ಸುಂಟಿಕೊಪ್ಪ ಆ.16 NEWS DESK : ಗರಗಂದೂರು, ಮೊರಾರ್ಜಿ ದೇಸಾಯಿ ವಸತಿ ವಿಜ್ಞಾನ ಪಿಯು ಕಾಲೇಜಿನಲ್ಲಿ 78ನೇ ಸ್ವಾತಂತ್ರ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಸುಂಟಿಕೊಪ್ಪ ಜೆಸಿಐ ಸಂಸ್ಥೆಯ ಅಧ್ಯಕ್ಷ ಸಂಪತ್ ಕುಮಾರ್ ಧ್ವಜಾರೋಹಣ ನೆರವೇರಿಸಿದರು. ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲ ಮಹೇಂದ್ರ, ಉಪನ್ಯಾಸಕ ಪಾಪಣ್ಣ, ಜೆಸಿಐ ಸಂಸ್ಥೆಯ ಡೆನಿಸ್ ಡಿಸೋಜಾ, ಫೆಲ್ಸಿ ಡಿಸೋಜಾ, ಹರೀಶ್, ವಸಂತ ಕುಮಾರ್ ಇತರರು ಇದ್ದರು.










