಅವರುಗಳು ಗೌರವಕ್ಕೆ ಪಾತ್ರರಾದರು.
ಸಾಧಕರಿಗೆ ಸನ್ಮಾನ :: ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಾಜಿ ಸೈನಿಕರು ಸೇರಿದಂತೆ ಮಾಜಿ ಸೈನಿಕರ ಕುಟುಂಬವನ್ನು ಕಾರ್ಯಕ್ರಮದಲ್ಲಿ ಗುರುತಿಸಿ ಸನ್ಮಾನಿಸಲಾಯಿತು. ಗಗನ (ಜೈವಿಕ ತಂತ್ರಜ್ಞಾನ), ಐ.ಎಂ.ದಿಲನ್, ಪಿ.ಕೆ. ಗಾನ (ಶಿಕ್ಷಣ), ಮುಲ್ಲೇರ ಪೆÇನ್ನಮ್ಮ (ಕ್ರೀಡೆ), ಸಿ.ಪಿ. ದಿಗಂತ್ (ಕರಾಟೆ), ಚೊಟ್ಟಂಗಡ ಚಂಗಪ್ಪ (ಸರಕಾರಿ ಸೇವೆ), ದಿನೇಶ್ (ಸಾಮಾಜಿಕ), ಟಿ.ಸಿ. ಅಯ್ಯಪ್ಪ, ಟಿ.ಬಿ.ಪ್ರಭಾಕರ್ (ಆರೋಗ್ಯ ಕ್ಷೇತ್ರ), ಎ.ಬಿ. ದೀಪಾ (ಕಲೆ) ಅವರುಗಳು ಸನ್ಮಾನಕ್ಕೆ ಭಾಜನರಾದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ – ಕೊಟ್ಟುಕತ್ತೀರ ಸೋಮಣ್ಣ, ಮಾಜಿ ಸೈನಿಕರ ಹಿತಕಾಯುವ ನಿಟ್ಟಿನಲ್ಲಿ ಸಂಘ ಕಾರ್ಯೋನ್ಮುಖಗೊಂಡಿದ್ದು, ನಮ್ಮ ಬೇಡಿಕೆಗಳ ಈಡೇರಿಕೆಗೆ ನ್ಯಾಯಯುತ ಹೋರಾಟ ನಡೆಸುತ್ತಿದ್ದೇವೆ. ತಾರ್ಕಿಕ ಅಂತ್ಯದ ತನಕ ಮಗಳು ಇದನ್ನು ಕೊಂಡೊಯ್ಯಲಾಗುವುದು ಎಂದು ಹೇಳಿದರು. ಉಪಾಧ್ಯಕ್ಷ ಸುಧೀರ್ ಪ್ರಾಸ್ತಾವಿಕವಾಗಿ ಮಾತನಾಡಿ, ಸೈನಿಕರೊಬ್ಬರ ಕುಟುಂಬದ ಮೇಲೆ ಹಲ್ಲೆ ನಡೆದ ಸಂದರ್ಭ ನಾವು ಒಗ್ಗೂಡಿ ಹೋರಾಟ ಮಾಜಿ ಮಾಡಿ ಸಂಘಟನೆ ಕಟ್ಟಿದೆವು. ಹೋರಾಟದಿಂದ ಸಂಘಟನೆ ಸ್ಥಾಪನೆಯಾಗುವುದು ವಿರಳ. ಮಾಜಿ ಸೈನಿಕರೊಂದಿಗೆ ನಾವಿದ್ದೇವೆ ಎಂಬ ಸಂದೇಶ ನೀಡಲು ಕಾರ್ಯಕ್ರಮ ಮಾಡಲಾಗುತ್ತಿದೆ. ಸೇನೆಗೆ ಸೇರುವ ಯುವಶಕ್ತಿಗೆ ಪ್ರೇರಣೆಯಾಗುವ ದಿಕ್ಸೂಚಿಯತ್ತ ನಾವು ಕೆಲಸ ಮಾಡುತ್ತಿದ್ದೇವೆ. ಕೊಡಗಿನಲ್ಲಿ ಸೈನಿಕ ಭವನ ಹಾಗೂ ಮಾಜಿ ಸೈನಿಕರಿಗೆ ನಿವೇಶನ ಇದುವರೆಗೂ ದೊರೆತಿಲ್ಲ. ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾಗಿದೆ. ನಾವೆಲ್ಲ ಒಗ್ಗಟ್ಟಾಗಿ ವ್ಯವಸ್ಥಿತ ಕಾರ್ಯಯೋಜನೆ ಕೈಗೊಂಡು ನಮ್ಮ ಬೇಡಿಕೆ ಈಡೇರಿಸಿಕೊಳ್ಳಬೇಕಾದ ಪರಿಸ್ಥಿತಿ ಇದೆ ಎಂದು ನುಡಿದರು. ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಚೋವಂಡ ಜಿ.ತಿಮ್ಮಯ್ಯ, ಜಂಟಿ ಕಾರ್ಯದರ್ಶಿ ಪಿ.ಜಿ.ಅರುಣ್, ಸಂಘಟನಾ ಕಾರ್ಯದರ್ಶಿ ಕುಟ್ಟಂಡ ಲವ, ಜಂಟಿ ಸಂಘಟನಾ ಕಾರ್ಯದರ್ಶಿ ಪಿ.ಪಿ.ಕಾರ್ಯಪ್ಪ, ಖಜಾಂಚಿ ಎಂ.ಪಿ. ತಿಮ್ಮಯ್ಯ, ಜಂಟಿ ಖಜಾಂಚಿ ಎಂ.ಕೆ.ರಮೇಶ್, ಸಹ ಖಜಾಂಚಿ ಪೈರಿ, ಪೊನ್ನಂಪೇಟೆ ತಾಲೂಕು ಸಂಚಾಲಕ ಬಿ.ಎನ್.ಸುನಿಲ್, ಕುಶಾಲನಗರ ತಾಲೂಕು ಸಂಚಾಲಕ ಪಿ.ಎಸ್.ವಾಸು, ಮಡಿಕೇರಿ ತಾಲೂಕು ಸಂಚಾಲಕ ಟಿ.ಕೆ.ಕಾಳಪ್ಪ, ವೀರಾಜಪೇಟೆ ತಾಲೂಕು ಸಂಚಾಲಕ ಮೇಚಿಯಂಡ ರತನ್, ಸೋಮವಾರಪೇಟೆ ತಾಲೂಕು ಸಂಚಾಲಕ ಮೊರ್ಕಂಡ ನಾಣಿಯಪ್ಪ, ಮಹಿಳಾ ಘಟಕದ ಸಂಚಾಲಕಿ ಭವಾನಿ ಹಾಜರಿದ್ದರು.