ಮಡಿಕೇರಿ ಸೆ.9 NEWS DESK : ಭಾಗಮಂಡಲ ಕೆವಿಜಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಸಂಸ್ಥೆಗೆ 2024-26 ನೇ ಶೈಕ್ಷಣಿಕ ಸಾಲಿಗೆ ದಾಖಲಾದ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಕೋರುವ ಮತ್ತು ಪೋಷಕರ ಸಭೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಕೆ.ವಿ.ಶ್ರೀಕಾಂತ್ ನೂತನ ತರಬೇತಿದಾರರಿಗೆ ಸಂಸ್ಥೆಯ ನೀತಿ ನಿಯಮಗಳ ಬಗ್ಗೆ ಮತ್ತು ಪೋಷಕರಿಗೆ ಅವರ ಜವಾಬ್ದಾರಿಯ ಬಗ್ಗೆ ಮಾರ್ಗದರ್ಶನ ನೀಡಿದರು. ಕಿರಿಯ ತರಬೇತಿ ಅಧಿಕಾರಿ ಪುನೀತ್ ಕುಮಾರ್ ಸಂಸ್ಥೆ ಮತ್ತು ತರಬೇತಿ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಕಿರಿಯ ತರಬೇತಿ ಅಧಿಕಾರಿ ಕೆ.ಸಿ.ಉದಯಕುಮಾರ್ ಸ್ವಾಗತಿಸಿದರು. ಕಿರಿಯ ತರಬೇತಿ ಅಧಿಕಾರಿ ಕೆ.ಜಿ.ಜಯಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.