ಮಡಿಕೇರಿ ನ.9 NEWS DESK : ಕೊಡವ ಜನಪದ ಕಲೆಗಳಿಗೆ ಒತ್ತು ನೀಡುವ ಸಲುವಾಗಿ ಮಡಿಕೇರಿಯ ಸುಬ್ರಹ್ಮಣ್ಯ ಕೊಡವ ಕೇರಿಯ ನೇತೃತ್ವದಲ್ಲಿ ನಗರದ ಕೊಡವ ಸಮಾಜದಲ್ಲಿ ಕೊಡವ ಅಂತರ್ ಕೇರಿ ಜನಪದ ಸಾಂಸ್ಕೃತಿಕ ಮೇಳ ಗಮನ ಸೆಳೆಯಿತು. ಕೊಡವ ಸಮಾಜದ ಆವರಣದಲ್ಲಿ ಮಡಿಕೇರಿಯ 12 ಕೇರಿಗಳ ಕೊಡವ ಜನಾಂಗ ಬಾಂಧವರು ಭಾಗವಹಿಸಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಅಂತರ್ ಕೇರಿಗಳ ನಡುವೆ ಬೊಳಕಾಟ್, ಕೋಲಾಟ್, ಮಹಿಳೆಯರ ಉಮ್ಮತಾಟ್, ಕಪ್ಪೆಯಾಟ್, ಬಾಳೋಪಾಟ್, ತಾಲಿಪಾಟ್, ಸಮ್ಮಂದ ಅಡ್‍ಕುವೋ, ವಾಲಗತಾಟ್, ಕೊಡವ ಹಾಡು ಸೇರಿದಂತೆ ವಿವಿಧ ಸ್ಪರ್ಧೆಗಳು ಜರುಗಿದವು. ಕೊಡವ ಮಹಿಳೆಯರು, ಪುರುಷರ ಸಹಿತ ಮಕ್ಕಳು ಕೂಡ ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದರು. ಅತ್ಯುತ್ತಮ ಪ್ರದರ್ಶನ ನೀಡಿದ ಕೊಡವ ಕೇರಿಗೆ ಗಣ್ಯರು ಬಹುಮಾನ ನೀಡಿ ಗೌರವಿಸಿದರು. ಮಡಿಕೇರಿ ಕೊಡವ ಸಮಾಜ ಅಧ್ಯಕ್ಷ ಎಂ.ಪಿ ಮುತ್ತಪ್ಪ, ಅಂತರ್ ಕೇರಿ ಮೇಳದ ಅಧ್ಯಕ್ಷ ನಾಳಿಯಂಡ ಎಂ.ನಾಣಯ್ಯ, ಸುಬ್ರಮಣ್ಯ ಕೊಡವ ಕೇರಿ ಅಧ್ಯಕ್ಷ ಅರೆಯಡ ರಮೇಶ್, ಉಪಾಧ್ಯಕ್ಷ ಕೇಕಡ ಕಿರಣ್, ಸಂಚಾಲಕಿ ಬೊಪ್ಪಂಡ ಸರಳ ಕರುಂಬಯ್ಯ, ಖಜಾಂಚಿ ನಾಟೋಳಂಡ ಪ್ರಕಾಶ್, ಕೊಡವ ಸಮಾಜದ ನಿರ್ದೇಶಕರು ಹಾಜರಿದ್ದರು.