ಮಡಿಕೇರಿ NEWS DESK ಸೆ.23 : ಹಚ್ಚ ಹಸಿರಿನ ಕಾಫಿ ತೋಟಗಳ ನಡುವಿನ ಗದ್ದೆಯಲ್ಲಿ ಆಯೋಜಿಸಿದ್ದ ವಿವಿಧ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಮರಾಟಿ ಸಮುದಾಯ ಬಾಂಧವರು ಮಿಂದೆದ್ದರು. ಕೊಡಗು ಜಿಲ್ಲಾ ಮರಾಠ/ಮರಾಟಿ ಸಮಾಜ ಸೇವಾ ಸಂಘದ ವತಿಯಿಂದ ಸಮುದಾಯ ಬಾಂಧವರಿಗಾಗಿ ಮಡಿಕೇರಿ ತಾಲೂಕಿನ 2ನೇ ಮೊಣ್ಣಂಗೇರಿಯ ಮರಾಟಿ ಸೋಮಪ್ಪ ಅವರ ಗದ್ದೆಯಲ್ಲಿ ಆಯೋಜಿಸಿದ್ದ ಗ್ರಾಮೀಣ ಗುಡ್ಡಗಾಡು ಕೆಸರು ಗದ್ದೆ ಕ್ರೀಡಾಕೂಟ ಗಮನ ಸೆಳೆಯಿತು. ಕ್ರೀಡಾ ಪ್ರೇಮಿಗಳು ತಮ್ಮ ಕ್ರೀಡಾ ಪ್ರತಿಭೆಯನ್ನು ಹೊರ ಹಾಕಿದರು. ಕೆಸರಿನಲ್ಲಿ ಆಟಗಾರರ ಏಳುಬೀಳುಗಳು ಪ್ರೇಕ್ಷಕರಿಗೆ ಮನೋರಂಜನೆಯ ರಸದೌತಣವನ್ನು ನೀಡಿತು. ಚುಮು ಚುಮು ಚಳಿಯ ನಡುವೆ ಮಳೆಯ ಸಿಂಚನ ಕೂಡ ಕೀಡಾಪಟುಗಳಿಗೆ ಮತ್ತಷ್ಟು ಉತ್ತೇಜನ ನೀಡಿತು. ಮೊಣಕಾಲಿನ ವರೆಗೆ ನೀರು ತುಂಬಿದ ಕೆಸರು ಗzಯಲ್ಲಿ ಹಗ್ಗಜಗ್ಗಾಟ, ಹಿಮ್ಮುಖ ಓಟ, ಗೂಟ ಓಟ, ಮಡಿಕೆ ಹೊಡೆಯುವುದು, ಪಾಸಿಂಗ್ ದಿ ಬಾಲ್, ಕೆಸರುಗದ್ದೆ ವಾಲಗ ಕುಣಿತ ಸ್ಪರ್ಧೆ ರೋಚಕವಾಗಿತ್ತು. ಕೊಡಗು ಜಿಲ್ಲಾ ಮರಾಠ/ಮರಾಟಿ ಸಮಾಜ ಸೇವಾ ಸಂಘದ ಸ್ಥಾಪಕಾಧ್ಯಕ್ಷ ವಾಮನ ನಾಯ್ಕ್ ಕ್ರೀಡಾಕೂಟವನ್ನು ಉದ್ಘಾಟಿಸಿದರು. ಮರಾಠ-ಮರಾಟಿ ಸಮಾಜ ಸೇವಾ ಸಂಘ ಜಿಲ್ಲಾಧ್ಯಕ್ಷ ಎಂ.ಎಂ.ಪರಮೇಶ್ವರ್ ಅಧ್ಯಕ್ಷತೆ ವಹಿಸಿದ್ದರು. ಸಂಘದ ಉಪಾಧ್ಯಕ್ಷೆ ದೇವಕ್ಕಿ.ಜಿ.ಆರ್.ನಾಯ್ಕ್, ಜಿಲ್ಲಾ ಸಂಘದ ಉಪ ಸಮಿತಿಗಳ ಅಧ್ಯಕ್ಷರಾದ ಎಂ.ಎಸ್.ವೆಂಕಪ್ಪ, ಧನಂಜಯ, ನೀರಲ್ ಕುಮಾರ್, ಕೆ.ಜಿ.ಹೊನ್ನಪ್ಪ, 2ನೇ ಮೊಣ್ಣಂಗೇರಿ ಗ್ರಾಮ ಪಂಚಾಯಿತಿ ಸದಸ್ಯೆ ಪುಷ್ಪಾವತಿ, ಮಹಿಳಾ ವೇದಿಕೆ ಅಧ್ಯಕ್ಷೆ ರತ್ನಮಂಜರಿ, ಯುವ ವೇದಿಕೆ ಅಧ್ಯಕ್ಷ ಎಂ.ಆರ್.ಮೋಹನ್, ಬ್ಯಾಂಕ್ ಆಫ್ ಬರೋಡದ ಮ್ಯಾನೇಜರ್ ಹಾಗೂ ಸಂಘದ ಸದಸ್ಯೆ ಸರಸ್ವತಿ ಬಾಲಕೃಷ್ಣ ಇತರರು ಇದ್ದರು. ಸಮಾರೋಪ ಸಮಾರಂಭ: ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಐಎಫ್‌ಎಸ್ ಸುಂದರ್ ನಾಯ್ಕ್, ಕೆಸರು ಗದ್ದೆ ಕ್ರೀಡಾಕೂಟ ಸುವ್ಯವಸ್ಥಿತವಾಗಿ ನಡೆಸಲು ಸಹಕರಿಸಿದ 2ನೇ ಮೊಣ್ಣಂಗೇರಿ ಉಪ ಸಮಿತಿಯ ಕಾರ್ಯ ವೈಕರಿ ಶ್ಲಾಘನೀಯ. 22 ವರ್ಷಕ್ಕೆ ಹಿಂದೆ ನಡೆದ ಮಂಗಳೂರಿನ ಮರಾಟಿ ಸಮಾವೇಶ eಪಿಸಿದ ಅವರು, ಮುಂದಿನ ದಿನಗಳಲ್ಲಿ ಮೂಡುಬಿದ್ರೆಯಲ್ಲಿ ನಡೆಯಲಿರುವ ಕರಾವಳಿ ಮರಾಟಿ ಸಮಾವೇಶದಲ್ಲಿ ಕೊಡಗಿನಿಂದ ಅತಿಹೆಚ್ಚಿನ ಜನಾಂಗಬಾಂಧವರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿಕೊಡುವಂತೆ ಮನವಿ ಮಾಡಿದರು. ಜಿಡಳಿತದಿಂದ ನಿರ್ಮಾಣ ಮಾಡುತ್ತಿರುವ ಕಟ್ಟಡ ಕಾಮಗಾರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಸರ್ಕಾರದಿಂದ ಬರಬೇಕಾಗಿರುವ ಅನುದಾನದ ಬಿಡುಗಡೆ ಬಗ್ಗೆ ಚರ್ಚಿಸಲು ಸಹಕರಿಸುವುದಾಗಿ ತಿಳಿಸಿದರು. ಮಾಣ್ಣಂಗೇರಿ ಉಪ ಸಮಿತಿಯ ಅಧ್ಯಕ್ಷ ಎಂ.ಎಸ್.ವೆಂಕಪ್ಪನವರು ಮಾತನಾಡಿ, ಸಮಾಜದ ಕಾರ್ಯಕ್ರಮಗಳಿಗೆ ಪ್ರತಿಯೊಬ್ಬರ ಸಹಕಾರ ಅಗತ್ಯ. ಅದರಂತೆ ಕ್ರೀಡಾಕೂಟಕ್ಕೆ ಸಹಕರಿಸಿದ ಉಪಸಮಿತಿಯ ಆಡಳಿತ ಮಂಡಳಿ ಹಾಗೂ ಜನಾಂಗಬಾಂಧವರಿಗೆ ಅಗತ್ಯ ಸಹಕಾರ ನೀಡಿದ್ದಾರೆ. ಅದೇ ರೀತಿ ಜನಾಂಗ ಬಾಂಧವರು ಸಂಘದ ಅಜೀವ ಸದಸ್ಯತ್ವವನ್ನು ಪಡೆದು ಸಂಘದ ಏಳಿಗೆಗೆ ಶ್ರಮಿಸಬೇಕು ಎಂದು ಮನವಿ ಮಾಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧ್ಯಕ್ಷರಾದ ಎಂ.ಎಂ.ಪರಮೇಶ್ವರ್, ಮಾಸಿಕ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದಂತೆ 2ನೇ ಮೊಣ್ಣಂಗೇರಿಯ ಉಪಸಮಿತಿಯ ಪದಾಧಿಕಾರಿಗಳು ಉತ್ತಮವಾಗಿ ಕ್ರೀಡಾಕೂಟ ಆಯೋಜನೆ ಮಾಡಿದ್ದಾರೆ. ಕಾರ್ಯಕ್ರಮ ಯಶಸ್ವಿಯಾಗಲು ಸಂಪೂರ್ಣವಾಗಿ ಜನಾಂಗಬಾಂಧವರು ಸಹಕಾರ ನೀಡಿದ್ದಾರೆ. ಉಪಸಮಿತಿಗಳ ಪ್ರಾಮಾಣಿಕ ಪ್ರಯತ್ನದ ಫಲವಾಗಿ ಇಂದು ಕಾರ್ಯಕ್ರಮ ಯಶಸ್ವಿಯಾಗಿದ್ದು, ಇಂತಹ ಕಾರ್ಯಕ್ರಮಕ್ಕೆ ಜನಾಂಗಬಾಂಧವರು ಹೆಚ್ಚಿನ ಜನಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು. ಆಟೋಟ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಯುವಕ ಸಂಘದ ಅಧ್ಯಕ್ಷ ಎಂ.ಆರ್.ಮೋಹನ್ ವಂದಿಸಿದರು.