ಮಡಿಕೇರಿ ಆ.20 NEWS DESK : ಕೊಡಗು ಜಿಲ್ಲಾ ಕೇಂದ್ರ ಗ್ರಂಥಾಲಯ ಮತ್ತು ಅರಿವು ಕೇಂದ್ರಗಳ ಮೇಲ್ವಿಚಾರಕರ ಸಂಘ ಹಾಗೂ ಕೊಡಗು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿ ಗ್ರಂಥಾಲಯ ಮತ್ತು ಅರಿವು ಕೇಂದ್ರಗಳ ಮೇಲ್ವಿಚಾರಕರು ಜಿಲ್ಲಾ ಕೇಂದ್ರ ಗ್ರಂಥಾಲಯದ ನಿವೃತ್ತ ಮುಖ್ಯಾಧಿಕಾರಿ ಲೀಲಾವತಿ ಅವರನ್ನು ಬೀಳ್ಕೊಡಲಾಯಿತು. ನಗರದ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಮೇಲ್ವಿಚಾರಕರಾದ ಆರ್.ಕೆ.ಶಾಂತಾ, ಎನ್. ಜಿ.ಮೊಣ್ಣಪ್ಪ , ಬೆಟ್ಟಗೇರಿಯ ಕಮಲಾಕ್ಷಿ, ಎಸ್.ಬಿ.ಜಲಜಾಕ್ಷಿ ಮತ್ತು ಕೆ.ಆರ್.ರಾಜು ಹಾಗೂ ಮಡಿಕೇರಿ ತಾಲೂಕಿನ ಕಾರ್ಯನಿರ್ವಾಹಣಾಧಿಕಾರಿಗಳ ಸಮ್ಮುಖದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು. ಈ ಸಂದರ್ಭ ಮಾತನಾಡಿದ ಮಡಿಕೇರಿ ತಾಲೂಕಿನ ಕಾರ್ಯನಿರ್ವಹಣಾಧಿಕಾರಿ ಶೇಖರ್, 2008 ರಲ್ಲಿ ಮಡಿಕೇರಿ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ಮುಖ್ಯ ಗ್ರಂಥಾಲಯಾಧಿಕಾರಿಯವರ ತೆರವಾದ ಸ್ಥಾನಕ್ಕೆ ಪ್ರಭಾರವಾಗಿ ಅಧಿಕಾರವನ್ನು ಸ್ವೀಕರಿಸಿದ್ದು, ಅಂದಿನಿಂದ ಇಂದಿನವರೆಗೂ ಸುಮಾರು 16 ವರ್ಷಗಳ ಕಾಲ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಶ್ಲಾಘೀಸಿದರು. ಕಾರ್ಯವೈಖರಿಯಲ್ಲಿನ ಬದ್ಧತೆ, ಶ್ರದ್ಧೆ, ಸಮಯ ಪ್ರಜ್ಞೆ, ಪ್ರಾಮಾಣಿಕತೆ, ನಿಷ್ಠೆಯು ಅವರನ್ನು ಪ್ರಬುದ್ಧ ಸ್ಥಾನಕ್ಕೇರಿಸಿದ್ದು, ಇದೇ ರೀತಿಯ ಕಲಿಕೆಯ ಹಂಬಲವನ್ನು ಅಳವಡಿಸಿಕೊಂಡಾಗ ಎಲ್ಲಾ ಮೇಲ್ವಿಚಾರಕರು ತಮ್ಮ ಕರ್ತವ್ಯದಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯ ಎಂದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಲೀಲಾವತಿ, ತಮ್ಮ ಇಲಾಖೆಯಲ್ಲಿ ಸೇವೆ ಸಲ್ಲಿಸಿದವರನ್ನು ಇಲಾಖೆಯು ಎಂದೂ ಮರೆಯುವುದಿಲ್ಲ ಎಂಬ ಮಾತಿನಂತೆ ನಾನು ಕೂಡಾ ನನ್ನ ಜೊತೆ ಕೈಜೋಡಿಸಿದ ಎಲ್ಲಾ ಸಿಬ್ಬಂದಿಗಳನ್ನು ಮತ್ತು ಮೇಲ್ವಿಚಾರಕರನ್ನು ಮರೆಯುವುದಿಲ್ಲ. ತಮಗೆ ವಹಿಸಿದ ಕೆಲಸವನ್ನು ಶ್ರದ್ಧೆ ಹಾಗೂ ಪ್ರಾಮಾಣಿಕತೆಯಿಂದ ನಿರ್ವಹಿಸಿ ಅಧಿಕಾರಿಗಳು ಮತ್ತು ಸಾರ್ವಜನಿಕರ ಪ್ರೀತಿ-ವಿಶ್ವಾಸವನ್ನು ಗಳಿಸಲು ಪ್ರಯತ್ನಿಸಬೇಕು ಎಂದು ಕಿವಿಮಾತು ಹೇಳಿದರು. ಗ್ರಂಥಾಲಯವು ಇಲ್ಲಿಯವರೆಗೆ ಮೇಲ್ವಿಚಾರಕರ ಮತ್ತು ಸಾರ್ವಜನಿಕರ ಸಂಪರ್ಕ ಸೇತುವೆಯಾಗಿತ್ತು. ಆದರೆ ಇದೀಗ ಈ ಪಟ್ಟಿಗೆ ವಿದ್ಯಾರ್ಥಿಗಳು ಕೂಡಾ ಸೇರ್ಪಡೆಗೊಂಡಿದ್ದು, ಈ ನಿಟ್ಟಿನಲ್ಲಿ ಎಲ್ಲಾ ಮೇಲ್ವಿಚಾರಕರು ಅತ್ಯಂತ ಶ್ರದ್ಧೆಯಿಂದ ಮತ್ತು ತಾಳ್ಮೆಯಿಂದ ಕಾರ್ಯ ನಿರ್ವಹಿಸಬೇಕೆಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಕೇಂದ್ರ ಗ್ರಂಥಾಲಯದ ನೂತನ ಮುಖ್ಯ ಗ್ರಂಥಾಲಯಾಧಿಕಾರಿಗಳಾದ ಸುರೇಖಾ, ಮಡಿಕೇರಿ ಜಿಲ್ಲಾ ಗ್ರಂಥಾಲಯದ ಗ್ರಂಥಪಾಲಕರಾದ ನೇತ್ರಾವತಿ, ಕೊಡಗು ಜಿಲ್ಲಾ ಗ್ರಾಮ ಡಿಜಿ ವಿಕಸನದ ತರಬೇತಿಯ ಸಂಯೋಜಕ ರಕ್ಷಿತ್ ಮತ್ತು ದಿಲೀಪ್ ಮಾತನಾಡಿದರು. ಜಿಲ್ಲಾ ಕೇಂದ್ರ ಗ್ರಂಥಾಲಯದ ಸಹಾಯಕ ಗ್ರಂಥಪಾಲಕ ವಿಜಯ್ ನಾಗ್ ಅನುವಾದ ಮಾಡಿ ಬರೆದಿರುವ “ಹೃದಯ” ಎಂಬ ಕಾದಂಬರಿ ಪುಸ್ತಕವನ್ನು ಗಣ್ಯ ಅತಿಥಿಗಳ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಯಿತು. ಜಿಲ್ಲಾ ಕೇಂದ್ರ ಗ್ರಂಥಾಲಯ ಮತ್ತು ಅರಿವು ಕೇಂದ್ರಗಳ ಮೇಲ್ವಿಚಾರಕರ ಸಂಘದ ಅಧ್ಯಕ್ಷ ಜಿ.ಪಿ.ಚೇತನ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಂಟಿಕೊಪ್ಪದ ಎ.ಸೌಜತ್ , ವಾಲ್ನೂರಿನ ಟಿ.ಎಂ.ಜಲಜಾಕ್ಷಿ , ನೆರುಗಳಲೆಯ ಎ.ಡಿ.ಪದ್ಮಾವತಿ, ಎಂ.ಸಣ್ಣಮ್ಮ, ಹೆಚ್.ಜಿ.ಯಶೋಧಾ, ಪಿ.ಎಂ.ಪ್ರಿಯಾ, ಕದನೂರಿನ ಶೋಭಿಕಾ ಮತ್ತು ಬಲ್ಯಮಂಡೂರಿನ ಹೆಚ್.ಎಂ.ಲತಾ, ಸಂಘದ ಉಪಾಧ್ಯಕ್ಷರಾದ ಬಿ.ವಿ.ಸರಸ್ವತಿ, ಪ್ರಧಾನ ಕಾರ್ಯದರ್ಶಿ ಜಿ.ಆರ್.ಯೋಗೀಶ್, ಖಜಾಂಚಿ ಎಸ್.ಪಿ.ದಿವ್ಯಾ, ಕಾರ್ಯದರ್ಶಿ ಟಿ.ಬಿ.ಕೋಮಲ, ಜಂಟಿ ಕಾರ್ಯದರ್ಶಿ ಡಿ.ಜೆ. ಕವಿತಾ ಹಾಗೂ ಸಂಘಟನಾ ಕಾರ್ಯದರ್ಶಿ ಕೆ.ವಿ.ಸುಜೀತಾ ಹಾಜರಿದ್ದರು. ಎಸ್.ಬಿ.ಜಲಜಾಕ್ಷಿ ಪ್ರಾರ್ಥಿಸಿದರು. ಕರಡದ ರೆನಿ ಓ.ಎಫ್ ಸ್ವಾಗತಿಸಿದರು. ಹೆಚ್.ಎ.ವಸಂತಿ ಲೀಲಾವತಿ ಕಿರು ಪರಿಚಯ ಮಾಡಿದರು. ವೈ.ಎನ್. ರೂಪ ಕಾರ್ಯಕ್ರಮ ನಿರೂಪಿಸಿದರು. ಕೆ.ಎಂ.ಕಮಲಾಕ್ಷಿ ವಂದಿಸಿದರು.
Breaking News
- *ಕನ್ನಡ ಸಾಹಿತ್ಯ ಭವನ ನಿರ್ಮಾಣ : ಅಗತ್ಯ ಸಹಕಾರಕ್ಕೆ ಕೊಡಗು ಜಿಲ್ಲಾ ಕ.ಸಾ.ಪ ಮನವಿ*
- *ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ‘ಅರೆ ವಿಶೇಷ ಕೊಠಡಿ’ ಉದ್ಘಾಟನೆ : ಎಲ್ಲರಿಗೂ ಎಲ್ಲೆಡೆ ಆರೋಗ್ಯ ಸೌಲಭ್ಯ ದೊರೆಯಲಿ : ಶಾಸಕ ಡಾ.ಮಂತರ್ ಗೌಡ*
- *ಬೃಹತ್ ಭೂಪರಿವರ್ತನೆ, ಭೂವಿಲೇವಾರಿ, ಲೇಔಟ್, ಮೆಗಾ ಟೌನ್ಶಿಪ್ಗೆ ವಿರೋಧ : ಕಡಂಗದಲ್ಲಿ ಸಿಎನ್ಸಿಯಿಂದ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮ*
- *ಡಿ.8 ರಂದು ಮಡಿಕೇರಿಯಲ್ಲಿ ಸಂಸದರ ನೂತನ ಕಚೇರಿ ಆರಂಭ*
- *ಹುದಿಕೇರಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆ : ನೂತನ ಪದಾಧಿಕಾರಿಗಳ ಆಯ್ಕೆ*
- *ಬಿ.ಎಸ್.ಗೋಪಾಲಕೃಷ್ಣ ದತ್ತಿ ಪ್ರಶಸ್ತಿಗೆ ಕೃತಿಗಳ ಆಹ್ವಾನ*
- *ಕರಿಕೆ ಬಿಜೆಪಿ ಶಕ್ತಿ ಕೇಂದ್ರಕ್ಕೆ ಪದಾಧಿಕಾರಿಗಳ ಆಯ್ಕೆ*
- *ವೀರ ಸೇನಾನಿಗಳಿಗೆ ಅಗೌರವ : ಡಿ.6ರಂದು ಮಡಿಕೇರಿಯಲ್ಲಿ ಮಾಜಿ ಸೈನಿಕರಿಂದ ಪ್ರತಿಭಟನೆ*
- *‘ಸ್ವಾಭಿಮಾನಿ’ ಸಮಾವೇಶದಲ್ಲಿ ಕೊಡಗಿನಿಂದ 8 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಭಾಗಿ*
- *ಚೇಶೈರ್ ಹೋಮ್ ಶಾಲೆಯ ಮುಖ್ಯಶಿಕ್ಷಕ ಶಿವರಾಜ್ ಗೆ ಸನ್ಮಾನ*