ಸಿದ್ದಾಪುರ ಆ.13 NEWS DESK : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟದ ವತಿಯಿಂದ ಗುಯ್ಯ ಗ್ರಾಮದ ಆಗಸ್ತೇಶ್ವರ ದೇವಾಲಯದ ಆವರಣದಲ್ಲಿ ಸ್ವಚ್ಛತಾ ಶ್ರಮದಾನ ನಡೆಯಿತು. ಸುಮಾರು 20ಕ್ಕೂ ಹೆಚ್ಚು ಒಕ್ಕೂಟದ ಮಹಿಳೆಯರು ಸೇರಿ ದೇವಾಲಯದ ಆವರಣದಲ್ಲಿ ಬೆಳೆದಿದ್ದ ಕಾಡುಗಳನ್ನು ಕಡಿದು, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಹೆಕ್ಕಿ ಶುಚಿಗೊಳಿದರು. ಈ ಸಂದರ್ಭ ಸೇವಾ ಪ್ರತಿನಿಧಿ ಉಷಾ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಸಿದ್ದಾಪುರ ಗುಯ್ಯ ಒಕ್ಕೂಟದ ವತಿಯಿಂದ ಪ್ರತಿ ವರ್ಷ ಸ್ವಚ್ಛತಾ ಆಂದೋಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಸುಂದರ ಪರಿಸರ ನಿರ್ಮಾಣ ಮಾಡಲು ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು. ದೇವಾಲಯದ ಪ್ರಮುಖರಾದ ರಾಮಚಂದ್ರ ಭಟ್ ಮಾತನಾಡಿ, ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಮೂಲಕ ಪರಿಸರ ಕಾಳಜಿಯೊಂದಿಗೆ ಸ್ವಚ್ಛತಾ ಅಭಿಯಾನದ ಮೂಲಕ ಜಾಗೃತಿ ಮೂಡಿಸಿ ಧಾರ್ಮಿಕ ಕೇಂದ್ರಗಳ ಆವರಣವನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸುವುದರೊಂದಿಗೆ ಕಾಳಜಿ ಹೊಂದಿರುವ ಸೇವಾ ಪ್ರತಿನಿಧಿಗಳ ಕಾರ್ಯದ ಬಗ್ಗೆ ಮೆಚ್ಚಿಗೆ ವ್ಯಕ್ತಪಡಿಸಿದರು. ಒಕ್ಕೂಟದ ಅಧ್ಯಕ್ಷ ಉದಯ್, ಪ್ರಮುಖರಾದ ನವ್ಯಜ್ಯೋತಿ, ಕಾಮದೇನು, ಅಗಸ್ತ್ಯೇಶ್ವರ, ಸ್ವಪ್ನ, ಸಂಘದ ಸದಸ್ಯರು ಪಾಲ್ಗೊಂಡಿದ್ದರು.