ವಿರಾಜಪೇಟೆ ಸೆ.3 NEWS DESK : ಆತ್ಮರಕ್ಷಣೆ ಕಲೆಯನ್ನು ಜೀವಂತವಾಗಿರಿಸುವ ನಿಟ್ಟಿನಲ್ಲಿ ಗೋಜೂ ರ್ಯೂ ಕರಾಟೆ ತರಬೇತಿ ಶಾಲಾ ವಿದ್ಯಾರ್ಥಿಗಳಿಗೆ ಕೊಬುಡೋ (ದಂಡ ವರಸೆ) ಒಂದು ದಿನದ ಶಿಬಿರ ನಡೆಯಿತು. ಗೋಜೂ ರ್ಯೂ ಕರಾಟೆ ತರಬೇತಿ ಶಾಲೆ ವತಿಯಿಂದ ನಗರದ ತೆಲುಗರ ಬೀದಿಯಲ್ಲಿರುವ ಕೂರ್ಗ್ ವ್ಯಾಲಿ ಶಾಲೆಯ ಆವರಣದಲ್ಲಿ ಇಂಡಿಯ ಕೊಬುಡೋ ತರಬೇತಿಯ ಮುಖ್ಯ ಶಿಕ್ಷಕ ಸನ್ಸಾಯಿ ಟಿ.ಡಿ.ಜಾನ್ಸನ್ ವಿದ್ಯಾರ್ಥಿಗಳಿಗೆ ಕೊಬುಡೋ (ದಂಡವರಸೆ) ತರಬೇತಿ ನೀಡಿದರು. ನಂತರ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಮಾಣ ಪತ್ರ ನೀಡಿ ಮಾತನಾಡಿದ ಅವರು ಕೊಬುಡೋ ಜಪಾನ್ ದೇಶದ ಪಾರಂಪರಿಕ ಸಮರ ಕಲೆಯಾಗಿದ್ದು, ಇದನ್ನು ಆತ್ಮರಕ್ಷಣೆಗಾಗಿ ಬಳಸಲಾಗುತ್ತಿತ್ತು. ಭಾರತ ದೇಶದಲ್ಲಿಯು ಕಲೆಯನ್ನು ಪರಿಚಯಿಸಿ. ರಕ್ಷಣಾ ಕಲೆಯಲ್ಲಿ ದೃಢತೆಯನ್ನು ಹೊಂದಲಾಯಿತು. ಸಮರ ಕಲೆಯನ್ನು ಜೀವಂತವಾಗಿರಿಸಿ, ಕಲೆಯನ್ನು ಕಲಿತು ಮಾನಸಿಕವಾಗಿ ದೈಹಿಕವಾಗಿ ಸದೃಢರಾಗಬೇಕು ಎಂದು ವಿದ್ಯಾರ್ಥಿಗಳಿಗೆ ಹೇಳಿದರು. ಗೊಜೂ ರ್ಯೂ ತರಬೇತಿ ಶಾಲೆಯ ಮುಖ್ಯ ಶಿಕ್ಷಕ ಎಂ.ಬಿ.ಚಂದ್ರನ್ ಮಾತನಾಡಿ, ಕರಾಟೆಯಲ್ಲಿ ವಿವಿಧ ಪ್ರಕಾರಗಳು ಇರುವಂತೆ ಕೊಬುಡೋ ಒಂದು ವಿಶಿಷ್ಟ ಕಲೆಯಾಗಿದೆ. ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಕಲೆಯನ್ನು ಪರಿಚಯಿಸಲಾಗಿದೆ. ವಿದ್ಯಾರ್ಥಿಗಳು ವಿಶಿಷ್ಟ ಕಲೆಯನ್ನು ಕಲಿಯಲು ಆಸಕ್ತರಾಗಿದ್ದು, ಕೊಬುಡೋ ಮುಖ್ಯ ಶಿಕ್ಷಕರಿಂದ ತರಬೇತಿ ನೀಡಲಾಗುತ್ತಿದೆ ಎಂದರು. ಕೊಬುಡೋ ತರಬೇತಿದಾರ ಮೋಹನ್ ದಾಸ್ ತ್ರಿಸೂರ್ ಕೇರಳ, ಸಿ.ಹೆಚ್.ಸೆಂಪಾಯಿ, ಬಶೀರ್, ಸೋನಿಕಾ, ಹರಿಕೃಷ್ಣನ್, ಆಕಾಶ್ ಹಾಗೂ ತರಬೇತಿ ಶಾಲೆಯ 21 ವಿಧ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದರು.