ವಿರಾಜಪೇಟೆ ಸೆ.9 NEWS DESK : ವಿರಾಜಪೇಟೆ ಪಟ್ಟಣದ ಪುರಾತನ ಕ್ರೈಸ್ತ ದೇವಾಲಯವಾದ ಸಂತ ಅನ್ನಮ್ಮ ಚರ್ಚ್ ನಲ್ಲಿ ಮೇರಿ ಮಾತೆಯ ಜನ್ಮದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಸಂತ ಅನ್ನಮ್ಮ ಚರ್ಚ್ ನ ಪ್ರಧಾನ ಧರ್ಮಗುರುಗಳಾದ ರೆ.ಫಾ.ಜೇಮ್ಸ್ ಡೊಮಿನಿಕ್ ಹಾಗೂ ಸಂತ ಅನ್ನಮ್ನ ಪಿ.ಯು. ಕಾಲೇಜಿನ ಪ್ರಾಂಶುಪಾಲರು ಹಾಗೂ ಧರ್ಮಗುರುಗಳಾದ ರೆ.ಫಾ. ಮದಲೈ ಮುತ್ತು ಅವರ ನೇತೃತ್ವದಲ್ಲಿ ಮುಂಜಾನೆಯಿಂದಲೇ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಬೆಳಿಗ್ಗೆ ದಿವ್ಯ ಪ್ರಾರ್ಥನೆ ಹಾಗೂ ಧರ್ಮಗುರುಗಳಿಂದ ಪ್ರವಚನವು ನಡೆಯಿತು. ಗಾಯನ ವೃಂದದವರು ಪ್ರಾರ್ಥನೆಯನ್ನು ಮಾಡಿದರು. ಧರ್ಮಗುರುಗಳು ಲೋಕದಾದ್ಯಂತ ಸುಖ, ಶಾಂತಿ, ನೆಮ್ಮದಿ ನೆಲೆಸಲಿ ಎಂದು ಪ್ರಾರ್ಥಿಸಿದರು. ಚರ್ಚ್ ನ ಬಲಿಪೀಠದ ಬಳಿ ಹೂವುಗಳಿಂದ ಅಲಂಕರಿಸಲಾಗಿತ್ತು. ವಿಶೇಷ ಪ್ರಾರ್ಥನೆಯ ಬಳಿಕ ಧರ್ಮಗುರುಗಳ ಸಮ್ಮುಖದಲ್ಲಿ ಭಕ್ತರು ಚರ್ಚ್ ಅವರಣದಲ್ಲಿರುವ ಮೇರಿ ಮಾತೆಯ ಮೂರ್ತಿಗೆ ಪುಷ್ಪರ್ಚನೆ ಯನ್ನು ಮಾಡಿದರು. ಈ ಸಂದರ್ಭ ಚರ್ಚ್ ಪಾಲನಾ ಸಮಿತಿಯವರು, ಕನ್ಯಾ ಸ್ತ್ರೀಯರು, ಭಕ್ತಾದಿಗಳು ಉಪಸ್ಥಿತರಿದ್ದರು. ಹಬ್ಬದ ಪ್ರಯುಕ್ತ ನೆರೆದಿದ್ದ ಭಕ್ತರಿಗೆ ಅನ್ನದಾನ ಜರುಗಿತು. ಹಬ್ಬದ ಪ್ರಯುಕ್ತ ಕಳೆದ ಒಂಬತ್ತು ದಿವಸಗಳಿಂದ ನವೆನಾ ಪ್ರಾರ್ಥನೆ ಹಾಗೂ ಪುಷ್ಪರ್ಚನೆ ನೆರವೇರಿತು.