ಸುಂಟಿಕೊಪ್ಪ ಆ.17 NEWS DESK : ಸ್ವಾತಂತ್ರ್ಯ ಎಂದರೆ ದೇಶ ಕಟ್ಟುವ ಕಾರ್ಯದ ನಿಮಿತ್ತ ಕೊಟ್ಟಿರುವ ಜವಾಬ್ದಾರಿ ಎಂದು ಸುಂಟಿಕೊಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಶ್ರೀಲತಾ ಅಭಿಪ್ರಾಯ ವ್ಯಕ್ತಪಡಿಸಿದರು. ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಡೆದ 78ನೇ ಸ್ವಾತಂತ್ರ್ಯೋತ್ಸವ ಧ್ವಜಾರೋಹಣವನ್ನು ನೆರವೇರಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ದೇಶದ ಭವಿಷ್ಯವಾಗಿದ್ದು, ದೇಶಭಕ್ತಿಯೇ ನಮ್ಮಗಳ ಶಕ್ತಿಯಾಗಬೇಕೆಂದರು. ಇತಿಹಾಸ ಉಪನ್ಯಾಸಕಿ ಕೆ.ಸಿ.ಕವಿತಾ ಮಾತನಾಡಿ ನಮ್ಮ ದೇಶದ ಭದ್ರತೆಗೆ ಯುವ ಜನಾಂಗ ಕೈಜೋಡಿಸಬೇಕು. ಈ ಹಿಂದಿನ ಹಿರಿಯ ಹೋರಾಟಗಾರರು ಹಾಕಿಕೊಟ್ಟ ಈ ಭದ್ರ ಸ್ವಾತಂತ್ರ್ಯವನ್ನು ಉಳಿಸಿ ಬೆಳೆಸಬೇಕಾದರೆ ಯುವ ಜನಾಂಗ ತಮ್ಮದೇ ಆದ ಕೊಡುಗೆಯನ್ನು ಕೊಡಬೇಕು. ಆ ನಿಟ್ಟಿನಲ್ಲಿ ಎಲ್ಲರೂ ಶಾಂತಿ, ಸೌಹಾರ್ದ, ಸಹೋದರತೆ ಮೂಲಕ ಬದುಕಬೇಕು ಎಂದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಈಶ, ಕವಿತಾ ಭಕ್ತಾ, ಸುನಿತ, ಸುಚಿತ್ರ, ಕನಕ ಇತರರು ಇದ್ದರು. ವಿದ್ಯಾರ್ಥಿಗಳಿಂದ ನಡೆದ ಸಾಂಸ್ಕøತಿಕ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು.









