ಕುಶಾಲನಗರ, ಆ.19 NEWS DESK : ಬೆಂಗಳೂರಿನಲ್ಲಿ ಆರಂಭಗೊಂಡ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಪುರುಷರ ಹಾಕಿ ಪಂದ್ಯಾವಳಿಯ ಮೊದಲ ಕ್ವಾರ್ಟರ್ ಫೈನಲ್ ನಲ್ಲಿ ಕೊಡಗು ಜಿಲ್ಲಾ ತಂಡವು ಮುನ್ನಡೆ ಸಾಧಿಸಿದೆ. ಬೆಂಗಳೂರಿನ ಶಾಂತಿನಗರದ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕ್ರೀಡಾಕೂಟದಲ್ಲಿ ಕೊಡಗು ಮತ್ತು ವಿಜಯಪುರ ನಡುವೆ ನಡೆದ ಹಾಕಿ ಟೂರ್ನಿಯ ಮೊದಲ ಕ್ವಾರ್ಟರ್ ಫೈನಲ್ ನಲ್ಲಿ ಕೊಡಗು ತಂಡವು 7 ಗೋಲುಗಳನ್ನು ಪಡೆದು 7-0 ಗೋಲುಗಳ ಅಂತರದಲ್ಲಿ ವಿಜಯಪುರ ತಂಡವನ್ನು ಮಣಿಸಿತು. ಕೊಡಗು ಹಾಕಿ ತಂಡದ ಪರವಾಗಿ ಲೋಕೇಶ್ ಆರ್ ಡಿ ಮತ್ತು ಸತೀಶ್ ತಲಾ 2 ಗೋಲುಗಳು ಹಾಗೂ ಜಾಗೃತ್ , ಮೌನ್ ಮೊಣ್ಣಪ್ಪ ಹಾಗೂ ಮಾಚಯ್ಯ ತಲಾ ಒಂದು ಗೋಲು ಬಾರಿಸಿ ಕ್ವಾರ್ಟರ್ ಫೈನಲ್ ನಲ್ಲಿ ಕೊಡಗು ತಂಡವು ಜಯಶಾಲಿಯಾಗಲು ಸಹಕರಿಸಿದರು. ತಂಡದ ವ್ಯವಸ್ಥಾಪಕ ಬಿ.ಟಿ.ಪೂರ್ಣೇಶ್ ನೇತೃತ್ವದಲ್ಲಿ ನಡೆಯುತ್ತಿರುವ ಹಾಕಿ ಟೂರ್ನಿಯಲ್ಲಿ ಪೊನ್ನಂಪೇಟೆಯ ಡ್ಯಾನಿ ಈರಪ್ಪ ಕೋಚ್ ತರಬೇತಿದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಕಿ ಟೂರ್ನಿಯ ಕ್ವಾರ್ಟರ್ ಫೈನಲ್ ನಲ್ಲಿ ಕೊಡಗು ತಂಡವು ಜಯಶಾಲಿಯಾಗಿರುದಕ್ಕೆ ಕ್ರೀಡಾಳುಗಳನ್ನು ರಾಜ್ಯ ಸರ್ಕಾರಿ ನೌಕರರ ಸಂಘದ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಪೊನ್ನಚ್ಚನ ಶ್ರೀನಿವಾಸ್ ಅಭಿನಂದಿಸಿದ್ದಾರೆ. ಹಾಕಿಯ ಸೆಮಿಫೈನಲ್ ಮತ್ತು ಅಂತಿಮ ಟೂರ್ನಿ ನಡೆಯಲಿದೆ ಎಂದು ತಿಳಿಸಲಾಗಿದೆ.
Breaking News
- *ಕುಶಾಲನಗರ ಕಳವು ಪ್ರಕರಣ : ಇಬ್ಬರು ಆರೋಪಿಗಳ ಬಂಧನ*
- *ನ.17 ರಂದು ಎಲ್ಕೆಜಿಯಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗಾಗಿ ಮಡಿಕೇರಿಯಲ್ಲಿ ಚಿತ್ರಕಲಾ ಸ್ಪರ್ಧೆ*
- *ಮಿನಿ ಒಲಿಂಪಿಕ್ ಕ್ರೀಡಾಕೂಟಕ್ಕೆ ಕೊಡಗು ಮರ್ಕರ ಟೆಕ್ವಾಂಡೋ ಕ್ಲಬ್ನ ವಿದ್ಯಾರ್ಥಿಗಳು ಆಯ್ಕೆ*
- *ಅರೆಕಾಡಿನಲ್ಲಿ ಗಮನ ಸೆಳೆದ ‘ನಾಡೊರ್ಮೆ’ ಕಾರ್ಯಕ್ರಮ : ಕೊಡವ ಸಂಸ್ಕೃತಿ-ಸಾಹಿತ್ಯ ಬೆಳವಣಿಗೆಗೆ ಮತ್ತಷ್ಟು ಶ್ರಮಿಸಿ : ಶಾಸಕ ಡಾ.ಮಂತರ್ ಗೌಡ*
- *ಮಡಿಕೇರಿಯಲ್ಲಿ ಜಿಲ್ಲಾ ಮಟ್ಟದ ಯುವ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ : ವಿದ್ಯಾರ್ಥಿಗಳು ಮೌಲ್ಯಯುತ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸಿ : ಎಸ್ಪಿ ಕೆ.ರಾಮರಾಜನ್*
- *”ಜೇಡ್ಲ ಗೋಕುಲ ತಿಲಕ” ಪ್ರಶಸ್ತಿಗೆ ಅರ್ಜಿ ಆಹ್ವಾನ*
- *ಕುಶಾಲನಗರ- ಶ್ರೀರಂಗಪಟ್ಟಣ ರಸ್ತೆ ಕಾಮಗಾರಿ ಶೀಘ್ರ ಪೂರ್ಣ : ಸಂಸದ ಯದುವೀರ್ ಭರವಸೆ*
- *ಹಾಕತ್ತೂರು, ಮೇಕೇರಿಯಲ್ಲಿ ಕಾರ್ಯಕರ್ತರ ಸಭೆ ನಡೆಸಿದ ಸಂಸದ ಯದುವೀರ್*
- *ನ.26 ರಂದು ಸಿಎನ್ಸಿಯಿಂದ ಕೊಡವ ನ್ಯಾಷನಲ್ ಡೇ ಮತ್ತು ಸಂವಿಧಾನ ದಿನಾಚರಣೆ*
- *ನಾಪೋಕ್ಲು : ಶ್ರೀ ರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ದಿನಾಚರಣೆ*