ಮಡಿಕೇರಿ ಆ.22 NEWS DESK : ಕೊಡವ ಕೂಟಾಳಿಯಡ ಕೂಟದ ಮಹಾಸಭೆ ಹಾಗೂ ಆಡಳಿತ ಮಂಡಳಿಯ ಚುನಾವಣೆ ವಿರಾಜಪೇಟೆಯ ಕೊಡಗು ಉಪಾಧ್ಯಾಯರ ಸಹಕಾರ ಸಭಾಂಗಣದಲ್ಲಿ ನಡೆಯಿತು. ಸಂಘಟನೆಯ ಅಧ್ಯಕ್ಷರಾದ ಚಂಗುಲಂಡ ಸೂರಜ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸಂಘಟನೆಯ ನೂತನ ಅಧ್ಯಕ್ಷರಾಗಿ ಚೆಟ್ಟೋಳಿರ ಶರತ್ ಸೋಮಣ್ಣ, ಉಪಾಧ್ಯಕ್ಷರಾಗಿ ಬೊಜ್ಜಂಗಡ ಚೆಂಗಪ್ಪ, ಕಾರ್ಯದರ್ಶಿಯಾಗಿ ಕಬ್ಬಚ್ಚಿರ ರಶ್ಮಿ ಕಾರ್ಯಪ್ಪ, ಖಜಾಂಚಿಯಾಗಿ ಬೊಜ್ಜಂಗಡ ಭವ್ಯ ದೇವಯ್ಯ, ಸಲಹೆಗಾರರಾಗಿ ಚೊಟ್ಟಂಡ ಪ್ರಭು ಸೋಮಯ್ಯ, ನಿರ್ದೇಶಕರಾಗಿ ಕಾಂಗಿರ ಸಂತೋಷ್ ದೇವಯ್ಯ, ಅಮ್ಮಾಟಂಡ ಚೇತನ್, ಕಾಳಮಂಡ ರಾಬಿನ್, ನೂರೆರ ಸರಿತ ಉತ್ತಯ್ಯ, ಕೊಟ್ಟಂಗಡ ಕವಿತ ವಾಸುದೇವ ಹಾಗೂ ಮಾಚಿಮಾಡ ಡಿಂಪಲ್ ವಾಸು ಅಧಿಕಾರ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಸಂಘಟನೆಯ ಸ್ಥಾಪಕ ಅಧ್ಯಕ್ಷೆ ಚಿಮ್ಮಚ್ಚಿರ ಪವಿತ ರಜನ್ ಹಾಗೂ ಸದಸ್ಯರು ಹಾಜರಿದ್ದರು.










