ಸಿದ್ದಾಪುರ ಅ.10 NEWS DESK : ಒಂದು ಕಾಲದಲ್ಲಿ ಸಮಾಜದ ಕನ್ನಡಿಯಾಗಿದ್ದ ಅವಿಭಕ್ತ ಕುಟುಂಬಗಳು ಶಿಕ್ಷಣ,ಉದ್ಯೋಗ, ವ್ಯಾಪಾರ ಎಂಬ ಇತ್ಯಾದಿ ವ್ಯಾವಹಾರಿಕ ಕಾರಣಗಳಿಂದ ಕುಟುಂಬ ಸರಪಳಿ ತೊರೆದು ದೂರವಾಗಿದ್ದ ಕುಟುಂಬಗಳನ್ನು ಒಂದೇ ಸೂರಿನಡಿ ಕೂಡಿಸುವಲ್ಲಿ ಕೂರ್ಗ್ ಫ್ಯಾಮಿಲಿ ಕ್ರಿಕೆಟ್ ಮತ್ತು ಪುಟ್ಬಾಲ್ ಕಪ್ ಪಂದ್ಯಾವಳಿ ಯಶಸ್ವಿಯಾಗಿದೆ. ವಿರಾಜಪೇಟೆ ಟರ್ಫ್ ಮೈದಾನದಲ್ಲಿ ನಡೆದ ಎರಡು ದಿನಗಳ ಪಂದ್ಯಾವಳಿಯಲ್ಲಿ ಕುಟುಂಬ ಸದಸ್ಯರನ್ನು ಅಜ್ಜಿ,ತಾತಂದಿರು ತಮ್ಮ ಮೊಮ್ಮಕ್ಕಳು,ಮರಿ ಮೊಮ್ಮಕ್ಕಳನ್ನು ಒಂದೇ ವೇದಿಕೆಯಲ್ಲಿ ಕಣ್ತುಂಬಿಕೊಂಡರು.ಪಂದ್ಯಾವಳಿ ನೆಪ ಮಾತ್ರವಾದರೂ ತಮ್ಮ ಮೊಮ್ಮಕ್ಕಳನ್ನು ಕಂಡ ಒಡನೆ ಆನಂದ ಬಾಷ್ಪ ಹರಿಸಿ ಚುಂಬಿಸಿ ಬಾಚಿ ತಬ್ಬಿಕೊಂಡ ದೃಶ್ಯ ಮನ ಕಲಕಲಕುವಂತಿತ್ತು. ಒಂದೆಡೆ ಕ್ರಿಡಾಕೂಟ ನಡೆಯುತ್ತಿದ್ದರೆ ಮತ್ತೊಂದೆಡೆ ತಮ್ಮ ಮೊಮ್ಮಕ್ಕಳಿಗೆ ಉಣ ಬಡಿಸುತ್ತಿದ್ದ ದೃಷ್ಯ ಮನಮೋಹಕವಾಗಿತ್ತು. ಕುಟುಂಬಕ್ಕೆ ಬಂದು ಸೇರಿದ ನವ ವಧುಗಳು ಪರಸ್ಪರ ಪರಿಚಯ ಮಾಡಿಕೊಳ್ಳುತ್ತ ಇದ್ದರೆ ಮಿಂಚಿ ಮರೆಯಾದ ಅವಿಭಕ್ತ ಕುಟುಂಬಗಳ ಗತಕಾಲದ ವೈಭವವನ್ನು ಸಾರುತ್ತಿದ್ದವು. ಒಟ್ಟು ಎಂಟು ತಂಡಗಳು ಪಾಲ್ಗೊಂಡಿದ್ದ ಕೌಟುಂಬಿಕ ಕ್ರಿಕೆಟ್ ಮತ್ತು ಪುಟ್ಬಾಲ್ ಪಂದ್ಯಾವಳಿಯಲ್ಲಿ ಕ್ರಿಕೆಟ್ ಅಮಿಗೋಸ್ ಅಡಿಗೋಸ್ ತಂಡವು ಪ್ರಥಮ ಹಾಗೂ ಸ್ಪೀಡ್ ಬಾಯ್ಸ್ ದ್ವಿತಿಯ ಸ್ಥಾನ ಪಡೆಯಿತು. ಪುಟ್ಬಾಲ್ ಪಂದ್ಯದಲ್ಲಿ ಪ್ರಥಮ ಮ್ಯಾಡ್ರಿಡ್ ಎಫ್ಸಿ ತಂಡ ಪ್ರಥಮ ಹಾಗೂ ಪವರ್ ಲೈನ್ ಬಾಯ್ಸ್ ತಂಡ ದ್ವಿತೀಯ ಸ್ಥಾನ ಪಡೆಯಿತು. ಬೆಸ್ವ್ ಗೋಲಿ ಪ್ರಶಸ್ತಿಗೆ ಪತ್ರಕರ್ತ ಅಜೀಜ್ ಭಾಜನರಾದರೆ, ಪಂದ್ಯ ಪುರುಷೋತಮ ಪ್ರಶಸ್ತಿ ಯನ್ನು ಬಾರಿಹ್ ಪಡೆದುಕೊಂಡರು. ವಿದೇಶದಲ್ಲಿ ನೆಲೆಸಿರುವ ಕುಟುಂಬ ಸದಸ್ಯರು ಕೂಡಾ ಎರಡು ದಿನದ ಈ ಕೌಟುಂಬಿಕ ಕ್ರೀಡಾ ಕೂಟದಲ್ಲಿ ಪಾಲ್ಗೊಂಡು ಮಧುರ ಸಮ್ಮಿಲನಕ್ಕೆ ಸಾಕ್ಷಿಯಾದರು.