ನಾಪೋಕ್ಲು ಅ.26 NEWS DESK : ಡಿವೈನ್ ಪಾರ್ಕ್ ಆಧ್ಯಾತ್ಮಿಕ ಪ್ರಯೋಗಶಾಲೆಯಾಗಿ ಮಾನವನ ಕಲ್ಯಾಣಕ್ಕಾಗಿ ಸುದ್ದಿ ಮಾಡದೆ ಸೇವೆಗೈಯ್ಯುತ್ತಿದೆ ಎಂದು ಡಿವೈನ್ ಪಾರ್ಕಿನ ಸಂಪನ್ಮೂಲ ವ್ಯಕ್ತಿ ಸುಂದರ ಗೌಡ ಹೇಳಿದರು. ಉಡುಪಿಯ ಸಾಲಿಗ್ರಾಮದ ಡಿವೈನ್ ಪಾರ್ಕ್ ಟ್ರಸ್ಟ್‍ನ ಅಂಗ ಸಂಸ್ಥೆಯಾದ ಮೂರ್ನಾಡಿನ ವಿವೇಕ ಜಾಗೃತ ಬಳಗದ ವತಿಯಿಂದ ಮೂರ್ನಾಡು ಗೌಡ ಸಮಾಜದಲ್ಲಿ ಆಯೋಜಿಸಲಾಗಿದ್ದ ಆತ್ಮೋನ್ನತಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಆತ್ಮಶಕ್ತಿ ಪಶುತ್ವದಿಂದ ಮಾನವತ್ವದ ಮೂಲಕ ದೈವತ್ವಕ್ಕೆ ಇರುವ ಸುಲಭ ವಿಧಾನ. ಒಮ್ಮೆ ಬರುವ ಮನುಷ್ಯ ಜನ್ಮವನ್ನು ದೇವರ ದರ್ಶನ ಮತ್ತು ಮಧುರ ವಾಣಿಯನ್ನು ಪಡೆದು ಸಾರ್ಥಕ ಮಾಡಿಕೊಳ್ಳುವುದೇ ಆಗಿದೆ ಎಂದರು. ಕಾರ್ಯಕ್ರಮದಲ್ಲಿ ಶೃತಿ ಸ್ವಾಗತಿಸಿದರು, ಮೂರ್ನಾಡಿನ ವಿವೇಕ ಜಾಗೃತ ಬಳಗದ ಅಧ್ಯಕ್ಷ ದಿವ್ಯ ತೇಜಕುಮಾರ್ ವಂದಿಸಿದರು. ಬಲಮುರಿಯಲ್ಲಿ ನದಿಗೆ ಹಾರಿದ ವ್ಯಕ್ತಿಯನ್ನು ಬದುಕಿಸಿ ಹೊರ ತಂದ ಬಿಪಿನ್ ಅವರನ್ನು ಬಳಗದ ಪರವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ 170ಕ್ಕೂ ಅಧಿಕ ಸದಸ್ಯರು ಪಾಲ್ಗೊಂಡು ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.
ವರದಿ : ದುಗ್ಗಳ ಸದಾನಂದ.