ಸುಂಟಿಕೊಪ್ಪ ಆ.17 NEWS DESK : ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದವರನ್ನು ವರ್ಷಕ್ಕೆ ಒಂದು ಬಾರಿ ರಚನಾತ್ಮಕ ಮತ್ತು ಸಮಾಜವನ್ನು ಕಟ್ಟುವ ರೀತಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ಅತ್ಯಂತ ಶ್ಲಾಘನೀಯ ಕೆಲಸ ಎಂದು ಮಡಿಕೇರಿ ಕ್ಷೇತ್ರ ಶಾಸಕರಾದ ಡಾ.ಮಂತರ್ ಗೌಡ ಹೇಳಿದರು. ಗದ್ದೆಹಳ್ಳದ ಎಸ್‍ಎಸ್ ಇಂಟರ್ ನ್ಯಾಷಲ್ ಸಭಾಂಗಣದಲ್ಲಿ ಆಯೋಜಿಸಲಾದ ಎಸ್‍ವೈಎಸ್ ಕೊಡಗು ಜಿಲ್ಲಾ ಶಾಖಾ ವತಿಯಿಂದ 78ನೇ ಸ್ವಾತಂತ್ರ್ಯೋತ್ಸವ ಪ್ರಯುಕ್ತ ರಾಷ್ಟ್ರ ರಕ್ಷಾ ಸಂಗಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ, ಮಾತನಾಡಿದ ಅವರು, ದೇಶದ ಸಂವಿಧಾನದ ಅಡಿಯಲ್ಲಿ ನಾವೆಲ್ಲಾರೂ ಒಂದೇ ಪ್ರತಿಯಬ್ಬನ ಸಮಸ್ಯೆಯು ನನ್ನ ಸಮಸ್ಯೆ ಎಂದು ತಿಳಿದು ನಾವು ಪರಸ್ಪರ ಪ್ರೀತಿ ಸೌರ್ಹದತೆಯಿಂದ ಬಾಳಬೇಕು. ಸಮಸ್ಯೆಗಳ ರಾಜಕಾರಣಿಗಳ ಜವಬ್ದಾರಿಯಲ್ಲಾ ಸಮಾಜದ ಪ್ರತಿಯೊಬ್ಬರು ಸಮಸ್ಯೆಗಳ ಪರಿಹಾರಕ್ಕೆ ಕೈಜೋಡಿಸಬೇಕೆಂದು ಕರೆ ನೀಡಿದರು. ಸಮಾಜದಲ್ಲಿ ಉಳ್ಳವರು ಇಲ್ಲದಿರುವವರ ಬಗ್ಗೆ ಸಹಾಯ ಮಾಡುವ ಮನೋಭಾವವನ್ನು ಹೆಚ್ಚು ಹೆಚ್ಚು ಹೊಂದಬೇಕೆಂದು ಕರೆ ನೀಡಿದ ಅವರು, ಪ್ರತಿಯೊಬ್ಬರು ಉನ್ನತ ಶಿಕ್ಷಣವನ್ನು ಪಡೆದು ಉತ್ತಮ ನಾಗರೀಕರಾಗಿ ದೇಶವನ್ನು ಕಟ್ಟಬೇಕೆಂದು ಶಾಸಕರು ಕರೆ ನೀಡಿದರು. ಕೊಡ್ಲಿಪೇಟೆಯ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ, 78ನೇ ಸ್ವಾತ್ರಂತ್ರ್ಯ ದಿನಾಚರಣೆಯನ್ನು ರಾಷ್ಟ್ರ ಅಭಿಮಾನವನ್ನು ಹೆಚ್ಚಿಸುವ ಕಾರ್ಯಕ್ರಮವನ್ನು ಕಳೆದ 70 ವರ್ಷಗಳಿಂದ ಮಾಡಿಕೊಂಡು ಬರುತ್ತಿರುವುದು ಅತ್ಯಂತ ಶ್ಲಾಘನೀಯ ವಿಚಾರ. ನಾವು ಯಾವುದೇ ಜಾತಿ ಧರ್ಮ ಜನಾಂಗಕ್ಕೆ ಸೇರಿದ್ದಲ್ಲಿ ನಾವು ಮೊದಲು ಭಾರತೀಯರು ಎಲ್ಲಾ ಧರ್ಮಗಳು ಒಂದೇ ಯಾರನ್ನು ನೋಯಿಸದೆ ದ್ವೇಷಿಸದೇ ಪರಸ್ಪರ ಪ್ರೀತಿ ಸಹನೆಯಿಂದ ಬದುಕು ಸಾಗಿಸುವುದು ಎಲ್ಲ ಧರ್ಮಗಳ ತಿರುವು. ನಾವೆಲ್ಲಾರೂ ಮಾನವೀಯ ಧರ್ಮವನ್ನು ಆಚರಿಸಬೇಕೆಂದು ಕರೆ ನೀಡಿದರು. ಸ್ವಾಮೀಜಿಗಳು ನಾವೆಲ್ಲಾರೂ ನಮ್ಮ ಸ್ವಂತ ದುಡಿಮೆಯಿಂದ ಆರ್ಥಿಕವಾಗಿ ಸಬಲರಾಗಬೇಕು. ಅಂತರಂಗ ಬಹಿರಂಗ ಶುದ್ಧವಾಗಿದ್ದಾಗ ನೆಮ್ಮದಿಯ ಜೀವನ ನಮ್ಮದಾಗುತ್ತದೆ. ಆದರೆ ಆಧುನಿಕ ಜೀವನ ಶೈಲಿಯ ಹಿನ್ನಲೆಯಲ್ಲಿ ನೆಮ್ಮದಿಯ ಜೀವನ ಮರಿಚಿಕೆಯಾಗಿದೆ ಎಂದು ಅವರು ವಿಷಾಧಿಸಿದರು. ಸುಂಟಿಕೊಪ್ಪ ಇಮಾನ್ಯುವೆಲ್ ದೇವಾಲಯದ ಧರ್ಮಗುರುಗಳಾದ ಮಧುಕಿರಣ್ ಮಾತನಾಡಿ, ನಮ್ಮ ದೇಶ ವಿವಿಧತೆಯಲ್ಲಿ ಏಕತೆಯನ್ನು ಕಂಡ ದೇಶ. ಭಾರತೀಯರು ಮತ್ತು ಮಾನವೀಯ ಧರ್ಮವನ್ನು ಅಳವಡಿಸಿಕೊಳ್ಳಬೇಕು ಜಾತ್ಯೀತ ಮತ್ತು ಸಮಾನತೆಯ ಸಮಾಜವನ್ನು ಕಟ್ಟಲು ಸಂವಿಧಾನ ಅವಕಾಶಕೊಟ್ಟಿದ್ದು ನಾವೆಲ್ಲಾರೂ ಒಂದಾಗಿ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಾಣ ಮಾಡಬೇಕಾಗಿದೆ ಎಂದು ಕರೆ ನೀಡಿದರು. ಎಸ್‍ಕೆಎಸ್‍ಎಸ್‍ಎಫ್ ಕರ್ನಾಟಕ ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಅನಿಸ್ ಕೌಸರಿ ಮಾತನಾಡಿ, ದೇಶದಲ್ಲಿ ಕೆಲವು ಮಂದಿಯಿಂದ ಅಶಾಂತಿ ಮತ್ತು ಅಸಹನೆಯನ್ನು ಕದ್ದಾಡುವ ಕಾರ್ಯಗಳಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಯುವಜನತೆಯು ಮೌಕಿಕ ವಿಚಾರಗಳಿಗೆ ಮಾರುಹೋಗುತ್ತಿದ್ದಾರೆ. ದೇಶದ ಸಾತ್ವಿಕ ವಿಚಾರಗಳನ್ನು ಗಮನಹರಿಸುವಲ್ಲಿ ಯುವಪೀಳಿಗೆ ಮುಂದಾಗಬೇಕೆಂದರು. ದೇಶವು ಸುಭಿಕ್ಷೆಯಾಗಿರಬೇಕೆಂದರೆ ನಾವೆಲ್ಲಾರೂ ಒಂದೇ ಭಾರತೀಯರು ಎನ್ನುವ ಭಾವನೆಯನ್ನು ಆರಿತು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಮಾತ್ರ ದೇಶವು ಮುಂದುವರಿದ ರಾಷ್ಟ್ರವಾಗಲು ಸಾಧ್ಯವೆಂದು ಅವರು ಬಣ್ಣಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ಎಸ್ ವೈ ಎಸ್ ಅಧ್ಯಕ್ಷ ಸಿ.ಪಿ.ಎಂ.ಬಶೀರ್ ಹಾಜಿ ವಹಿಸಿದ್ದರು. ವೇದಿಯಲ್ಲಿ ವಿಟ್ಲದ ಮಾಜಿ ಶಾಸಕ ಕೆ.ಎ.ಇಬ್ರಾಹಿಂ, ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಶೈಖುನಾ ಎಂ.ಎಂ.ಅಬ್ದುಲ್ಲಾ ಫೈಝಿ ಮಾತನಾಡಿದರು. ಸಮಾರಂಭದಲ್ಲಿ ಎಸ್.ವೈ.ಎಸ್ ಪ್ರಧಾನ ಕಾರ್ಯದರ್ಶಿ ಆಶ್ರಫ್ ಫೈಝಿ ಪ್ರತಿಜ್ಞಾ ವಿಧಿ ಭೋಧಿಸಿದರು. ಕೊಡಗು ಜಿಲ್ಲಾ ಎಸ್ ವೈ ಎಸ್ ಸಂಘಟನಾ ಕಾರ್ಯದರ್ಶಿ ಹಮ್ಮಿದ್ ಮುಸ್ಲಿಯಾರ್ ಸ್ವಾಗತಿಸಿ, ಕೊಡಗು ಜಿಲ್ಲೆಯ ಜವiಯಾತುಲ್ ಉಲಾಮ ಪ್ರಧಾನ ಕಾರ್ಯದರ್ಶಿ ಬಹು ಎ.ಸಿ.ಉಸ್ಮಾನ್ ಫಝಿ ಪ್ರಾರ್ಥಿಸಿ, ವಿರಾಜಪೇಟೆ ಶರೀಫ್ ವಂದಿಸಿದರು.










