ಮಡಿಕೇರಿ ಸೆ.14 NEWS DESK : ನಲ್ವತ್ತೋಕ್ಲು ಚೋಕಂಡಳ್ಳಿ ಕಂದೂರಿ ಹಜ್ರತ್ ಮುಹಮ್ಮದ್ ಪೈಗಂಬರ್‍ರ ಮುಹ್‍ಜಿಸತ್ತಿನಿಂದ ಪ್ರಸಿದ್ಧಿ ಹೊಂದಿರುವ ಕಂದೂರಿ ಈದ್ ಮಿಲಾದ್ ನ್ನು ಸೆ.21 ಮತ್ತು 22 ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುವುದು ಎಂದು ಈದ್ ಮಿಲಾದ್ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಕೆ.ಎಂ.ರಫಿ, ಕಾರ್ಯದರ್ಶಿ ಪಿ.ಎ.ಸಿರಾಜುದ್ದೀನ್, ಸದಸ್ಯರುಗಳಾದ ಪಿ.ಎ.ಅಬ್ದುಲ್ ಮಜಿದ್, ಟಿ.ಎಂ.ಅಸಿಮ್, ಕೆ.ಎಸ್.ಮೊಯ್ದಿನ್ ಹಾಗೂ ಪಿ.ಯು.ನೂರುದ್ದೀನ್ ತಿಳಿಸಿದ್ದಾರೆ. ಎರಡು ದಿನ ನಡೆಯಲಿರುವ ಕಾರ್ಯಕ್ರಮಕ್ಕೆ ಸೆ.21 ರಂದು ಅಸರ್ ನಮಾಜಿನ ಬಳಿಕ ಈದ್ ಮಿಲಾದ್ ಸಂರಕ್ಷಣಾ ಸಮಿತಿ ಅಧ್ಯಕ್ಷ ಕೆ.ಎಂ.ರಫಿ ಧ್ವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದರು. ಸಂಜೆ 7 ಗಂಟೆಗೆ ಅಬ್ದುಲ್ ಲತೀಫ್ ಸಖಾಫಿ ಕಾಂದಪುರಂ ನೇತೃತ್ವದಲ್ಲಿ ಮದನೀಯಂ ಸದಸ್ಸ್ ಮತ್ತು ನಸೀಹತ್ ನಡೆಯಲಿದ್ದು, ಕಾರ್ಯಕ್ರಮವನ್ನು ಸೈಯದ್ ಮಹದಿ ತಂಗಳ್ ಉದ್ಘಾಟಿಸಲಿದ್ದಾರೆ. ಮುಬಶ್ಯಿರ್ ಅಹ್ಸನಿ ಅಲ್ ಕಾಮಿಲ್ ಪ್ರಾರ್ಥನೆ ನೆರವೇರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ನಲ್ವತೋಕ್ಲು ಚೋಕಂಡಳ್ಳಿ ಜುಮಾ ಮಸೀದಿ ಅಧ್ಯಕ್ಷ ಪಿ.ಎ.ಹನೀಫ್, ಕೊಡವ ಮುಸ್ಲಿಂ ಅಸೊಶಿಯೇಶನ್ ಅಧ್ಯಕ್ಷ ಡಿ.ಹೆಚ್.ಸೂಪಿ ಹಾಜಿ ಸೇರಿದಂತೆ ಇತರ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ಸೆ.22 ರಂದು ಬೆಳಿಗ್ಗೆ 5 ಗಂಟೆಗೆ ಮೌಲಿದ್ ಪಾರಾಯಣ, 8 ಗಂಟೆಗೆ ರಿಫಾಯಿ ರಾತೀಬ್ ಸಂಘದವರಿಂದ ಮನೆಗಳಿಗೆ ಭೇಟಿ, 10 ಗಂಟೆಗೆ ಈದ್ ಮಿಲಾದ್ ರ‍್ಯಾಲಿ ನಡೆಯಲಿದೆ. 11 ಗಂಟೆಗೆ ವಯನಾಡ್‍ನ ಬಶೀರ್ ಅಬ್ದುಲ್ಲಾ ಸಖಾಫಿ ಅವರ ನೇತೃತ್ವದಲ್ಲಿ ಬುರ್ದಾ ಮಜ್ಲಿಸ್ ನಡೆಯಲಿದ್ದು, 11.30ಕ್ಕೆ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಲಿದೆ ಎಂದರು. ಕಾರ್ಯಕ್ರಮವನ್ನು ಚೋಕಂಡಳ್ಳಿ ಜುಮಾ ಮಸೀದಿ ಮುದ್ರರಿಸ್ ಜನಾಬ್ ಮುಬಶ್ಯಿರ್ ಅಹ್ಸನಿ ಕಾಮಿಲ್ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಈದ್ ಮಿಲಾದ್ ಸಂರಕ್ಷಣಾ ಸಮಿತಿ ಅಧ್ಯಕ್ಷ ಕೆ.ಎಂ.ರಫಿ ವಹಿಸಲಿದ್ದಾರೆ. ಸೈಯದ್ ಮಹದಿ ತಂಙಳ್ ಪ್ರಾರ್ಥನೆ ನೆರವೇರಿಸಲಿದ್ದು, ಚೋಕಂಡಳ್ಳಿ ಮುಹಲ್ಲಿಂ ಬಿ.ಯು.ಎಂ ಸದರ್ ಜನಾಬ್ ಬಶೀರ್ ಸಖಾಫಿ ಶುಭಾಶಯ ಭಾಷಣ ಮಾಡಲಿದ್ದಾರೆ. ಜನಾಬ್ ಹುಸೈನ್ ಅಹ್ಸನಿ ಮುಹೀನಿ ಮುಖ್ಯ ಪ್ರಭಾಷಣ ಮಾಡಲಿದ್ದು, ಚೋಕಂಡಳ್ಳಿ ಸಿರಾಜಿದ್ದೀನ್ ಝಹರಿ ಕಂದೂರಿ ದಿನದ ದುಅ ನೇತೃತ್ವ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಚೋಕಂಡಳ್ಳಿ ಜುಮಾ ಮಸೀದಿ ಅಧ್ಯಕ್ಷ ಪಿ.ಎ.ಹನೀಫ್, ಕೊಡವ ಮುಸ್ಲಿಂ ಅಸೋಶಿಯೇಶನ್ ಅಧ್ಯಕ್ಷ ಡಿ.ಹೆಚ್.ಸೂಪಿ ಹಾಜಿ, ಚೋಕಂಡಳ್ಳಿ ಖುತ್ಬಿಯತ್ ಸಂಘದ ಅಧ್ಯಕ್ಷ ಕೆ.ಎ.ಸುಬೇರು, ಖಲೀಫಾ ರಾತೀಬ್ ಎಂ.ಹೆಚ್.ಅಹಮದ್, ಜುಮಾ ಮಸೀದಿ ಉಪಾಧ್ಯಕ್ಷ ಹೆಚ್.ಎಂ.ನೌಫಲುದ್ಧೀನ್, ಬಿಳುಗುಂದ ಗ್ರಾ.ಪಂ ಮಾಜಿ ಸದಸ್ಯ ಚಿಲ್ಲವಂಡ ಕಾವೇರಿಯಪ್ಪ, ಕೊಡವ ಸಮಾಜದ ಅಧ್ಯಕ್ಷ ಎಂ.ಜಿ.ಸಂತೋಷ್, ಚೋಕಂಡಳ್ಳಿ ಖಾದ್ರಿಯ ಜುಮಾ ಮಸೀದಿ ಅಧ್ಯಕ್ಷ ಸಾದತ್ ಖಾನ್, ಕೊಮ್ಮತೋಡು ಜುಮಾ ಮಸೀದಿ ಅಧ್ಯಕ್ಷ ಕೆ.ಎಸ್.ರಫಿಕ್, ಬಿಳುಗುಂದ ಗೌಸಿಯ ಜುಮಾ ಮಸೀದಿ ಅಧ್ಯಕ್ಷ ಜಯಾವು ರಹಮಾನ್, ಚೋಕಂಡಳ್ಳಿ ಮುಹಲ್ಲಿಂ ಹಂಸ ಮುಸ್ಲಿಯಾರ್, ಜಿಯುಎಂ ಮುಹಲ್ಲಿಂ ಸೌಕತ್ ಮುಸ್ಲಿಯರ್, ಶಹೀರ್ ಮುಸ್ಲಿಯಾರ್ ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಅನ್ನದಾನ ನಡೆಯಲಿದ್ದು, ಸ್ತ್ರೀಯರಿಗೆ ಪ್ರತ್ಯೇಕ ಸೌಕರ್ಯ ಏರ್ಪಡಿಸಲಾಗಿದೆ. ಅಲ್ಲದೇ ನಾಡಿನ ಮದ್ರಸ ಮಕ್ಕಳಿಂದ ಧಪ್ ಪ್ರದರ್ಶನ ಹಾಗೂ ರಾತ್ರಿ ತಬರುಕ್ ವಿತರಣೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
Breaking News
- *ಕೊಡಗು ಜಿಲ್ಲೆಯಲ್ಲಿ 13 ವಿದ್ಯುತ್ ಉಪ ಕೇಂದ್ರಗಳ ಸ್ಥಾಪನೆಗೆ ಕ್ರಮ : ಸಚಿವ ಕೆ.ಜೆ.ಜಾರ್ಜ್*
- *ಹುದ್ದೆಗಳ ಭರ್ತಿಗೆ ಕ್ರಮ : ಸಚಿವ ಕೆ.ಜೆ.ಜಾರ್ಜ್ ಭರವಸೆ*
- *ಕುಶಾಲನಗರ ಗಣಪತಿ ದೇವಾಲಯಕ್ಕೆ ಉದ್ಯಮಿಗಳು ಹಾಗೂ ಟಿಬೆಟಿಯನ್ ಕುಟುಂಬದಿಂದ ಬೆಳ್ಳಿ ಕವಚ ಮತ್ತು ಪೂಜಾ ಸಾಮಾಗ್ರಿ ವಿತರಣೆ*
- *ವಿರಾಜಪೇಟೆ : ಡಿಜಿಟಲ್ ಗ್ರಂಥಾಲಯದ ಮೂಲಕ ಜ್ಞಾನದ ಸಶಕ್ತೀಕರಣ ಉಪನ್ಯಾಸ ಕಾರ್ಯಕ್ರಮ*
- *ಅತಿ ಹೆಚ್ಚು ಅಂಕ ಪಡೆದವರಿಗೆ ಸನ್ಮಾನ : ಶಿಕ್ಷಣ ನೀಡಿದ ಸರ್ಕಾರಿ ಶಾಲೆಗೆ ಆದಾಯದ ಒಂದು ಭಾಗ ಮೀಸಲಿಡಿ : ಹೆಚ್.ಎಲ್.ದಿವಾಕರ್ ಕರೆ*
- *ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ನೂತನ ಪದಾಧಿಕಾರಿಗಳ ನೇಮಕ : ಜಿಲ್ಲಾಧ್ಯಕ್ಷರಾಗಿ ಡಾ.ಯಾಲದಾಳು ಮನೋಜ್ ಬೋಪಯ್ಯ ಆಯ್ಕೆ*
- *ವಾರ ಭವಿಷ್ಯ : ಯಾರಿಗೆ ಈ ವಾರ ಶುಭ… : ನ.18 ರಿಂದ 24ರ ವರೆಗೆ*
- *ಬಿ.ಡಿ.ಮಂಜುನಾಥ್ “ಕೊಡಗು ಸಹಕಾರ ರತ್ನ” ಪ್ರಶಸ್ತಿಗೆ ಭಾಜನ : ನ.20 ರಂದು ಸಹಕಾರ ಸಪ್ತಾಹ ಸಮಾರೋಪ, ಪ್ರಶಸ್ತಿ ಪ್ರದಾನ*
- *ಭಾಗಮಂಡಲದಲ್ಲಿ ಕಾವೇರಿ ಆರತಿ*
- *ಬೊಳ್ಳಮ್ಮಗೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್ಡಿ ಪದವಿ*