ಕೊಡ್ಲಿಪೇಟೆ ಆ.15 NEWSDESK : “ಸ್ವಾತಂತ್ರ್ಯ ಸರ್ವರಿಗೂ ಸಮಾನವಾಗಿರಲಿ ” ಎಂಬ ಧ್ಯೇಯ ವಾಕ್ಯದೊಂದಿಗೆ 78ನೇ ಸ್ವಾತಂತ್ರ್ಯೋತ್ಸವವನ್ನು ಕೊಡ್ಲಿಪೇಟೆ ಎಸ್.ಕೆ.ಎಸ್.ಎಸ್.ಎಫ್ ವತಿಯಿಂದ ಸಂಭ್ರಮಂದ ಆಚರಿಸಲಾಯಿತು. ಹ್ಯಾಂಡ್ ಪೋಸ್ಟ್ ನಲ್ಲಿರುವ ಶಾಖಾ ಕಚೇರಿಯ ಮುಂಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರರನ್ನು ಸ್ಮರಿಸಿ, ದೇಶದ ಸೌಹಾರ್ದತೆಯ ಉಳಿವಿಗಾಗಿ, ಜಾತ್ಯಾತೀತ ಬಲಿಷ್ಠ ಭಾರತದ ನಿರ್ಮಾಣಕ್ಕಾಗಿ ಎಲ್ಲರೂ ಕೈ ಜೋಡಿಸೋಣ ಎಂಬ ಸಂದೇಶ ಸಾರಿದರು. ಬೇಡಗೊಟ್ಟ ಗ್ರಾಮ ಪಂಚಾಯತಿ ಸದಸ್ಯರಾದ ಹನೀಫ್ ಮಾತನಾಡಿ ದಿನದ ಮಹತ್ವದ ಕುರಿತು ವಿವರಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರೈಸ್ ಮಿಲ್ ಮಾಲೀಕ ಸೋಮಣ್ಣ, ಮಸ್ಜಿದುನ್ನೂರ್ ಖತೀಬ ಶಾಫಿ ಫೈಝಿ, ಜುಮಾ ಮಸೀದಿ ಅಧ್ಯಕ್ಷ ಸಿದ್ದೀಕ್ ಹಾಜಿ, ತಜಲ್ಲಿಯಾತ್ ಮದ್ರಸ ಮುಖ್ಯೋಪಾಧ್ಯಾಯ ರಝಾಕ್ ಫೈಝಿ, ಮದ್ರಸದ ಗುರುಗಳಾದ, ಸ್ವಾಲಿಹ್ ರಹ್ಮಾನಿ, ನಾಸರ್ ಸಅದಿ, ಎಸ್.ವೈ.ಎಸ್ ಶಾಖಾಧ್ಯಕ್ಷ ಇಬ್ರಾಹಿಂ ಕೆ.ಎ, ಎಸ್.ಕೆ.ಎಸ್.ಎಸ್.ಎಫ್ ಕೊಡಗು ಜಿಲ್ಲಾ ಕೋಶಾಧಿಕಾರಿ ಬಾಸಿತ್ ಹಾಜಿ, ಆಮಿಲಾ ಉಪಾಧ್ಯಕ್ಷ ಅಬ್ದುಲ್ ರಹಮಾನ್, ಎಸ್.ವೈ.ಎಸ್ ಕಾರ್ಯದರ್ಶಿ ಮುಹಮ್ಮದ್ ಅಲಿ, ಹಿರಿಯರಾದ ಸುಲೈಮಾನ್ ಹೆಚ್ ಇ, ಮುಹಮ್ಮದ್ ಹಾಗೂ ಸಂಘಟನೆಯ ನಾಯಕರು, ಸದಸ್ಯರುಗಳು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಹಾಜರಿದ್ದರು.










