ಮಡಿಕೇರಿ ಆ.22 NEWS DESK : ಮಡಿಕೇರಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ. ಕೆ.ಶೈಲಶ್ರೀ ಅವರಿಗೆ ಶ್ರೀನಿವಾಸ ವಿಶ್ವವಿದ್ಯಾನಿಲಯ ಪೋಸ್ಟ್ ಡಾಕ್ಟರಲ್ ಪದವಿ ಲಭಿಸಿದೆ. ಇವರು ಪ್ರೊಫೆಸರ್ ಪಿ.ಎಸ್. ಐತ್ತಾಲ್, ಡೈರೆಕ್ಟರ್ ಪೂರ್ಣಪ್ರಜ್ಞ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ “ಅ ಎನಾಲಿಸಿಸ್ ಆಫ್ ಸೋಷಿಯೋ ಎಕನಾಮಿಕ್ ಫ್ಯಾಕ್ಟರ್ಸ್ ಎಫೆಕ್ಟಿಂಗ್ ಸೇವಿಂಗ್ಸ್ ಇನ್ವೆಸ್ಟ್ಮೆಂಟ್ ಹ್ಯಾಬಿಟ್ಸ್ ಅಂಡ್ ಸ್ಪೆಂಡಿಂಗ್ ಬಿಹೇವಿಯರ್- ಅ ಸ್ಟಡಿ ವಿದ್ ರೆಫರೆನ್ಸ್ ಟು ವಿಮೆನ್ ಟೀಚರ್ಸ್ ಇನ್ ಕೊಡಗು ಡಿಸ್ಟ್ರಿಕ್ಟ್ ಆಫ್ ಕರ್ನಾಟಕ” ಎಂಬ ಸಂಶೋಧನಾ ಪ್ರಬಂಧಕ್ಕೆ ಶ್ರೀನಿವಾಸ ವಿಶ್ವವಿದ್ಯಾನಿಲಯ ಪೋಸ್ಟ್ ಡಾಕ್ಟರಲ್ ಪದವಿಯನ್ನು ನೀಡಿ ಗೌರವಿಸಿದೆ.









