ಚೆಟ್ಟಳ್ಳಿ ನ.19 NEWS DESK : ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಕೇಂದ್ರದಲ್ಲಿ ಮೂರುದಿನಗಳ ಕಾಲ ಜೇನುಕೃಷಿ ತರಬೇತಿ ಕಾರ್ಯಕ್ರಮ ನಡೆಯಿತು. ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಕೇಂದ್ರದಲ್ಲಿ ಪ್ರಾರಂಭಗೊಂಡು ನಂತರ ಪೊನ್ನಂಪೇಟೆಯ ಅರಣ್ಯ ಕಾಲೇಜಿನಲ್ಲಿ ಜೇನುಕೃಷಿ ಪ್ರಾತ್ಯಕ್ಷಿಕಾ ತರಬೇತಿಯನ್ನು ಕಾಲೇಜಿನ ಮುಖ್ಯಸ್ಥರಾದ ಡಾ.ಕೆಂಚಾರೆಡ್ಡಿ ನೀಡಿದರು. ನ.14ರಂದು ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಕೇಂದ್ರದಲ್ಲಿ ಸಮಾರೋಪ ನೆರವೇರಿತು. ಕಾರ್ಯಾಗಾರದಲ್ಲಿ ಕೇಂದ್ರದ ಮುಖ್ಯಸ್ಥ ಡಾ. ರಾಜೇಂದ್ರನ್, ಹಣ್ಣಿನ ವಿಜ್ಞಾನಿಗಳಾದ ಡಾ.ಮುರುಳಿದರ್, ಡಾ.ನಯನ್ ದೀಪಕ್.ಜಿ, ಡಾ.ಎ.ಟಿರಾಣಿ ಹಾಜರಿದ್ದರು. ಕಾರ್ಯಕ್ರಮದಲ್ಲಿ ಗೋಣಿಕೊಪ್ಪ ಕಾಫಿಮಂಡಳಿಯ ವಿಸ್ತರಣಾ ಉಪನಿರ್ದೇಶಕರಾದ ಡಾ.ಶ್ರೀದೇವಿ, ಕೊಡಗು ಜಿಲ್ಲಾ ಜೇನುಕೃಷಿಕರ ಸಂಘದ ಮುಖ್ಯಸ್ಥ ಎನ್.ಸಿ.ಸುಬ್ಬಯ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಐಐಹೆಚ್ಆರ್ ಗೀತೆಯೊಂದಿಗೆ ಕಾರ್ಯಾಗಾರ ಪ್ರಾರಂಭಗೊಂಡು ಕೀಟ ವಿಜ್ಞಾನಿ ಡಾ. ಎ.ಟಿ.ರಾಣಿ ಸ್ವಾಗತಿಸಿದರು. ವಿಜ್ಞಾನಿ ಡಾ. ಬಿ.ಎಂ.ಮುರುಳಿಧರ್ ವಂದಿಸಿದರು. ಚೈತ್ರ ನಿರೂಪಿಸಿದರು. ಕಾರ್ಯಾಗಾರದ ಮೇಲ್ವಿಚಾರಕ ಕೇಂದ್ರದ ಕೀಟ ವಿಜ್ಞಾನಿ ಡಾ.ರಾಣಿ ಜೇನು ಕೃಷಿಯ ಬಗ್ಗೆ ತರಬೇತಿ ನೀಡಿದರು.