ಮಡಿಕೇರಿ ಅ.30 NEWS DESK : ಶಿಕ್ಷಣ ಸಂಸ್ಥೆಗಳು ಭಾರತೀಯತೆಯೊಂದಿಗೆ ಉತ್ತಮ ಸಂಸ್ಕಾರವನ್ನೂ ಮಕ್ಕಳಿಗೆ ಭೋದಿಸುವ ಕೇಂದ್ರಗಳಾಗಬೇಕಾದ ಅನಿವಾಯ೯ತೆ ಇಂದಿನ ದಿನಗಳಲ್ಲಿದ್ದು, ಉತ್ತಮ ಸಂಸ್ಕಾರ ಹೊಂದಿದ ಮಕ್ಕಳೇ ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ ಸಮಾಜಕ್ಕೆ ಕೊಡುಗೆ ನೀಡಬಲ್ಲವರಾಗಿದ್ದಾರೆ ಎಂದು ಮಡಿಕೇರಿ ತಾಲ್ಲೂಕು ಜಾನಪದ ಪರಿಷತ್ ಅಧ್ಯಕ್ಷ, ಪತ್ರಕತ೯ ಅನಿಲ್ ಹೆಚ್.ಟಿ ಹೇಳಿದ್ದಾರೆ. ನಗರದ ಕೊಡಗು ವಿದ್ಯಾಲಯ ಶಾಲೆಯ ವೆಬ್ ಸೈಟ್ ಕೊಡಗು ವಿದ್ಯಾಲಯ ಡಾಟ್ ಕಾಮ್ ಗೆ ಚಾಲನೆ ನೀಡಿ ಮಾತನಾಡಿದ ಅನಿಲ್, ಕೊಡಗು ವಿದ್ಯಾಲಯ ಶಾಲೆಯನ್ನು 43 ವಷ೯ಗಳ ಹಿಂದೆ ಪ್ರಾರಂಭಿಸುವಲ್ಲಿ ದೇಶದ ಸೇನಾ ಪಡೆಯ ಪ್ರಥಮ ಮಹಾದಂಡನಾಯಕರಾಗಿದ್ದ ಫೀಲ್ಡ್ ಮಾಷ೯ಲ್ ಕಾಯ೯ಪ್ಪ ಅವರ ಮಹತ್ವದ ಕೊಡುಗೆ ಇದೆ. ಹೀಗಾಗಿ ಈ ಶಾಲೆಗೆ ಕಾಯ೯ಪ್ಪ ಅವರ ಹಾರೈಕೆ ಎಂದೆಂದಿಗೂ ಇರುತ್ತದೆ ಎಂದರಲ್ಲದೇ, ಭಾರತೀಯ ಹಬ್ಬ, ಉತ್ಸವಗಳನ್ನು ಆಚರಿಸುವ ಮೂಲಕ ವಿದ್ಯಾಥಿ೯ಗಳಲ್ಲಿ ಭಾರತೀಯತೆಯನ್ನು ಕಲಿಸುವ ನಿಟ್ಟಿನಲ್ಲಿ ಕೊಡಗು ವಿದ್ಯಾಲಯ ತನ್ನದೇ ಆದ ಮಹತ್ವದ ಕೊಡುಗೆ ನೀಡಿದೆ. ಇಂಥ ಶಿಕ್ಷಣ ಸಂಸ್ಥೆಗಳ ಅಗತ್ಯ ಇಂದಿನ ಕಾಲಘಟ್ಟದಲ್ಲಿ ಅತ್ಯಗತ್ಯವಾಗಿದೆ ಎಂದರು. ದೀಪಾವಳಿ ಸಂದಭ೯ ಮಕ್ಕಳು ಮನೆಯಲ್ಲಿ ಮೊಬೈಲ್ ದಾಸರಾಗಿ ಮೊಬೈಲ್ ಪ್ರಪಂಚದಲ್ಲಿಯೇ ಮುಳುಗದೇ ಮನೆಯ ಹಿರಿಯರೊಂದಿಗೆ, ನೆರೆಕರೆಯವರೊಂದಿಗೆ ಸಂಭ್ರಮಿಸುತ್ತಾ ಹಬ್ಬದ ಸಂಭ್ರಮ ಸವಿಯಬೇಕು, ಹಿಂದಿನ ಕಾಲದಲ್ಲಿದ್ದಂತೆಯೇ ಇಂದಿನ ಹಿರಿಯರಿಗೂ ಮಕ್ಕಳು ತಮ್ಮೊಂದಿಗೆ ಉತ್ಸಾಹದಿಂದ ಸಿಹಿಯನ್ನು ಹಂಚಿ ತಿನ್ನುತ್ತಾ, ಹಬ್ಬವನ್ನು ಆಚರಿಸಬೇಕೆಂಬ ಹಂಬಲ ಇರುತ್ತದೆ. ಈ ಬಯಕೆಯನ್ನು ಮಕ್ಕಳು ಈಡೇರಿಸುವ ಮೂಲಕ ದೀಪಾವಳಿಗೆ ಮತ್ತಷ್ಟು ಸಡಗರದೊಂದಿಗೆ ಹಬ್ಬವನ್ನು ಅಥ೯ಪೂಣ೯ವಾಗಿಸುವಂತೆಯೂ ಅನಿಲ್ ಕರೆ ನೀಡಿದರು. ದೀಪಾವಳಿ ಹಬ್ಬದ ಮೂಲಕ ಬೆಳಕಿಗೆ ಗೌರವ ನಮನ ಸಲ್ಲಿಸುವ ಸುವಣಾ೯ವಕಾಶ ಇದೆ, ಹಣತೆ ಹೇಗೆ ತನ್ನಲ್ಲಿನ ಬತ್ತಿಯನ್ನು ಸುಟ್ಟುಕೊಂಡು ತ್ಯಾಗಮಯಿ ಸಂಕೇತವಾಗಿ ಬೇರೆಯವರಿಗೆ ಒಳಿತಿನ ಬೆಳಕು ನೀಡುತ್ತದೆಯೋ ಅಂತೆಯೇ ನಾವೆಲ್ಲರೂ ಸಾಮಾಜಿಕ ಹೊಣೆಗಾರಿಕೆಯಿಂದ ನಮ್ಮಲ್ಲಿರುವ ನೆಮ್ಮದಿ, ಸಂತೋಷ ಎಂಬ ಬೆಳಕನ್ನೂ ಅದರ ಕೊರತೆ ಇರುವವರಿಗೆ ನೀಡುವ ಮೂಲಕ ಸಮಾಜವನ್ನು ಅಂಧಕಾರದಿಂದ ಬೆಳಕಿನತ್ತ ಸಾಗಿಸಬೇಕಾಗಿದೆ ಎಂದು ನುಡಿದ ಅನಿಲ್ , ಪಟಾಕಿಗಳನ್ನು ಸುಡಬೇಡಿ ಎಂದು ಹೇಳುವುದಕ್ಕಿಂತ ಪರಿಸರ ಸ್ನೇಹಿ ಪಟಾಕಿಗಳನ್ನು ಮುನ್ನೆಚ್ಚರಿಕೆಯಿಂದ ಹೊತ್ತಿಸಿ ಎಂಬುದು ಸೂಕ್ತವಾಗಿದೆ. ದೀಪದಂತೆ ಪಟಾಕಿಗಳು ಕೂಡ ಯಾವುದೇ ಹಬ್ಬದ ಸಂಭ್ರಮವನ್ನು ಹೆಚ್ಚಿಸುತ್ತದೆ, ಈ ನಿಟ್ಟಿನಲ್ಲಿ ವಿದ್ಯಾಥಿ೯ಗಳು ದೀಪಾವಳಿಯಂದು ಎಚ್ಚರಿಕೆಯಿಂದ ಪರಿಸರ ಸ್ನೇಹಿ ಪಟಾಕಿಗಳನ್ನೇ ಸಿಡಿಸುವ ಮೂಲಕ ಸಡಗರ ತಂದುಕೊಳ್ಳಿ ಎಂದೂ ಅನಿಲ್ ಹೆಚ್.ಟಿ ಕೋರಿದರು. ಕಾಯ೯ಕ್ರಮದಲ್ಲಿ ಕೊಡಗು ವಿದ್ಯಾಲಯದ ಆಡಳಿತ ಮಂಡಳಿ ನಿದೇ೯ಶಕರಾದ ಸಿ.ಎಸ್.ಗುರುದತ್, ಸಲಹೆಗಾರ ಕೊಕ್ಕಲೇರ ಕುಮಾರ್ ಸುಬ್ಬಯ್ಯ, ಜಿಲ್ಲಾ ಹೊಟೇಲ್ ರೆಸಾಟ್೯ ಅಸೋಸಿಯೇಷನ್ ಅಧ್ಯಕ್ಷ ಕುಂಡ್ಯೋಳಂಡ ದಿನೇಶ್ ಕಾಯ೯ಪ್ಪ, ನೀಮಾ ಸಂಸ್ಥೆಯ ಅಧ್ಯಕ್ಷ ಡಾ.ರಾಜಾರಾಮ್, ಪ್ರಾಂಶುಪಾಲರಾದ ಕೆ.ಎಸ್ .ಸುಮಿತ್ರಾ, ಆಡಳಿತಾಧಿಕಾರಿ ಪಿ.ರವಿ, ವೆಬ್ ಸೈಟ್ ವಿನ್ಯಾಸಗೊಳಿಸಿದ ಪ್ರತಿಷ್ಟ, ಎ.ನೀಲಮ್ಮ ಕಾಯ೯ಪ್ಪ , ಪುಣ್ಯ ಗುರುದತ್, ಹಾಜರಿದ್ದರು. ಶಿಕ್ಷಕಿಯರಾದ ಭಾರತಿ, ನೇತ್ರ , ರೇಖಾ ಕೆ.ಕೆ, ವೀಣಾ ಮೊಣ್ಣಪ್ಪ, ಕಾಯ೯ಕ್ರಮ ನಿವ೯ಹಿಸಿದರು.