ಸಿದ್ದಾಪುರ NEWS DESK ಸೆ.3 : ಜಿಲ್ಲೆಯ ಮುಸ್ಲಿಂ ಸಮುದಾಯದ ಸಮಗ್ರ ಅಭಿವೃದ್ಧಿ, ಸುಧಾರಣೆ ಮತ್ತು ಸಮಸ್ಯೆಗಳ ಪರಿಹಾರಕ್ಕಾಗಿ ಸುನ್ನಿ ವಿಭಾಗದ ಎರಡು ಪಂಗಡಗಳ ಮುಖಂಡರುಗಳು ಒಗ್ಗೂಡಿ ಕೊಡಗು ಜಿಲ್ಲಾ ಮಟ್ಟದ ಸುನ್ನಿ ಸಮನ್ವಯ ಸಮಿತಿಯನ್ನು ರಚಿಸಿದ್ದಾರೆ. ನೆಲ್ಯಹುದಿಕೇರಿ ಕೋಪಿಯೋ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸಮಸ್ತ ಕೊಡಗು ಜಂಮ್ಯತ್ತುಲ್ ಉಲಮ ಅಧ್ಯಕ್ಷ ಎಂ.ಎಂ.ಅಬ್ದುಲ್ಲಾ ಫೈಝಿ ಉಸ್ತಾದ್ ಹಾಗೂ ಕೂರ್ಗ್ ಜಂಮ್ಯತ್ತುಲ್ ಉಲಮ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಹ್ಸನಿ ಉಸ್ತಾದ್ ಅವರ ನೇತೃತ್ವದಲ್ಲಿ ಉಪಾಧ್ಯಕ್ಷರುಗಳಾಗಿ ಕೆ.ಎ.ಯಾಕುಬ್ ಬಜೆಗುಂಡಿ, ಪಿ.ಎಂ.ಅಬ್ದುಲ್ ಲತೀಫ್ ಸುಂಟಿಕೊಪ್ಪ, ಸಂಚಾಲಕರುಗಳಾಗಿ ಹಫೀಲ್ ಸಹದಿ ತಣ್ಣೀರ್ ಹಳ್ಳ, ಉಮ್ಮರ್ ಪೈಝಿ ಸಿದ್ದಾಪುರ, ಪ್ರಚಾರ ಸಮಿತಿ ಪ್ರತಿನಿಧಿಗಳಾಗಿ ಹನೀಫ್ ಸಖಾಫಿ ಕೊಂಡಂಗೇರಿ, ಸಿ.ಎಂ.ಹಮೀದ್ ಮೌಲವಿ ಸುಂಟಿಕೊಪ್ಪ ಸೇರಿದಂತೆ ಸುನ್ನತ್ ಜಮಾಆತ್ ನ 32 ಮುಖಂಡರುಗಳನ್ನು ಕಾರ್ಯಕಾರಿ ಸಮಿತಿಗೆ ಆಯ್ಕೆ ಮಾಡಲಾಯಿತು. ಶಾಫಿ, ಹನಫಿ ಪಂಗಡಗಳ 150ಜಮಾಆತ್ ಆಡಳಿತ ಮಂಡಳಿಯವರನ್ನು ಒಗ್ಗೂಡಿಸಿ ಮಹಲ್ ಸಂಗಮ ಕಾರ್ಯಕ್ರಮವನ್ನು ಅ.22 ರಂದು ಸುಂಟಿಕೊಪ್ಪದಲ್ಲಿ ಆಯೋಜಿಸಲು ಸಭೆ ನಿರ್ಧರಿಸಿತು.










