
ಮೂರ್ನಾಡು ಸೆ.14 NEWS DESK : ಪಾಲೆಮಾಡುವಿನಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗೌರಿ-ಗಣೇಶ ಮೂರ್ತಿಯ ವಿಸರ್ಜನೋತ್ಸವವು ಶ್ರದ್ಧಾಭಕ್ತಿಯಿಂದ ಜರುಗಿತು. ಪಾಲೆಮಾಡುವಿನ ಶ್ರೀ ಏಕದಂತ ಸೇವಾ ಸಮಿತಿಯ ವತಿಯಿಂದ 9ನೇ ವರ್ಷ ಪ್ರತಿಷ್ಠಾಪಿಸಲಾಗಿದ್ದ ಗಣೇಶಮೂರ್ತಿಗೆ ಮೂರುದಿನಗಳ ಕಾಲ ವಿವಿಧ ಧಾರ್ಮಿಕ ಪೂಜೆ ಸಲ್ಲಿಸಲಾಯಿತು. ನಂತರ ಅಲಂಕೃತ ಮಂಟಪದಲ್ಲಿ ಉತ್ಸವಮೂರ್ತಿಯನ್ನು ಪಾಲೆಮಾಡುವಿನ ಮುಖ್ಯಬೀದಿಗಳಲ್ಲಿ ಶೋಭಯಾತ್ರೆಯೊಂದಿಗೆ ಬಲಮುರಿಯ ಕಾವೇರಿನದಿಯಲ್ಲಿ ವಿಸರ್ಜಿಸಲಾಯಿತು. ಈ ಸಂದರ್ಭ ಏಕದಂತ ಸೇವಾ ಸಮಿತಿಯ ಅಧ್ಯಕ್ಷ ಎಂ.ಸಿ.ದಿನೇಶ್, ಉಪಾಧ್ಯಕ್ಷ ಶರವಣ, ಕಾರ್ಯದರ್ಶಿ ಟಿ.ಆರ್.ರಮೇಶ್, ಖಜಾಂಚಿ ಕಾಳಪ್ಪ ಹಾಗೂ ಸರ್ವಸದಸ್ಯರು, ಸುತ್ತಮುತ್ತಲಿನ ಗ್ರಾಮಸ್ಥರು ಶೋಭಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ವರದಿ : ಟಿ.ಸಿ.ನಾಗರಾಜ್, ಮೂರ್ನಾಡು










