ಮಡಿಕೇರಿ ಸೆ.14 NEWS DESK : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆಯ ವತಿಯಿಂದ ಮಿಷನ್ ಶಕ್ತಿ ಯೋಜನೆಯಡಿ “ಬೇಟಿ ಬಚಾವೊ ಬೇಟಿ ಪಡಾವೋ” ಕಾರ್ಯಕ್ರಮದಡಿಯಲ್ಲಿ ತಾಲ್ಲೂಕು ಮಟ್ಟದಲ್ಲಿ ಅಪೌಷಿಕ್ಟ ಮಕ್ಕಳ ಆರೋಗ್ಯ ತಪಾಸಣಾ ಶಿಬಿರವು ಕುಶಾಲನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆಯಿತು. ಕುಶಾಲನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಮಕ್ಕಳ ತಜ್ಞ ಡಾ.ಶಿವಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳ ಪಾಲನೆ ಪೋಷಣೆಯಲ್ಲಿ ಪೋಷಕರ ಪಾತ್ರ ಮುಖ್ಯ. ಆದರೆ ಪ್ರಸ್ತುತ ದಿನಗಳಲ್ಲಿ ಪೋಷಕರು ಉದ್ಯೋಗದಲ್ಲಿ ತಮ್ಮನ್ನು ತಾವು ಹೆಚ್ಚು ತೊಡಗಿಸಿಕೊಳ್ಳುತ್ತಿರುವುದರಿಂದ ಅಪೌಷ್ಟಿಕ ಮಕ್ಕಳ ಸಂಖ್ಯೆಯಲ್ಲಿ ಹೆಚ್ಚಾಗಿದೆ. ಮಕ್ಕಳನ್ನು ಶಾಂತವಾಗಿರಿಸಲು ಸಿಹಿತಿನಿಸು, ಬಿಸ್ಕೆಟ್, ಚಿಪ್ಸ್ ಇಂತಹ ಖರೀದಿಸಿದ ಪದಾರ್ಥ ನೀಡುತಿದ್ದಾರೆ. ಇದರಿಂದ ಮಕ್ಕಳು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದ್ದರಿಂದ ಈ ಬಗ್ಗೆ ಮಕ್ಕಳ ಎಲ್ಲಾ ತಾಯಂದಿರು ಮಕ್ಕಳಿಗೆ ಹೆಚ್ಚು ಒತ್ತು ನೀಡುವ ಮೂಲಕ ಮನೆಯಲ್ಲಿ ತಯಾರಿಸಿದ ಆಹಾರ ಪಾದರ್ಥಗಳನ್ನು ನೀಡುವುದು ಉತ್ತಮ ಹಾಗೂ ಮಕ್ಕಳಿಗೆ ಪೌಷ್ಟಿಕ ಆಹಾರ ಜೊತೆ ಹಣ್ಣುಗಳು, ಮೊಟ್ಟೆ, ಕಾಳುಗಳನ್ನು, ಹಾಲು ನೀಡಿ ಹಾಗೂ ಮಕ್ಕಳ ಸ್ವಚ್ಛತೆ ಕಾಪಾಡಿ ಎಂದು ಹೇಳಿದರು. ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ನಟರಾಜ್, ಮಹಿಳಾ ಮತ್ತು ಮಕ್ಕಳ ಇಲಾಖೆಯಲ್ಲಿರುವ ಭಾಗ್ಯ ಲಕ್ಷ್ಮಿ/ಸುಖನ್ಯ ಸಮೃದ್ದಿ, ಮಾತೃಂದನಾ, ಯೋಜನೆಯ ಕುರಿತು ಮಾಹಿತಿ ನೀಡಿದರು. ಹಾಗೆಯೇ ಪೂರಕ ಪೌಷ್ಟಿಕ ಆಹಾರ, ಹಾಲು ಮತ್ತು ಮೊಟ್ಟೆಗಳನ್ನು ನೀಡುತ್ತಿದ್ದು ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು. ಪೋಷಕರು ಇತ್ತೀಚೆಗೆ ಮಕ್ಕಳ ಕೈಗೆ ಮೊಬೈಲ್ ಫೋನ್‍ಗಳನ್ನು ನೀಡುತ್ತಿದ್ದು ಇದರಿಂದ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಬಹುದು ಮತ್ತು ದಿನನಿತ್ಯದ ಚುಟುವಟಿಕೆಗಳಲ್ಲಿ ಆಸಕ್ತಿ ಕಡಿಮೆಯಾಗಬಹುದು. ಅದರ ಬದಲಾಗಿ ಉತ್ತಮ ಪರಿಸರ, ಪ್ರಾಣಿ, ಪಕ್ಷಿಗಳ ಕಡೆ ಮಕ್ಕಳ ಮನವೊಲಿಸಿ ಬದಲಿಸುವುದರೊಂದಿಗೆ ಉತ್ತಮ ಸಾಮಾಜದ ನಿರ್ಮಾಣಕ್ಕೆ ಸಾಧ್ಯವಾಗುತ್ತದೆ ಹಾಗೂ ಮಗುವಿನ ಆರೋಗ್ಯವನ್ನು ಕೂಡ ಕಾಪಾಡಿಕೊಳ್ಳಲು ಸಹಕಾರಿ ಎಂದು ತಿಳಿಸಿದರು. ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದರೆ ಜಿಲ್ಲಾಸ್ಷತ್ರೆಯಲ್ಲಿ Nutrition Rehabilitation Center ಇದ್ದು, ಹೆಚ್ಚಿನ ಆರೊಗ್ಯದ ಕಾಳಜಿಗಾಗಿ ಮಕ್ಕಳನ್ನು ದಾಖಲಿಸಬಹುದು ಎಂದರು. ಕಾರ್ಯಕ್ರಮದಲ್ಲಿ ಸೋಮವಾರಪೇಟೆ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀದೇವಿ ಮುದೋಳ್, ಮೇಲ್ವಿಚಾರಕಿ ಸಾವಿತ್ರವ್ವ, ಜೆಂಡರ್ ಸ್ಷೆಷಲಿಸ್ಟ್ ಎಸ್.ಆರ್.ಕೇಶಿನಿ, ಪೋಷಣಾಭಿಯಾನ ತಾಲ್ಲೂಕು ಸಂಯೊಜಕರಾದ ರಂಜಿತ, ಆರೋಗ್ಯ ಇಲಾಖೆಯ ಡಯಟಿಷಿಯನ್ ನಯನಾ ಹಾಗೂ ಹೇಮಲತಾ, ನಸಿರ್ಂಗ್ ಆಪಿಸರ್ ಕೋಹಿಮ್ಸ್ ಮಕ್ಕಳ ಪೋಷಕರು ಹಾಜರಿದ್ದರು. ಅಂಗನವಾಡಿ ಕಾರ್ಯಕರ್ತೆಯರಾದ ಸಾವಿತ್ರಿ ನಿರೂಪಿಸಿದರು. ಜ್ಯೋತಿ ಸ್ವಾಗತಿಸಿದರು, ಚಂದ್ರಿಕಾ ಪ್ರಾರ್ಥಿಸಿದರು.










