ಮಡಿಕೇರಿ NEWS DESK ಅ.1 : ಮಡಿಕೇರಿ ದಸರಾ ಜನೋತ್ಸವ ಪ್ರಯುಕ್ತ ಅಕ್ಟೋಬರ್ 4 ರಿಂದ 12 ರವೆರೆಗೆ ಪ್ರತೀ ನಿತ್ಯವೂ ವೈವಿಧ್ಯಮಯ ಸಾಂಸ್ಕೖತಿಕ ಕಾಯ೯ಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಅನಿಲ್ ಹೆಚ್. ಟಿ ಮಾಹಿತಿ ನೀಡಿದ್ದಾರೆ. ಮಡಿಕೇರಿ ಕ್ಷೇತ್ರ ಶಾಸಕ ಡಾ, ಮಂಥರ್ ಗೌಡ, ಜಿಲ್ಲಾಧಿಕಾರಿ ಮತ್ತು ದಸರಾ ಸಮಿತಿ ಅಧ್ಯಕ್ಷರಾದ ವೆಂಕಟರಾಜಾ ಮಾಗ೯ದಶ೯ನದಲ್ಲಿ ದಸರಾ ಸಮಿತಿಯ ಕಾಯಾ೯ಧ್ಯಕ್ಷ ಪ್ರಕಾಶ್ ಆಚಾಯ೯, ಪ್ರಧಾನ ಕಾಯ೯ದಶಿ೯ ರಾಜೇಶ್ ಬಿ ವೈ ಮತ್ತು ಖಜಾಂಜಿ ಅರುಣ್ ಶೆಟ್ಟಿ, ಸಮಿತಿ ಪದಾದಿಕಾರಿಗಳ ಸಹಕಾರದೊಂದಿಗೆ ವೈವಿಧ್ಯಮಯ ಕಾಯ೯ಕ್ರಮಗಳು ಈ ಬಾರಿಯ ದಸರಾದಲ್ಲಿ ಜನಮನ ಸೆಳೆಯಲಿದೆ ಎಂದೂ ಅನಿಲ್ ತಿಳಿಸಿದ್ದಾರೆ.
::: ದಸರಾ ಕಾಯ೯ಕ್ರಮಗಳ ವಿವರ ::: ಅಕ್ಟೋಬರ್ 4 ರಂದು ಶುಕ್ರವಾರ – ಮಡಿಕೇರಿಯ ಕಾವ್ಯಶ್ರೀ ಕಪಿಲ್ ಕಲಾಕಾವ್ಯ ತಂಡದಿಂದ ನೖತ್ಯ ವೈವಿಧ್ಯ , ಮೇವಡ ಕಾವೇರಿ ಅಯ್ಯಪ್ಪಮತ್ತು ತಂಡದಿಂದ ಗಾನಸುಧೆ , ಕೂಡಿಗೆಯ ಎ ಕ್ರಿಯೇಟೀವ್ ಡಾನ್ಸ್ ಅಕಾಡೆಮಿಯಿಂದ ಭಾರತೀಯ ಶಾಸ್ತ್ರೀಯ ನೖತ್ಯ , ಮೂನಾ೯ಡಿನ ಸ್ಟೆಪ್ ಅಪ್ ಶೇಡ ತಂಡದಿಂದ ನೖತ್ಯ ವೈಭವ , ನಿಮಿಷ, ನಾಪೋಕ್ಲುವಿನ ರವಿ ಓಂಕಾರ್ ತಂಡದಿಂದ ಸಂಗೀತ ರಸಮಂಜರಿ, ವೀರಾಜಪೇಟೆಯ ನಾಟ್ಯಾಂಜಲಿ ತಂಡದಿಂದ ನೖತ್ಯ ವೈವಿಧ್ಯ , ಸಂಪಾಜೆಯ ಸವಿತಾಕಿರಣ್ ತಂಡದಿಂದ ನೖತ್ಯ ವೈವಿಧ್ಯ, ಅಕ್ಟೋಬರ್ 5 ರಂದು ಶನಿವಾರ 11 ನೇ ವಷ೯ದ ಮಕ್ಕಳ ದಸರಾ – ಬೆಳಗ್ಗೆ 9 ಗಂಟೆಯಿಂದ ರೋಟರಿ ಮಿಸ್ಟಿ ಹಿಲ್ಸ್ ಸಹಯೋಗದಲ್ಲಿ ಮಕ್ಕಳ ಸಂತೆ, ಮಕ್ಕಳ ಅಂಗಡಿ, ಮಕ್ಕಳ ಮಂಟಪ, ಛದ್ನವೇಷ ಮತ್ತು ಕ್ಲೇಮಾಡೆಲಿಂಗ್ ಸ್ಪಧೆ೯ಗಳು, ಜತೆಗೆ ನಂಜನಗೂಡಿನ ಸುನಾದ್ ವಿನೋದಿನಿ ಸಂಗೀತ ಶಾಲಾ ತಂಡದಿಂದ ವಾದ್ಯ ಸಂಗೀತ. ಸಂಜೆ 6 ಗಂಟೆಯಿಂದ – ಹುಬ್ಬಳ್ಳಿಯ ಭೂಮಿಕಾ ದೀಪಿಕಾ ಅವರಿಂದ ಗಾನಸಂಜೆ, ಮಡಿಕೇರಿಯ ವಿಕ್ರಂ ಜಾದೂಗಾರ್ ಅವರಿಂದ ಮ್ಯೂಜಿಕ್ ಶೋ , ಬನ್ನೂರಿನ ಚಿಲಿಪಿಲಿ ಗೊಂಬೆಗಳಿಂದ ಮಕ್ಕಳಿಗೆ ರಂಜನೆ ಸೇರಿದಂತೆ ಮಕ್ಕಳ ತಂಡಗಳಿಂದ ವೈವಿಧ್ಯಮಯ ಕಾಯ೯ಕ್ರಮಗಳಿವೆ. ಅಕ್ಟೋಬರ್ 6 ರಂದು ಭಾನುವಾರ ಬೆಳಗ್ಗೆ 10 ಗಂಟೆಗೆ ಪ್ರಥಮ ವಷ೯ದ ಕಾಫಿ ದಸರಾಕ್ಕೆ ಚಾಲನೆ . ಡಾ.ಮಂಥರ್ ಗೌಡ ಮಾಗ೯ದಶ೯ನದಲ್ಲಿ ಕನಾ೯ಟಕ ಬೆಳೆಗಾರರ ಸಂಘ, ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್, ಕಾಫಿ ಮಂಡಳಿ, ತೋಟಗಾರಿಕೆ, ಕೖಷಿ,ಪಶುವೈದ್ಯಕೀಯ, ಮೀನುಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಕಾಫಿ ದಸರಾ ಆಯೋಜನೆ, ಗಾಂಧಿ ಮೈದಾನದ ಗ್ಯಾಲರಿಯೊಳಗೆ 32 ಮಳಿಗೆಗಳಲ್ಲಿ ಕಾಫಿ, ಕೖಷಿ ತೋಟಗಾರಿಕೆ, ಹೈನುಗಾರಿಕೆ, ಮೀನುಗಾರಿಕೆ ಸಂಬಂಧಿತ ಮಾಹಿತಿ ಪ್ರದಶ೯ನ, ವೇದಿಕೆಯಲ್ಲಿ ಕಾಫಿ ಮತ್ತು ಕೖಷಿಗೆ ಸಂಬಂಧಿಸಿದಂತೆ ವಿಷಯ ತಜ್ಞರಿಂದ ವಿಚಾರಸಂಕಿರಣ ಸಂಜೆ 6 ಗಂಟೆಯಿಂದ ಬೆಂಗಳೂರಿನ ಸರಿಗಮಪ ತಂಡದ ಜ್ಯುರಿ ಮಹೇಂದ್ರ ನೇತೖತ್ವದಲ್ಲಿ ಕಲಾವಿದರಾದ ದಿವ್ಯ ಹೆಗಡೆ, ರವಿಕುಮಾರ್, ಮೆಹಬೂಬ್ ಸಾಬ್, ಮಿಂಚು, ಪ್ರಗತಿ ಬಡಿಗೇರ್, ಪ್ರಥ್ವಿ ಕುಂದಾಪುರ ತಂಡದಿಂದ ಗಾನ ಸಂಭ್ರಮ, ಮಂಗಳೂರು ಗಾನನೖತ್ಯ ಅಕಾಡೆಮಿಯ ಟೀನಾ ಚೇತನ್ ತಂಡದಿಂದ ನೖತ್ಯ ವೈವಿಧ್ಯ – ಬೆಂಗಳೂರಿನ ಟೀಂ ಪೊನಿ ಧ್ವನಿ, ತಂಡದಿಂದ ಕೊಡಗಿನ ಸಂಸ್ಕೖತಿ ನೖತ್ಯ, ನಟರಾಜ ನೖತ್ಯ ನಿಕೇತನ ಕಲ್ಲುಗುಂಡಿ ತಂಡದಿಂದ ನೖತ್ಯ ವೈವಿಧ್ಯ ಅಕ್ಟೋಬರ್ 7 ರಂದು ಸೋಮವಾರ ಬೆಳಗ್ಗೆ 10 ಗಂಟೆಯಿಂದ ಕಾಫಿ ದಸರಾ ಪ್ರಯುಕ್ತ ಮಳಿಗೆಗಳು ತೆರೆದಿರುತ್ತವೆ, ವೇದಿಕೆಯಲ್ಲಿ ಕಾಫಿ, ಕೖಷಿ ಸಂಬಂಧಿತ ಮಹತ್ವದ ವಿಚಾರಸಂಕಿರಣ ಆಯೋಜಿತವಾಗಿದೆ, ಸಂಜೆ 6 ಗೆಂಟೆಯಿಂದ ಸೋನಿ ರಿಯಾಲಿಟಿ ಶೋ ಸೂಪರ್ ಸ್ಟಾರ್ ಸಿಂಗರ್ ನ ವಿಜೇತ ಕೇರಳದ 7 ವಷ೯ದ ಬಾಲಕ ಅವಿಭ೯ವ್ ಹಾಡುಗಾರಿಕೆ, ಕುಶಾಲನಗರ ಏಂಜಲ್ ವಿಂಗ್ಸ್ ತಂಡದಿಂದ ನೖತ್ಯ ವೈವಿಧ್ಯ, ಕೊಡಗು ಪತ್ರಕತ೯ರ ಸಂಘದಿಂದ ಸಂಗೀತ ರಸಮಂಜರಿ, ಮಡಿಕೇರಿಯ ನಾಟ್ಯ ನಿಕೇತನ ತಂಡದಿಂದ ನೖತ್ಯ ಸಂಗಮ, ಮಡಿಕೇರಿಯ ಕಿಂಗ್ಸ್ ಆಫ್ ಕೂಗ್೯ ತಂಡದಿಂದ ಡಾನ್ಸ್ ಧಮಾಕ, ಟೀಮ್ ಆಫ್ ಡೆವಿಲ್ಸ್ ತಂಡದಿಂದ ನೖತ್ಯ
ಅಕ್ಟೋಬರ್ 8 ರಂದು 7 ನೇ ವಷ೯ದ ಮಹಿಳಾ ದಸರಾ, ಮಡಿಕೇರಿ ನಗರಸಭಾ ಸದಸ್ಯೆಯರು, ಕೊಡಗು ಮಹಿಳಾ ಮತ್ತು ಮಕ್ಕಳ ಅಭಿವೖದ್ದಿ ಇಲಾಖೆ ಸಹಯೋಗದಲ್ಲಿ ಮಹಿಳಾ ದಸರಾ ಕಾಯ೯ಕ್ರಮಗಳು ನಡೆಯಲಿವೆ, ಅಂದು ಬೆಳಗ್ಗೆ 10 ಗಂಟೆಯಿಂದಲೇ ಮಹಿಳೆಯರಿಗಾಗಿ ವೈವಿದ್ಯಮಯ ಮನರಂಜನಾ ಸ್ಪಧೆ೯ಗಳು, ಆಯೋಜಿತವಾಗಿದೆ, ಕಣ್ಣಿಗೆ ಬಟ್ಟೆ ಕಟ್ಟಿ ಮೇಕಪ್ , ಮೆಹಂದಿ,ಹಾಕುವ ಸ್ಪಧೆ೯, ಸಾಂಪ್ರದಾಯಿಕ ಉಡುಗೆ ಸ್ಪದೆ೯, ಬಲೂನ್ ಗ್ಲಾಸ್ ಸ್ಪರ್ಧೆ . ಬಾಂಬ್ ಇನ್ ದಿ ಸಿಟಿ, ಅಜ್ಜಿ ಜೊತೆ ಮೊಮ್ಮಕ್ಕಳ ನಡಿಗೆ, ಗಾರ್ಭ ಡ್ಯಾನ್ಸ್ , ವಾಲಗತ್ತಾಟ್, ನಾರಿಗೆ ಒಂದು ಸೀರೆ,, ಕಪ್ಪೆ ಜಿಗಿತ , ಕೇಶ ವಿನ್ಯಾಸ, ಒಂಟಿ ಕಾಲಿನ ಓಟದ ಸ್ಪಧೆ೯ಗಳು ಮಹಿಳೆಯರಿಗಾಗಿ ಆಯೋಜಿತವಾಗಿದೆ. ವಿವಿಧ ಕಾರ್ಯಕ್ರಮಗಳು. ಬೆಂಗಳೂರಿನ ಹೇಮ ವೆಂಕಟ್ ಅವರಿಂದ ದಾರದಲ್ಲಿ ದುಗೆ೯ಯ ಚಿತ್ರರಚನೆಯ ಆಕಷ೯ಣೆ, ಪೊನ್ನಂಪೇಟೆಯ ರೇಖಾ ಶ್ರೀಧರ್ ತಂಡದಿಂದ ನೖತ್ಯ ಆಯೋಜಿಸಲ್ಪಟ್ಟಿದೆ. ಅಂದು ಸಂಜೆ 6 ಗಂಟೆಗೆ ರಿಯಾಲಿಟಿ ಶೋ , ಸರಿಗಮಪ ಕಲಾವಿದೆಯರಾದ ಸುರೇಖಾ, ರಮ್ಯ, ರೇಷ್ಮಾ, ಫ್ರಥ್ವಿ ಭಟ್, ಸ್ನೇಹ ನೀಲಪ್ಪ ಗೌಡ ಅವರಿಂದ ಗಾನ ಸುಧೆ, ಮಹಿಳೆಯರಿಂದ ವೈವಿಧ್ಯಮಯ ಕಾಯ೯ಕ್ರಮಗಳು. ಅಕ್ಟೋಬರ್ 9 ಬುಧವಾರ – ಖ್ಯಾತ ಕಲಾವಿದೆ ಕೋಟೇರ ಯಾಮಿನಿ ಮುತ್ತಣ್ಣ ಮತ್ತು ತಂಡದಿಂದ ದೇವಿಮಾಗ೯ಂ ನೖತ್ಯ ರೂಪಕ. ಮಡಿಕೇರಿಯ ವಿಂಗ್ಸ್ ಆಫ್ ಫ್ಯಾಷನ್ ತಂಡದಿಂದ – ನೖತ್ಯ ಸೌರಭ, ಮೈಸೂರಿನ ಶ್ರೀ ಗುರು ಸಂಗೀತ ಸೇವಾ ಸಂಘದಿಂದ ಗಾನಸುಧೆ ಮೈಸೂರಿನ ನಿತ್ಯನಿರಂತರ ವಿಶೇಷ ಚೇತನ ಮಕ್ಕಳಿಂದ ಕನಾ೯ಟಕ ವೈಭವ ನೖತ್ಯ ರೂಪಕ, ಮಂಗಳೂರಿನ ಯಶಸ್ವಿ ಡಾನ್ಸ್ ಗ್ರೂಪ್ ತಂಡದಿಂದ ಕಡಲ ಹಬ್ಬ ನೖತ್ಯ ವೈವಿಧ್ಯ, ಕೂಗ್೯ ಮೆಲೋಡೀಸ್ ತಂಡದಿಂದ ಸಂಗೀತ ರಸಮಂಜರಿ ಆಯೋಜಿತವಾಗಿದೆ. ಅಕ್ಟೋಬರ್ 10 ರಂದು ಬೆಳಗ್ಗೆ 9.30 ಗಂಟೆಯಿಂದ ಕೊಡಗು ಜಿಲ್ಲಾ ಜಾನಪದ ಪರಿಷತ್ ಸಹಯೋಗದಲ್ಲಿ 5 ನೇ ವಷ೯ದ ಜಾನಪದ ದಸರಾ ಆಯೋಜಿತವಾಗಿದೆ, ಜಿಲ್ಲೆ ಮತ್ತು ಹೊರಜಿಲ್ಲೆಗಳ ಜಾನಪದ ಕಲಾತಂಡಗಳ ಜಾಥಾ ಜನರಲ್ ತಿಮ್ಮಯ್ಯ ವೖತ್ತದಿಂದ ಗಾಂಧಿ ಮೈದಾನದವರೆಗೆ ಸಾಗಲಿದ್ದು, ಕಲಾಸಂಭ್ರಮ ವೇದಿಕೆಯಲ್ಲಿ ಕಲಾತಂಡಗಳಿಂದ ವೈವಿಧ್ಯಮಯ ಜಾನಪದ ಕಲಾ ಪ್ರದಶ೯ನ ಆಯೋಜಿತವಾಗಿದೆ, ಇದೇ ಸಂದಭ೯ ಪೊನ್ನಚ್ಚನ ಮಧುಶೂದನ್ ಸಂಗ್ರಹದ ಜಾನಪದ ಪರಿಕರಗಳ ಪ್ರದಶ೯ನ ಕೂಡ ಆಯೋಜಿತವಾಗಿದೆ, ಸಂಜೆ 6 ಗಂಟೆಯಿಂದ ಯುವದಸರಾ ಆಯೋಜಿತವಾಗಿದೆ. ಅಕ್ಟೋಬರ್ 11 ರಂದು ಶುಕ್ರವಾರ ಆಯುಧಪೂಜಾ ದಿನ ಸಂಜೆ 6 ಗಂಟೆಗೆ ಮಡಿಕೇರಿಯ ನಾಟ್ಯ ಕಲಾ ಡಾನ್ಸ್ ಸ್ಟುಡಿಯೋ ತಂಡದಿಂದ ಡಾನ್ಸ್ ಸಂಗಮ, ಟೀಂ ಇಂಟೋಪೀಸ್ ವೀರಾಜಪೇಟೆ ತಂಡದಿಂದ ನೖತ್ಯವೈವಿಧ್ಯ, ಮೈಸೂರಿನ ನಾದವಿದ್ಯಾಲಯ ಸಂಗೀತ ನೖತ್ಯ ಅಕಾಡೆಮಿ ತಂಡದಿಂದ ಮಹಿಷಾಸುರ ಮಧಿ೯ನಿ ನೖತ್ಯ , ಮಡಿಕೇರಿಯ ಕಂಚಿಕಾಮಾಕ್ಷಿ ತಂಡದಿಂದ ನೖತ್ಯ, ರಾತ್ರಿ 8.30 ಗಂಟೆಯಿಂದ ಖ್ಯಾತ ಹಿನ್ನಲೆ ಗಾಯಕ, ಸಂಗೀತ ನಿದೇ೯ಶಕರಾದ ಅಜು೯ನ್ ಜನ್ಯ, ರಾಜೇಶ್ ಕೖಷ್ಣನ್, ಶಮಿತಾ ಮಲ್ನಾಡ್ ತಂಡದಿಂದ ಸಂಗೀತ ರಸಮಂಜರಿ. ಅಕ್ಟೋಬರ್ 12 ರಂದು ಶನಿವಾರ ವಿಜಯದಶಮಿ ಸಂಜೆ 6 ಗಂಟೆಯಿಂದ ಜೀ ಕನ್ನಡ ಸರಿಗಮಪ ಲಿಟಲ್ ಚಾಂಪ್ 19ರ – ರನ್ನರ್ ಅಪ್ ತನುಶ್ರೀ ಮಂಗಳೂರು ಬಾಳೆಲೆಯ ಸರಿಗಮಪ ಗಾಯಕ ಅನ್ವಿತ್ ಹಾಗೂ ಬೆಂಗಳೂರಿನ , ಪ್ರಜ್ಞಾ ಮರಾಠೆ ಅವರಿಂದ ಸಂಗೀತ ಸಂಜೆ , ಕನ್ನಡ ಸಿರಿ ಸ್ನೇಹಬಳಗ ಲೋಕೇಶ್ ಸಾಗರ್ ತಂಡದಿಂದ ಗಾನಸುಧೆ, ಪೊನ್ನಂಪೇಟೆಯ ನಾಟ್ಯ ಸಂಕಲ್ಪ ತಂಡದಿಂದ ನೖತ್ಯ ವೈವಿಧ್ಯ , ಮೈಸೂರಿನ ನೖತ್ಯ ವಿದ್ಯಾಪೀಠ ತಂಡದಿಂದ ಕನ್ನಡ ನೖತ್ಯ ಸಿರಿ , ರಾತ್ರಿ 10 ಗಂಟೆಯಿಂದ ಮರುದಿನ ಬೆಳಗ್ಗಿನ ಜಾವದವರೆಗೂ ಖ್ಯಾತ ತಂಡದಿಂದ ಸಂಗೀತ ರಸಮಂಜರಿ ಆಯೋಜಿತವಾಗಿದೆ ಎಂದು ಅನಿಲ್ ಹೆಚ್ ಟಿ ಮಾಹಿತಿ ನೀಡಿದ್ದಾರೆ. ದಸರಾ ಸಾಂಸ್ಕೖತಿಕ ಕಾಯ೯ಕ್ರಮಗಳು ನಡೆಯುವ ಗಾಂಧಿ ಮೈದಾನದಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ, ವೈದ್ಯಕೀಯ ನೆರವಿಗೂ ಜಿಲ್ಲಾಧಿಕಾರಿಗಳ ಸಹಕಾರದಿಂದ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಮಡಿಕೇರಿ ದಸರಾ ಸಾಂಸ್ಕೖತಿಕ ಸಮಿತಿಯಲ್ಲಿ ಸಂಚಾಲಕರಾಗಿ ತೆನ್ನೀರಾ ಮೈನ, ಸದಸ್ಯರಾಗಿ ಕುಡೆಕಲ್ ಸಂತೋಷ್, ಲೀಲಾಶೇಷಮ್ಮ, ವೀಣಾಕ್ಷಿ ರವಿಕುಮಾರ್, ಭಾರತಿ ರಮೇಶ್, ಮಿನಾಜ್, ಪ್ರವೀಣ್, ಪುದಿಯನೆರವನ ರೇವತಿ ರಮೇಶ್, ಪಾಲೆಯಂಡ ರೂಪಾ ಸುಬ್ಬಯ್ಯ, ಸತ್ಯ ಮಂಜು, ಕವನ್ ಕುತ್ತೋಳಿ, ಅಜು೯ನ್ ರಾಜೇಂದ್ರ, ದಿವಾಕರ್ ರೈ, ಚೇಂದ್ರಿಮಾಡ ವಿನು ಈರಪ್ಪ, ನಿರಂಜನ್, ತಳೂರು ಡೀನಾ ವಿನಯಕಾಂತ್ ಕಾಯ೯ನಿವ೯ಹಿಸಿ ತಂಡಗಳ ಆಯ್ಕೆ ಮಾಡಿದ್ದಾರೆ ಎಂದು ಸಾಂಸ್ಕೖತಿಕ ಸಮಿತಿ ಪ್ರಕಟಣೆ ತಿಳಿಸಿದೆ.