ನಾಪೋಕ್ಲು ಸೆ.21 NEWS DESK : ಅವಂದೂರು ಗ್ರಾಮದ ಗೋಪಾಲಕೃಷ್ಣ ಯುವ ಸಂಘದ ಆಶ್ರಯದಲ್ಲಿ ಅ.6 ರಂದು ಪ್ರಥಮ ವರ್ಷದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ನಡೆಯಲಿದೆ. ಅವಂದೂರಿನ ಅನಂತ ಹೋಂಸ್ಟೇ ಬಳಿ ಸ್ಪರ್ಧೆ ಆಯೋಜಿಸಲಾಗಿದ್ದು, 0.22 ರೈಫಲ್, ತೋಟದ ಕೋವಿ ಮತ್ತು ಏರ್ ರೈಫಲ್ ವಿಭಾಗಗಳಲ್ಲಿ ಸಾರ್ವಜನಿಕರಿಗೆ ಮುಕ್ತ ಅವಕಾಶವನ್ನು ಕಲ್ಪಿಸಲಾಗದೆ. ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರು ಕೀರ್ತನ್ ದೇವಾಯಿರ -9591094700, ಹರ್ಷಿತ್ ಉರೋಳನ-9845033429, ಮಧು ಕಾಳೇರಮ್ಮನ-8792004031, ದೇವಾಯಿರ ಅರುಣ-8861142814 ಸಂಪರ್ಕಿಸಬಹುದಾಗಿದೆ ಎಂದು ಸಂಘದ ಪ್ರಮುಖರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ : ದುಗ್ಗಳ ಸದಾನಂದ.










