ಮಡಿಕೇರಿ ಆ.19 NEWS DESK : ಕಕ್ಕಬ್ಬೆಯ ಪಾಡಿ ಶ್ರೀ ಇಗ್ಗುತ್ತಪ್ಪ ಸನ್ನಿಧಿಯಲ್ಲಿ ಆ.26 ರಂದು ಚಿನ್ಯಾರ್ 10 ಆರಾಧನೆ ನಡೆಯಲಿದೆ. ಕಕ್ಕಡ ಕಾರಣದಿಂದ ಸ್ಥಗಿತಗೊಂಡಿದ್ದ, ವಿಶೇಷ ಪೂಜೆ, ತುಲಾಭಾರ ಸೇವೆಗಳು ಪುನರಾರಂಭಗೊಳ್ಳಲಿದೆ. ಕಕ್ಕಡದ ನಂತರ ಕೊಡಗಿನ ಎಲ್ಲಾ ದೇವಾಲಯಗಳಲ್ಲಿ ಪೂಜೆ ಪುನಸ್ಕಾರಗಳು ಪುನರಾರಂಭಗೊಳ್ಳುವ ಧ್ಯೋತಕವಾಗಿ ಇಗ್ಗುತ್ತಪ್ಪನ ಸನ್ನಿಧಾನದಲ್ಲಿ ನಡೆಯುವ ಈ ಚಿನ್ಯಾರ್ 10 ಆರಾಧನೆ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ ಎಂದು ದೇವತಕ್ಕ, ದೇಶತಕ್ಕ, ಪಾಡಿ ಇಗ್ಗುತ್ತಪ್ಪ ಭಕ್ತಜನ ಸಂಘದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ತಿಳಿಸಿದ್ದಾರೆ.









