ಮಡಿಕೇರಿ ಅ.26 NEWS DESK : ಭಾರತೀಯ ವಿದ್ಯಾ ಭವನ ಕೊಡಗು ಕೇಂದ್ರದ ವತಿಯಿಂದ ಮಾನಸಿಕ ಅಸ್ವಸ್ಥ ತೆ ಮತ್ತು ಸಮಸ್ಯೆಗಳ ನಿವಾರಣೆಗೆ (ಆಪ್ತ ಸಮಾಲೋಚನೆ ಮತ್ತು ಥೆರಪಿಗಳ ಸೌಲಭ್ಯ ಪ್ರಾರಂಭಿಸಲಾಗಿದೆ, ಕೊಡಗು ಜಿಲ್ಲೆಯಲ್ಲಿ ಮಾನಸಿಕ ಆರೋಗ್ಯದ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಮತ್ತು ಅದಕ್ಕೆ ಸಂಬಂಧಿಸಿದ ಸೇವೆಗಳು ಆರ್ಥಿಕವಾಗಿ ಹೊರೆಯಾಗದ ರೀತಿಯಲ್ಲಿ ಜನರಿಗೆ ದೊರಕುವಂತೆ ಮಾಡುವುದು ಪ್ರಾಜೆಕ್ಟ್ ಮನಸ್ವಿಯ ಉದ್ದೇಶವಾಗಿದ್ದು . ‘ಸಮರ್ಥ ಮನ, ಸ್ವಸ್ಥ ಜೀವನ’ದ ಧ್ಯೇಯದಿಂದ ಈ ಯೋಜನೆಯನ್ನು ಭಾರತೀಯ ವಿದ್ಯಾ ಭವನ ಪ್ರಾರಂಭಿಸಿದೆ ಎಂದು ಭವನದ ಜಿಲ್ಲಾ ಕಾಯ೯ದಶಿ೯ ಬಾಲಾಜಿಕಶ್ಯಪ್ ತಿಳಿಸಿದ್ದಾರೆ. ಕೊಡಗಿನ ಜನತೆಗೆ ಲಭ್ಯವಾಗುವಂತೆ ‘ಪ್ರಾಜೆಕ್ಟ್ ಮನಸ್ವಿ’ ಎಂಬ ಯೋಜನೆಯನ್ನು ಇದೀಗ ಅನುಭವೀ ತಜ್ಞರ ಮಾರ್ಗದರ್ಶನ ಹಾಗೂ ಸಲಹೆಗಳನ್ನು ನಗರದ ಓಂಕಾರೇಶ್ವರ ದೇವಾಲಯ ಬಳಿಯಲ್ಲಿನ ಭಾರತೀಯ ವಿದ್ಯಾಭವನ ಕೇಂದ್ರದಲ್ಲಿ ಪಡೆಯಬಹುದಾಗಿದೆ. ಮಕ್ಕಳನ್ನೂ ಸೇರಿ ಎಲ್ಲ ವಯೋಮಾನದ ಮಂದಿಗೆ ಈ ಸೇವೆಗಳು ಅನ್ವಯಿಸುತ್ತವೆ. ಮಾನಸಿಕ ಒತ್ತಡ, ಆತಂಕ, ಖಿನ್ನತೆ, ಕಲಿಕಾ ತೊಡಕು ಗಳು, ಕುಡಿತ ಮತ್ತಿತರ ವ್ಯಸನಗಳು ಹಾಗು ಇನ್ನು ಯಾವುದೇ ರೀತಿಯ ಮಾನಸಿಕ ಆರೋಗ್ಯದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಡಾ. ಜಿ.ಜಯರಾಮ, ನಿವೃತ್ತ ಮುಖ್ಯಸ್ಥರು, ಕ್ಲಿನಿಕಲ್ ಸೈಕಾಲಜಿ ವಿಭಾಗ, ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಸ್ಪೀಚ್ ಅಂಡ್ ಹಿಯರಿಂಗ್, ಮೈಸೂರು, ಡಾ. ವಾಸು, MD in Psychiatry, ವಿವೇಕ ಆಸ್ಪತ್ರೆ, ಮೈಸೂರು, , ಮಾನ ಎಂ. ಪಾರ್ಥ, ಕನ್ಸಲ್ಟಿಂಗ್ ಸೈಕಾಲಜಿಸ್ಟ್, ಮಡಿಕೇರಿ – ಇವರ ಸೇವೆಯನ್ನು ಪಡೆಯಲು ಕರೆ ಮಾಡಬೇಕಾದ ಸಂಖ್ಯೆ – ಭಾರತೀಯ ವಿದ್ಯಾಭವನ ಕಚೇರಿ, ಓಂಕಾರೇಶ್ವರ ದೇವಾಲಯ ರಸ್ತೆ, ಮಡಿಕೇರಿ, 93453429916.