ನಾಪೋಕ್ಲು ಸೆ.21 NEWS DESK : ಚೇರಂಬಾಣೆ ಅರುಣ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಚೇರಂಬಾಣೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಶ್ರೀ ರಾಜರಾಜೇಶ್ವರಿ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ 16 ಪ್ರಥಮ 16 ದ್ವಿತೀಯ ಹಾಗೂ 4 ತೃತೀಯ ಬಹುಮಾನ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ. ಪ್ರಾಥಮಿಕ ವಿಭಾಗದಲ್ಲಿ ಹಿಂದಿ ಕಂಠಪಾಠ ಕೆ.ಜಿ.ಜಿತಿನ್ ಪ್ರಥಮ, ಕನ್ನಡ ಕಂಠಪಾಠ ಅನ್ವಿತಾ ಸುದೀಪ್ ತೃತೀಯ, ಸಂಸ್ಕೃತ ಧಾರ್ಮಿಕ ಪಠಣ ತನ್ವಿತ ರಾಜೇಶ್, ಅರೇಬಿಕ್ ಧಾರ್ಮಿಕ ಪಠಣ ಶಾಜಿನ್ ದ್ವಿತೀಯ, ದೇಶಭಕ್ತಿಗೀತೆ ನಿಖಿಲ್ ನಂಜಪ್ಪ ಪ್ರಥಮ, ಕಥೆ ಹೇಳುವುದು ಎ.ಎನ್.ರಶ್ವಿನ್ ದ್ವಿತೀಯ, ಚಿತ್ರಕಲೆಯಲ್ಲಿ ಯಶಸ್ಸ್ ಮಂದಣ್ಣ ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ. ಅಶುಭಾಷಣ ಸ್ಪರ್ಧೆಯಲ್ಲಿ ಕೆ.ಆರ್.ನಿಕ್ಷ ದ್ವಿತೀಯ, ಕನ್ನಡ ಕಂಠಪಾಠದಲ್ಲಿ ತನ್ವಿ ತೃತೀಯ, ಇಂಗ್ಲೀಷ್ ಕಂಠಪಾಠ ಎನ್.ಪಿ.ಧನ್ವಿ ದ್ವಿತೀಯ, ಹಿಂದಿ ಕಂಠಪಾಠ ಶಿಝ ಫಾತಿಮ ದ್ವಿತೀಯ, ಸಂಸ್ಕೃತ ಧಾರ್ಮಿಕ ಪಠಣ ಅಪ್ರಮೇಯ ಪ್ರಥಮ, ಅರೇಬಿಕಾ ಧಾರ್ಮಿಕ ಪಠಣ ಸುಹೈಬ್ ತೃತೀಯ, ದೇಶಭಕ್ತಿಗೀತೆ ಸಮೀಕ್ಷ ಪ್ರಥಮ, ಕಥೆ ಹೇಳುವುದು ಚರಿಷ್ಮ ಚೇತನ್ ಪ್ರಥಮ, ಚಿತ್ರಕಲೆ ಟಿ.ವಿ.ವಿಸ್ಮಯ ದ್ವಿತೀಯ, ಅಭಿನಯ ಗೀತೆ ಪ್ರೇಕ್ಷ ಪೆÇನ್ನಮ್ಮ ದ್ವಿತೀಯ, ಕ್ಲೇ ಮಾಡೆಲಿಂಗ್ ಉಜ್ವಲ್ ಪ್ರಥಮ, ಭಕ್ತಿಗೀತೆ ಪಿ.ಎಂ.ವರುಣಿಕ ದ್ವಿತೀಯ, ಅಶುಭಾಷಣ ಜಸ್ಮಿತ ದ್ವಿತೀಯ, ಕವನ ವಾಚನ ಆಫೀಯ ಪ್ರಥಮ, ಮಿಮಿಕ್ರಿ ದುಷ್ಯಂತ್ ದ್ವಿತೀಯ ಬಹುಮಾನ ಪಡೆದುಕೊಂಡಿದ್ದಾರೆ. ಪ್ರೌಢಶಾಲಾ ವಿಭಾಗದಲ್ಲಿ ಕನ್ನಡ ಭಾಷಣ ಕೆ.ಕೆ.ಇಂಚರ ಪ್ರಥಮ, ಆಂಗ್ಲ ಭಾಷಣ ಮೋಕ್ಷ ಬೋಪಣ್ಣ ದ್ವಿತೀಯ, ಸಂಸ್ಕೃತ ಧಾರ್ಮಿಕ ಪಠಣ ಅನಘ ಪ್ರಥಮ, ಹಿಂದಿ ಭಾಷಣ ಚಕ್ಷ ಕಾವೇರಮ್ಮ ಪ್ರಥಮ, ಜಾನಪದ ಗೀತೆ ಕೆ.ಬಿ.ಮಿಲನ ದ್ವಿತೀಯ, ಭಾವಗೀತೆ ಪೂರ್ಣ ಪ್ರಥಮ, ಭರತನಾಟ್ಯ ಅನಘ ಪ್ರಥಮ, ಪ್ರಬಂಧ ರಚನೆ ಕೆ.ಜೆ.ತ್ರಿಶಾ ದ್ವಿತೀಯ, ಚಿತ್ರಕಲೆ ಕೆ.ಜೆ.ಜಶ್ಮಿತಾ ದ್ವಿತೀಯ, ಮಿಮಿಕ್ರಿ ದೀಕ್ಷಿತ್ ದ್ವಿತೀಯ, ಚರ್ಚಾ ಸ್ಪರ್ಧೆ ಮೋಕ್ಷ ಬೋಪಣ್ಣ ತೃತೀಯ, ರಂಗೋಲಿ ಎಂ.ಎ.ನೀಮಾ ದ್ವಿತೀಯ, ಗಜಲ್ ಮಯೂರಿ ಪಿ.ಎನ್.ತೃತೀಯ, ಕವನ ವಾಚನ ಪಿ.ಎನ್.ಯಶಿಕ ಪ್ರಥಮ, ಅಶುಭಾಷಣ ಎ.ಎನ್.ತ್ರಿಷಾ ಪ್ರಥಮ, ರಸಪ್ರಶ್ನೆಯಲ್ಲಿ ದ್ವಿತೀಯ, ಕವ್ವಾಲಿಯಲ್ಲಿ ಫೈಝಲ್ ಮತ್ತು ತಂಡ ತೃತೀಯ ಸ್ಥಾನ ಗಳಿಸಿ ಸಾಧನೆ ಮಾಡಿದ್ದಾರೆ ಎಂದು ಶಾಲಾ ಮುಖ್ಯೋಪಾಧ್ಯಯರಾದ ಕುದುಪಜೆ ಕವನ್ ಕುಮಾರ್ ತಿಳಿಸಿದ್ದಾರೆ.
ವರದಿ : ದುಗ್ಗಳ ಸದಾನಂದ.