ಮಡಿಕೇರಿ ಸೆ.23 NEWS DESK : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ , ಕರ್ನಾಟಕ ಮೆದುಳು ಅರೋಗ್ಯ ಉಪಕ್ರಮ, ರಾಷ್ಟ್ರೀಯ ಮಾನಸಿಕ ಅರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆ ಬೆಂಗಳೂರು, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಬೋಧಕ ಆಸ್ಪತ್ರೆಯ ಸಹಯೋಗದಲ್ಲಿ ವಿಶ್ವ ಅಲ್ಝೈಮರ್ ದಿನ-2024“ಮರೆವಿನ ಕಾಯಿಲೆ, ಅಲ್ಝೈಮರ್ ರೋಗಗಳನ್ನು ನಿರ್ವಹಿಸಲು ಇದು ಸಕಾಲ”ಎಂಬ 2024ರ ಘೋಷ ವಾಕ್ಯದೊಂದಿಗೆ ವಿಶ್ವ ಅಲ್ಝೈಮರ್ ದಿನವನ್ನು ಆಚರಿಸಲಾಯಿತು. ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ , ಬೋಧಕ ಆಸ್ಪತ್ರೆಯ ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ (KABHI) ಕ್ಲಿನಿಕ್ , ಸಾಮಾನ್ಯ ವೈದ್ಯ ಶಾಸ್ತ್ರ ವಿಭಾಗದಲ್ಲಿ ಹಾಗೂ ತನಲ್ ವೃದ್ಧಶ್ರಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ KaBHI ಕೊಡಗು ಜಿಲ್ಲಾ ಸಂಯೋಜಕ ಆರ್.ವಿಕ್ರಮ್ ಅಲ್ಝೈಮರ್ ಕಾಯಿಲೆ ಹಾಗೂ ಡಿಮೆಂಷಿಯ ಕಾಯಿಲೆಯ ಬಗೆಗೆ ಹಾಗೂ KaBHI ಕಾರ್ಯಕ್ರಮದ ಬಗೆಗೆ ನೆರೆದಿದ್ದ ವಯೋ ವೃದ್ಧರಿಗೆ ಹಾಗೂ ಜನರಿಗೆ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದ (ಮನಶ್ಶಾಸ್ತ್ರಜ್ಞೆ) ರಾದ ಫಿರೋದೋಸ್ ಸುಲ್ತಾನ ಮಾತನಾಡಿ, ಡಿಮೆಂಷಿಯ ಕಾಯಿಲೆಯ ಚಿಹ್ನೆಗಳು, ವಿಧಗಳು, ರೋಗ ಲಕ್ಷಣಗಳು, ಹಾಗೂ ಡಿಮೆಂಷಿಯ ಕಾಯಿಲೆಯಿಂದ ಬಳಲುತ್ತಿರುವ ವಯೋವೃದ್ಧರಿಗೆ ನಾವು ಹೇಗೆ ಸಹಾಯ ಮಾಡಬಹುದು ಹಾಗೂ ತಮ್ಮ ಬೌದ್ಧಿಕಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಮಾರ್ಗಗಳ ಬಗೆಗೆ ಮಾಹಿತಿ ನೀಡಿದರು. ಕಾರ್ಯಕ್ರಮದ ಭೌತಚಿಕಿತ್ಸಕ ಡಾ. ಕ್ರಿಸ್ಟಿ ಜೋಸ್, ವಾಕ್ ಮತ್ತು ಭಾಷಾ ತಜ್ಞರಾದ ಕಾವ್ಯ ಹಾಗು ನರ್ಸಿಂಗ್ ಅಧಿಕಾರಿಯಾದ ದೃತಿ ನರಸಂಬಂಧಿತ ಮೆದುಳಿನ ರೋಗಗಳಾದ ತಲೆ ನೋವು, ಮೂರ್ಛೆ ರೋಗ, ಪಾರ್ಶ್ವಾವಾಯು, ಮರೆವಿನ ಕಾಯಿಲೆಗಳ ಬಗ್ಗೆ ಮಾಹಿತಿ ಒದಗಿಸಿದರು. ಕಾರ್ಯಕ್ರಮದಲ್ಲಿ ವಯೋವೃದ್ದರಿಗೆ ಬೌದ್ಧಿಕ ಸಾಮರ್ಥ್ಯವನ್ನು ಪರೀಕ್ಷಿಸಲು ಮೆಮೊರಿ ಸ್ಕ್ರೀನಿಂಗ್ ಆಟಗಳನ್ನು ಆಡಿಸಲಾಯಿತು.