ವಿರಾಜಪೇಟೆ ಫೆ.14 NEWS DESK : ಬೇಟೋಳಿ ರಾಮನಗರದ ಪುದುಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದ ಆವರಣದಲ್ಲಿರುವ ಶ್ರೀ ಗಣಪತಿ ದೇವಾಲಯದ ಶ್ರೀ ಗೌರಿ ಗಣೇಶ ಮೂರ್ತಿಗಳ ವಿಸರ್ಜನೋತ್ಸವವು ಸಂಭ್ರಮದಿಂದ ನಡೆಯಿತು. 42ನೇ ವರ್ಷದ ಗಣೇಶೋತ್ಸವದ ಪ್ರಯುಕ್ತ ಏಳು ದಿನಗಳ ಕಾಲ ದೇವಾಲಯದಲ್ಲಿ ವಿಶೇಷ ಪೂಜೆ, ಅನ್ನದಾನ ಸೇವೆಗಳು ಜರುಗಿತು ವಿಸರ್ಜನೋತ್ಸವದಂದು ಮುಂಜಾನೆಯಿಂದಲೇ ವಿವಿಧ ಪೂಜಾ ಧಾರ್ಮಿಕ ಪೂಜಾ ಕೈಂಕರ್ಯಗಳು ನೆರವೇರಿತು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಸೇವೆಗಳು ನಡೆದವು. ನಂತರ ಧಾರ್ಮಿಕ ಕಾರ್ಯಕ್ರಮದ ಬಳಿಕ ಗೌರಿ ಗಣೇಶ ಮೂರ್ತಿಯನ್ನು ಹೂವಿನ ಅಲಂಕೃತ ಮಂಟಪದಲ್ಲಿ ಪ್ರತಿಷ್ಠಾಪಿಸಿ ಶೋಭಯಾತ್ರೆಯ ಮೂಲಕ ತೆರಳಿ ಸಮೀಪದ ಮೂಲೆ ಅಂಗಡಿ ಹೊಳೆಯಲ್ಲಿ ವಿಸರ್ಜಿಸಲಾಯಿತು. ಶೋಭಯಾತ್ರೆಯ ಸಂದರ್ಭದಲ್ಲಿ ರುದ್ರಂ ಚಂಡೆ ಬಳಗದವರಿಂದ ಚಂಡೆ ಸೇವೆ ಹಾಗೂ ದಕ್ಷಿಣ ಕನ್ನಡದ ಕಲಾವಿದರು, ಸ್ಥಳೀಯ ಕಲಾವಿದರಿಂದ ಆಕರ್ಷಕವಾಗಿ ಕುಣಿತ, ಭಜನೆಯು ನಡೆಯಿತು. ಈ ಸಂದರ್ಭ ದೇವಾಲಯದ ಆಡಳಿತ ಮಂಡಳಿ, ಗ್ರಾಮಸ್ಥರು ಹಾಜರಿದ್ದರು.











