ಮಡಿಕೇರಿ NEWS DESK ನ.1 : ಕಾಂಕ್ರಿಟ್ ಯಂತ್ರದಲ್ಲಿ ಕೈಕಳೆದುಕೊಂಡ ಹರೀಶ್ ಶೇಷಪ್ಪ ಅವರ ನೆರವಿಗೆ ಮಡಿಕೇರಿಯ ಗುಬ್ಬಿ ಸ್ಟುಡಿಯೋ ಮುಂದೆ ಬಂದಿದೆ. ಹರೀಶ್ ಅವರ ಪುತ್ರಿಯ ವಿದ್ಯಾಭ್ಯಾಸಕ್ಕಾಗಿ ನಗರದಲ್ಲಿ ಸಂಗ್ರಹಿಸಿದ 81 ಸಾವಿರ ರೂಪಾಯಿಗಳನ್ನು ಗುಬ್ಬಿ ಸ್ಟುಡಿಯೋದ ಪ್ರಮುಖರು ಹರೀಶ್ ಕುಟುಂಬಕ್ಕೆ ಹಸ್ತಾಂತರಿಸಿದರು. ನಗರದ ವಿಜಯ ವಿನಯಕ ದೇವಸ್ಥಾನದ ಬಳಿಯಿಂದ ಆರ್ಥಿಕ ನೆರವು ಸಂಗ್ರಹ ಕಾರ್ಯ ಆರಂಭಗೊಂಡಿತು. ನಗರಸಭಾ ಸದಸ್ಯೆ ಸವಿತಾ ರಾಕೇಶ್, ಶಕ್ತಿ ದಿನ ಪತ್ರಿಕೆಯ ಉಪಸಂಪಾದಕ ಸಂತೋಷ್ ಕುಡೆಕಲ್, ಶೋಭಾ ಮುತ್ತಪ್ಪ, ಗಾನವಿ, ಅಕ್ಷಯ್ ಎಸ್ ಎಮ್ ಗ್ರಾಫಿಕ್ಸ್, ಹರ್ಷಿತ ಶೆಟ್ಟಿ, ಜಯಶ್ರೀ ಕುಯ್ಯಮುಡಿ, ಅನಿತಾ, ದೀಕ್ಷಿತ್, ಜಾನ್ಸನ್, ರಂಜಿತ್ ಮ್ಯಾಡಿ, ಸುರೇಶ್ ಕುಲಾಲ್, ಕಿರಣ್, ಉದಯ, ರಂಜಿತ್ ಶೆಟ್ಟಿ, ವಿನಯ್ ಗುಬ್ಬಿ ಹಾಜರಿದ್ದರು. ನಗರದ ವಿವಿಧೆಡೆ ತೆರಳಿ ದಾನಿಗಳಿಂದ ಹಣ ಸಂಗ್ರಹಿಸಲಾಯಿತು. ಸಂಜೆ ವೇಳೆಗೆ 81 ಸಾವಿರ ರೂ. ಸಂಗ್ರಹವಾಯಿತು. ಗುಬ್ಬಿ ಸ್ಟುಡಿಯೋದ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.










