ಕುಶಾಲನಗರ ಸೆ.3 NEWS DESK : ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ಬಸವೇಶ್ವರ ಬಡಾವಣೆಯಲ್ಲಿ ಪಂಚಾಯಿತಿ ವತಿಯಿಂದ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿದ್ದು, ವಾರ್ಡ್ ಸದಸ್ಯರಾದ ಕೆ.ಬಿ.ಶಂಶುದ್ಧೀನ್ ಕಾಮಗಾರಿ ಪರಿಶೀಲನೆ ನಡೆಸಿದರು. ನಂತರ ಮಾತನಾಡಿದ ಅವರು, 15ನೇ ಹಣಕಾಸಿನಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿ ನಡೆಸಲಾಗಿದ್ದು, ಮಣಿಮಾಲ ಕುಬೇರರವರ ಮನೆಯಿಂದ ಅಕ್ಕಮ್ಮ ಅವರ ಮನೆವೆರೆಗೆ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ. ವಾರ್ಡ್ ನಂಬರ್ ಎರಡರಲ್ಲಿ ಸುಂದರನಗರ, ಬಸವೇಶ್ವರ ಬಡಾವಣೆ, ನವಗ್ರಾ ಹಾಗೂ ವಿನಾಯಕ ಬಡಾವಣೆ ಇದೆ. ವಾರ್ಡ್ ವ್ಯಾಪ್ತಿ ದೊಡ್ಡದಾಗಿದ್ದು, ಹಂತಹಂತವಾಗಿ ವಾರ್ಡನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು. ಈ ಸಂದರ್ಭ ಬಸವೇಶ್ವರ ಬಡಾವಣೆ ನಿವಾಸಿಗಳು ಇದ್ದರು.










