ಮಡಿಕೇರಿ ಸೆ.4 NEWS DESK : ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಾಗೂ ಕುಶಾಲನಗರದ ನಾಗೇಗೌಡ ಬಡಾವಣೆಯ ಕಾವೇರಿ ಸ್ವ ಸಹಾಯ ಸಂಘದ ವತಿಯಿಂದ “ವಚನಗಾರ್ತಿ ಅಕ್ಕಮಹಾದೇವಿ” ಚಿಂತನಾ ಗೋಷ್ಠಿ ನಡೆಯಿತು. ಕಾರ್ಯಕ್ರಮದಲ್ಲಿ ಕುಶಾಲನಗರದ ನಿವೃತ್ತ ಪ್ರಾಂಶುಪಾಲೆ ಡಾ.ಬಿ.ಆರ್.ಶಾಂತಲಕ್ಷ್ಮಿ ಮಾತನಾಡಿ, ಅಕ್ಕಾಮಹಾದೇವಿ ರಚಿಸಿರುವ 400ಕ್ಕೂ ಹೆಚ್ಚಿನ ವಚನಗಳು ಮನುಕುಲದ ದೀವಿಗೆಗಳಾಗಿವೆ ಎಂದು ವಿಶ್ಲೇಷಿಸಿದರು. ನಿವೃತ್ತ ಶಿಕ್ಷಕಿ ಪೊನ್ನಚ್ಚನ ಲತಾ ಅಪ್ಪಣ್ಣ ಹಾಗೂ ಮುಕ್ಕಾಟಿ ಧರಣಿ ಮಾತನಾಡಿ, ಹನ್ನೆರಡನೇ ಶತಮಾನದಲ್ಲಿ ಶರಣರು ಸಾರಿ ಹೋಗಿರುವ ವಚನಗಳ ಸಂದೇಶಗಳನ್ನು ಶಾಲಾ ಮಕ್ಕಳಿಗೆ ವಿವರಿಸಿ ಕಲಿಸಿದಲ್ಲಿ ಮಾತ್ರ ಸಂಸ್ಕಾರವಂತ ಸಮಾಜ ಹಾಗೂ ಶರಣರು ಬಯಸಿದ ಆದರ್ಶ ಸಮಾಜ ಕಟ್ಟಲು ಸಾಧ್ಯವಾಗುತ್ತದೆ. ಮಕ್ಕಳಿಗೆ ಎಲ್ಲಾ ತಾಯಂದಿರು ವಚನಗಳನ್ನು ಕಲಿಸಲು ಮನವಿ ಮಾಡಿದರು. ಕುಶಾಲನಗರ ತಾಲ್ಲೂಕು ಕದಳಿ ವೇದಿಕೆ ಅಧ್ಯಕ್ಷೆ ಹೇಮಲತಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಕದಳಿ ವೇದಿಕೆಯ ಗೌರವಾಧ್ಯಕ್ಷೆ ವಿಜಯ ಪಾಲಾಕ್ಷ, ಕೋಶಾಧಿಕಾರಿ ಜಿ.ಎಸ್.ವೇದಾವತಿ, ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಕೆ.ಎಸ್.ಮೂರ್ತಿ, ಪ್ರಧಾನ ಕಾರ್ಯದರ್ಶಿ ಬಿ.ನಟರಾಜು, ಕಾವೇರಿ ಸ್ವಸಹಾಯ ಸಂಘದ ಪ್ರಮುಖರಾದ ನಿವೃತ್ತ ಶಿಕ್ಷಕಿ ಮೊಳ್ಳೇರಾ ಪಾರ್ವತಿ, ರೇಖಾ ನಟರಾಜು, ನಂದಿನಿ, ಕಾಮಾಕ್ಷಿ, ವೇದಾವತಿ, ಕಾಂತಾ, ದೇವಕಿ, ಪುಟ್ಟಲಿಂಗಮ್ಮ, ಶಿವಮ್ಮ, ಜಯಲಕ್ಷ್ಮಿ, ಸರೋಜಾ ಆರಾಧ್ಯ, ಮೊದಲಾದವರಿದ್ದರು. ಸರೋಜಾ ಆರಾಧ್ಯ ಸ್ವಾಗತಿಸಿದರು. ಮಮತಾ ರವೀಶ್ ವಂದಿಸಿದರು.