ಮಡಿಕೇರಿ NEWS DESK ಸೆ.20 : ಖ್ಯಾತ ನಿದೇರ್ಶಕ, ನಟ ರಕ್ಷಿತ್ ಶೆಟ್ಟಿ ಅವರ ಪರಂವಃ ಸ್ಟುಡಿಯೋಸ್ ನಿರ್ಮಾಣ ಮಾಡಿರುವ “ಇಬ್ಬನಿ ತಬ್ಬಿದ ಇಳೆಯಲಿ” ಚಿತ್ರ ಇದೀಗ ಕುಶಾಲನಗರ ಮತ್ತು ಸುಂಟಿಕೊಪ್ಪದ ಚಿತ್ರಮಂದಿರಗಳಲ್ಲಿ ಯಶಸ್ವೀ ಪ್ರದರ್ಶನ ಕಾಣುತ್ತಿದೆ. “ಇಬ್ಬನಿ ತಬ್ಬಿದ ಇಳೆಯಲಿ” ಚಿತ್ರ ಪ್ರೇಮಕಾವ್ಯವಾಗಿದ್ದು, ಚಿತ್ರ ನೋಡಿದವರು ಹೃದಯಸ್ಪರ್ಶಿ ಪ್ರೇಮಕಥೆಯ ಕುರಿತು ಒಳ್ಳೆಯ ಮಾತುಗಳನ್ನಾಡುತ್ತಿದ್ದಾರೆ. ಕೊಡಗಿನ ಪೂಜಾರಿರ ಚಂದ್ರಜಿತ್ ಬೆಳ್ಯಪ್ಪ ನಿರ್ದೇಶಿಸಿರುವ “ಇಬ್ಬನಿ ತಬ್ಬಿದ ಇಳೆಯಲಿ” ಸಿನಿಮಾದಲ್ಲಿ ಸಿದ್ಧಾರ್ಥ್ ಅಶೋಕ್ ಆಗಿ ವಿಹಾನ್ ಗೌಡ, ಅನಹಿತಳಾಗಿ ಅಂಕಿತಾ ಅಮರ್, ಮಧುಮಿತಳಾಗಿ ಗಿರಿಜಾ ಶೆಟ್ಟರ್, ರಾಧಾ ಪಾತ್ರದಲ್ಲಿ ಮಯೂರಿ ನಟರಾಜ ನಟಿಸಿದ್ದಾರೆ. ಫರ್ಹಾನ್ ಆಗಿ ಶಂಕರ್ ಮೂರ್ತಿ ಎಸ್.ಆರ್, ಅಶೋಕ್ ನಾಚಪ್ಪ ಪಾತ್ರದಲ್ಲಿ ಸಲ್ಮಿನ್ ಶೆರಿಫ್ ನಟಿಸಿದ್ದಾರೆ. ಗಗನ್ ಬಡೇರಿಯಾ ಸಂಗೀತ ನೀಡಿದ್ದು, ಶ್ರೀನಿವಾಸನ್ ಸೆಲ್ವರಾಜನ್ ಛಾಯಾಗ್ರಹಣ ಮಾಡಿದ್ದಾರೆ. ರಕ್ಷಿತ್ ಕಾಪು ಸಂಕಲನ, ಶರತ್ ಕೆ.ವಿ ಪ್ರೊಡಕ್ಷನ್ ಡಿಸೈನರ್, ನವ್ಯಾ ಬಿ.ಆರ್ ವಸ್ತç ವಿನ್ಯಾಸಕರಾಗಿ ಕಾರ್ಯನಿರ್ವಹಿಸಿದ್ದಾರೆ. “ಬ್ಲಾಗ್ ಬರವಣಿಗೆಯ ಕಾಲದಲ್ಲಿ 9 ವರ್ಷಗಳ ಹಿಂದೆ ಚಂದ್ರಜಿತ್ ನೀಡಿದ್ದ ಬ್ಲಾಗ್ ಕಥೆ ಇಂದು ಸಿನಿಮಾವಾಗಿದೆ. ಚಿತ್ರಕ್ಕೆ ಕಥೆ ಮತ್ತು ಹಾಡುಗಳನ್ನು ಬರೆದು ನಿರ್ದೇಶನ ಮಾಡಿರುವ ಚಂದ್ರಜಿತ್ ಬೆಳ್ಯಪ್ಪ ಅವರ ನಿರ್ದೇಶನದ ಬಗ್ಗೆ ಸ್ಯಾಂಡಲ್ ವುಡ್ ನಲ್ಲಿ ಮೆಚ್ಚುಗೆಯ ಮಾತುಗಳು ಕೇಳಿ ಬಂದಿದೆ. ಮೊದಲ ಚಿತ್ರದಲ್ಲೇ ಪೂಜಾರಿರ ಬಿ.ಚಂದ್ರಜಿತ್ ಯಶಸ್ಸು ಕಂಡಿದ್ದು, “ಇಬ್ಬನಿ ತಬ್ಬಿದ ಇಳೆಯಲಿ” ರಾಜ್ಯವ್ಯಾಪಿ 200 ಚಿತ್ರಮಂದಿರಗಳಲ್ಲಿ ಯಶಸ್ವೀ ಪ್ರದರ್ಶನ ಕಾಣುತ್ತಿದೆ.