ವಿರಾಜಪೇಟೆ ಆ.15 NEWS DESK : ವಿರಾಜಪೇಟೆಯ ವಿದ್ಯಾನಗರ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ 78ನೇ ಸ್ವಾತಂತ್ರೋತ್ಸವವನ್ನು ಆಚರಿಸಲಾಯಿತು. ಸಂಘದ ಅಧ್ಯಕ್ಷ ಮುನೀರ್ ಧ್ವಜಾರೋಹಣ ನೆರವೇರಿಸಿದರು. ವಿರಾಜಪೇಟೆ ಕೆ.ಇ.ಬಿ ಇಲಾಖೆಯ ಲೈನ್ ಮ್ಯಾನ್ ಸಿಬ್ಬಂದಿಗಳನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭ ಸಂಘದ ಉಪಾಧ್ಯಕ್ಷ ಸಿ.ಬಿ.ಅಬ್ರಹಾಂ, ಕಾರ್ಯದರ್ಶಿ ನೌಶಾದ್, ಸದಸ್ಯರಾದ ಸೈಫುದಿನ್, ಮುಕ್ತಾರ್, ಕಬೀರ್, ನವಾಜ್, ಮಣಿ, ಲತೀಫ್ ಹಾಗೂ ಸಾರ್ವಜನಿಕರು ಹಾಜರಿದ್ದರು.










