ವಿರಾಜಪೇಟೆ ಸೆ.9 NEWS DESK : ಆರ್ಜಿ ಗ್ರಾಮದ ಕಲ್ಲುಬಾಣೆಯ ದಾರುಲ್ ಇಸ್ಲಾಂ ಮದ್ರಸದ ಹಳೆಯ ಮತ್ತು ಶೈಕಣಿಕ ಸಾಲಿನ ವಿದ್ಯಾರ್ಥಿಗಳಿಂದ ಸ್ವಚ್ಛತಾ ಶ್ರಮದಾನ ನಡೆಯಿತು. ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ 1499ನೇ ಹುಟ್ಟಿದ ದಿನದ ಈದ್ ಮಿಲಾದ್ ಅಂಗವಾಗಿ ವಿರಾಜಪೇಟೆ ಮುಖ್ಯ ರಸ್ತೆಯಿಂದ ಕಲ್ಲುಬಾಣೆಯ ಮಸೀದಿವರೆಗೆ ರಸ್ತೆಯಲ್ಲಿ ಬೆಳೆದು ನಿಂತ ಕಾಡು ಗಿಡಗಂಟಿಗಳನ್ನು ತೆಗೆದು ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಹೆಕ್ಕಿ ಸ್ವಚ್ಛಗೊಳಿಸಿದರು. ಮಳೆಯಿಂದ ರಸ್ತೆಗಳಲ್ಲಿ ಉಂಟಾದ ಗುಂಡಿಗಳಿಗೆ ಕಲ್ಲು ಮಣ್ಣುಗಳನ್ನು ಹಾಕಿ ಮುಚ್ಚಿದರು. ಈ ಸಂದರ್ಭ ವಿದ್ಯಾರ್ಥಿಗಳಾದ ಶೀಯಾಜ್, ಅಜರುದ್ದಿನ್, ಯಾಯಿಯ, ರಷೀದ್, ಕುಟ್ಟಾಪಿ, ನಿಜಾಂ, ತಸ್ನಿಂ, ಆಲಿ, ಅಶ್ರಪ್, ಶಂಷಿರ್, ಶಮಿರ್, ಸೇರಿದಂತೆ ಅನೇಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.