ಮಡಿಕೇರಿ ಆ.19 NEWS DESK : ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ ವತಿಯಿಂದ ಅ.4 ರಿಂದ 12 ರವರೆಗೆ ನಗರದ ಗಾಂಧಿ ಮೈದಾವದಲ್ಲಿ ಆಯೋಜಿತ ದಸರಾ ಸಾಂಸ್ಕೃತಿಕ ಕಾಯ೯ಕ್ರಮಗಳಿಗೆ ಕಲಾವಿದರು, ಕಲಾತಂಡಗಳಿಂದ ಅಜಿ೯ ಆಹ್ವಾನಿಸಲಾಗಿದೆ. ಕಲಾವಿದರು, ಕಲಾತಂಡಗಳು ಸೆಪ್ಂಬರ್ 2 ರ ಒಳಗಾಗಿ madikeridasara@gmail,com ಗೆ ಅಜಿ೯,, ಮಾಹಿತಿಯನ್ನು ಮೇಲ್ ಮಾಡಬೇಕು. ನಿಗಧಿತ ದಿನಾಂಕದ ನಂತರ ಬಂದ ಅಜಿ೯ಗಳನ್ನು ಪರಿಶೀಲಿಸಲಾಗುವುದಿಲ್ಲ ಎಂದು ಮಡಿಕೇರಿ ದಸರಾ ಸಾಂಸ್ಕೖತಿಕ ಸಮಿತಿ ಅಧ್ಯಕ್ಷ ಅನಿಲ್ ಹೆಚ್.ಟಿ.ತಿಳಿಸಿದ್ದಾರೆ. ಮಹಿಳಾ ದಸರಾ, ಮಕ್ಕಳ ದಸರಾ, ಜಾನಪದ ದಸರಾಗಳಿಗೆ ಕಾಯ೯ಕ್ರಮ ನೀಡುವವರು ಅಜಿ೯ಯಲ್ಲಿ ಈ ಬಗ್ಗೆ ನಮೂದಿಸಬೇಕು. ಒಂದು ಕಲಾತಂಡಕ್ಕೆ ಒಂದು ಪ್ರದಶ೯ನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಸೋಲೋ ನೖತ್ಯ, ಸೋಲೋ ಹಾಡಿಗೆ ಅವಕಾಶವಿಲ್ಲ, ನೃತ್ಯತಂಡದಲ್ಲಿ ಕನಿಷ್ಟ 4 ಮಂದಿ ಇರಬೇಕು, ಕಲಾವಿದರ ಆಯ್ಕೆಯ ಅಂತಿಮ ತೀಮಾ೯ನ ದಸರಾ ಸಾಂಸ್ಕೃತಿಕ ಸಮಿತಿಯದ್ದಾಗಿರುತ್ತದೆ. ಹೆಚ್ಚಿನ ಮಾಹಿತಿಗೆ ಸಂಪಕ೯ ಸಂಖ್ಯೆ ತೆನ್ನೀರಾ ಮೈನಾ – 94491 56215, ಕುಡೆಕಲ್ ಸಂತೋಷ್ – 9972538584 ಸಂಪರ್ಕಿಸಬಹುದಾಗಿದೆ.









