ಮಡಿಕೇರಿ ನ.4 NEWS DESK : ಹೆಚ್.ಐ.ವಿ ಅರಿವಿನ ಮಾಸಾಚರಣೆ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಕೇಂದ್ರ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ಹಾಗೂ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಎನ್ಎಸ್ಎಸ್ ಮತ್ತು ಆರ್.ಆರ್.ಸಿ ಘಟಕ ಸ್ವಯಂ ಸೇವಕರು ಹೆಚ್.ಐ.ವಿ ಏಡ್ಸ್ ಕುರಿತು ಬೀದಿ ನಾಟಕ ಹಾಗೂ Flash Mob ಕಾರ್ಯಕ್ರಮದ ಮೂಲಕ ಹೆಚ್.ಐ.ವಿ.ಏಡ್ಸ್ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಮೇಜರ್ ಡಾ. ಬಿ.ರಾಘವ ಹಾಗೂ ಉದ್ಘಾಟಕರಾದ ಡಾ. ಎಂ.ಪಿ.ಕೃಷ್ಣ ಹೆಚ್.ಐ.ವಿ ಬಗ್ಗೆ ಮಾತನಾಡಿ, ಅರಿವು ಮೂಡಿಸಿದರು. ಕಾರ್ಯಕ್ರಮದಲ್ಲಿ ICTC ಜಿಲ್ಲಾ ಆಸ್ಪತ್ರೆ ಮಡಿಕೇರಿಯ ಆಪ್ತಸಮಾಲೋಚಕಿ ಅನಿತಾ ಕುಮಾರಿ, ಅಧ್ಯಾಪಕರಾದ ಡಾ.ಎ.ಗಾಯತ್ರಿ ದೇವಿ, ಡಾ.ಆರ್.ರಾಜೇಂದ್ರ, ಡಾ.ಪಿ.ಎ.ಗೀತಾಂಜಲಿ, ಡಾ.ಪ್ರದೀಪ್ ಆರ್ ಭಂಡಾರಿ, ಡಾ. ಹೆಚ್.ಕೆ.ರೇಣುಶ್ರೀ, ಕಾಲೇಜಿನ ಎನ್ಎಸ್ಎಸ್ ಘಟಕದ ಎಲ್ಲಾ ಸ್ವಯಂಸೇವಕರು ಹಾಜರಿದ್ದರು. ಹೆಚ್.ಐ.ವಿ ಚಿಕಿತ್ಸೆ ಗೆ ಸಕಾರ್ಯರದಿಂದ ಸಿಗುವ ಸೇವಾ ಸೌಲಭ್ಯದ ಬಗ್ಗೆ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜ್, ಐಟಿಐ ಜಂಕ್ಷನ್ ಹಾಗೂ ಕಾನ್ವೆಂಟ್ ಜಂಕ್ಷನ್ ನಲ್ಲಿ ಬೀದಿ ನಾಟಕ ನಡೆಸಲಾಯಿತು. ಬೀದಿ ನಾಟಕವು ಎನ್ಎಸ್ಎಸ್ ಯೋಜನಾಧಿಕಾರಿಗಳಾದ ಡಾ.ಕೆ.ಶೈಲಶ್ರೀ ಮತ್ತು ಅಲೋಕ್ ಬಿ.ಜೈ ಉಸ್ತುವಾರಿಯಲ್ಲಿ ನಡೆಯಿತು.