ಮಡಿಕೇರಿ ಆ.20 NEWS DESK : ಅಮ್ಮತ್ತಿ ಬ್ಲೂಸ್ಟರ್ ವತಿಯಿಂದ 78ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ನಡೆದ ಮೂರನೇ ವರ್ಷದ 6+1 ಮುಕ್ತ ಫುಟ್ಬಾಲ್ ಪಂದ್ಯಾವಳಿಯಲ್ಲಿ ಅಮ್ಮತ್ತಿ ಕೆ-12 ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ದ್ವಿತೀಯ ಸ್ಥಾನಕ್ಕೆ ಬ್ಲೂ ಸ್ಟಾರ್ ತೃಪ್ತಿಪಟ್ಟುಕೊಂಡಿತು. ಅಮ್ಮತ್ತಿಯ ಜಿ.ಎಂ.ಪಿ.ಶಾಲಾ ಮೈದಾನದಲ್ಲಿ ನಡೆದ ರೋಚಕ ಪಂದ್ಯಾವಳಿಯಲ್ಲಿ ಒಟ್ಟು 12 ತಂಡಗಳು ಟ್ರೋಫಿಗಾಗಿ ಸೆಣಸಾಡಿದವು. ಬೆಸ್ಟ್ ಸ್ಟ್ರೈಕರ್ ರಾಕೇಶ್, ಬೆಸ್ಟ್ ಪ್ಲೇಯರ್‍ಆಗಿ ವಿಜು, ಬೆಸ್ಟ್ ಡಿಫೆಂಡರ್ ಸಾಲುಮ್, ಬೆಸ್ಟ್ ಗೋಲ್ ಕೀಪರ್ ಪ್ರೇಮ್, ಬೆಸ್ಟ್ ಸೀನಿಯರ್ ಪ್ಲೇಯರ್ ವಿನು, ಪ್ರಶಸ್ತಿಯನ್ನು ಪಡೆದುಕೊಂಡರು. ತೀರ್ಪುಗಾರರಾಗಿ ಹಿರಿಯ ಕ್ರೀಡಾಪಟು ಗಣೇಶ್ ಕಾರ್ಯನಿರ್ವಹಿಸಿದರು. ಪಂದ್ಯಾವಳಿಯನ್ನು ಅಮ್ಮತ್ತಿ ಚೌಡೇಶ್ವರಿ ನಗರದ ಗಣೇಶೋತ್ಸವ ಸಮಿತಿ ಅಧ್ಯಕ್ಷ ಸತೀಶ್ ಹಾಗೂ ಚೌಡೇಶ್ವರಿ ದೇವಾಲಯದ ಮಾಜಿ ಕಾರ್ಯದರ್ಶಿ ಹರೀಶ್ ಪಂದ್ಯಾವಳಿಯನ್ನು ಉದ್ಘಾಟಿಸಿ ಕ್ರೀಡಾಪಟುಗಳಿಗೆ ಶುಭಹಾರೈಸಿದರು. ಪ್ರಥಮ ವಿಜೇತರಿಗೆ ದಾನಿಗಳಾದ ಸಾಗರ್ ತಮ್ಮ ತಂದೆ ಆನಂದ್ (ಬಿ.ಎಸ್.ಎನ್.ಎಲ್) ಅವರ ಜ್ಞಾಪಕರ್ತವಾಗಿ ನೀಡಿದ ಟ್ರೋಫಿಯನ್ನು ಬಹುಮಾನವಾಗಿ ವಿತರಿಸಲಾಯಿತು. ದ್ವಿತೀಯ ವಿಜೇತರಿಗೆ ವಿರಾಜಪೇಟೆಯ 3 ಸ್ಟಾರ್ ಹೋಟೆಲ್‍ನ ಮಾಲೀಕ ಸುಬೆರ್ ನೀಡಿದ ಟ್ರೋಫಿಯನ್ನು ನೀಡಲಾಯಿತು. ವೈಯಕ್ತಿಕ ಬಹುಮಾನವನ್ನು ನಿತೇಶ್ ಮತ್ತು ರಾಮು, ಹರೀಶ್ ಅಮ್ಮತಿ ತಮ್ಮ ತಂದೆ ಮಹೇಶ್ ಅಂಧಾನಿ ಅವರ ಜ್ಞಾಪಕರ್ಥವಾಗಿ, ಅಮ್ಮತ್ತಿಯ ಸರೋಜ, ಮೋಹನ್, ಚಾಯ್ಸ್ ಎಲೆಕ್ಟ್ರಿಕಲ್‍ನ ಹನೀಫ್ ವಿತರಿಸಿದರು. ಪ್ರಥಮ ವಯಕ್ತಿಕ ಬಹುಮಾನವನ್ನು ಅಶ್ವತ್ ಅವರು ತಮ್ಮ ತಂದೆ ಚಂದನ್ ಅವರ ಜ್ಞಾಯಪಕರ್ತವಾಗಿ, ದ್ವಿತೀಯ ವಯಕ್ತಿಕ ಬಹುಮಾನವನ್ನು ಎಂ.ಜಿ.ಲಾಂಡ್ರಿ ಮಾಲೀಕ ಅಶೋಕ್ ಪೂಜಾರಿ ನೀಡಿದ್ದಾರೆ.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಶ್ರೀ ಚೌಡೇಶ್ವರಿ ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷ ಹೆಚ್.ಎಸ್.ವೆಂಕಟೇಶ್, ಖಜಾಂಚಿ ಹೆಚ್.ಕೆ.ಅವಿನಾಶ್, ಮಾಜಿ ಕಾರ್ಯದರ್ಶಿ ಹೆಚ್.ಕೆ.ಹರೀಶ್ ಅಂದಾನಿ ಹಾಗೂ ಗಣಪತಿ ಸೇವಾ ಸಮಿತಿಯ ಅಧ್ಯಕ್ಷ ವಿ.ಆರ್.ಸತೀಶ್, ಕಾಫಿ ಬೆಳೆಗಾರ ಪಾಲಯತಂಡ ಹರಿ, ಬಿ.ಶೇಷಮ್ಮ, ಎಸ್.ಆರ್.ಎಸ್ ಆಟೋ ಲಿಂಕ್ಸ್ ನ ಸಿ.ಎಂ.ರಶೀದ್, ಸಿದ್ದಾಪುರ ನಿಯೋನ್ ಕಾಫಿ ವಕ್ರ್ಸ್ ಕೆ.ವೈ.ಸಮೀರ್, ವಾಹನ ಚಾಲಕ ಟಿ.ಎ.ಅಶ್ರಫ್, ಪಾಲಿಬೆಟ್ಟ ತ್ರಿ ಸ್ಟಾರ್ ಮಾಲೀಕ ಝಬೈರ್, ಪ್ರಮುಖರಾದ ಎಸ್.ಶ್ರೀನಿವಾಸ್, ಹೆಚ್.ಎನ್.ಕಿರಣ ಹಾಜರಿದ್ದರು.