ಮಡಿಕೇರಿ NEWS DESK ನ.18 : ದಾಸಶ್ರೇಷ್ಠ, ಸಂತಕವಿ ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಿದ್ದಾರೆ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಅವರು ತಿಳಿಸಿದ್ದಾರೆ. ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಗಾಂಧಿ ಭವನದಲ್ಲಿ ಸೋಮವಾರ ನಡೆದ ಕನಕದಾಸರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಮಾಜದಲ್ಲಿನ ಅಸಮಾನತೆ, ಕಂದಾಚಾರ ಹಾಗೂ ಮೌಢ್ಯವನ್ನು ಕೀರ್ತನೆಗಳ ಮೂಲಕ ಹೋಗಲಾಡಿಸಲು ಶ್ರಮಿಸಿದ್ದಾರೆ ಎಂದು ಡಾ.ಮಂತರ್ ಗೌಡ ಅವರು ವಿವರಿಸಿದರು. ಕನಕದಾಸರ ಕೀರ್ತನೆಗಳು ಸಾರ್ವಕಾಲಿಕವಾಗಿದ್ದು, ಪ್ರತಿಯೊಬ್ಬರೂ ಅಧ್ಯಯನ ಮಾಡಬೇಕು. ಕನಕದಾಸರ ಕೀರ್ತನೆಗಳು ಮತ್ತು ಮಾರ್ಗದರ್ಶನವನ್ನು ಅಳವಡಿಸಿಕೊಳ್ಳು ವಂತಾಗಬೇಕು ಎಂದು ಡಾ.ಮಂತರ್ ಗೌಡ ಅವರು ಪ್ರತಿಪಾದಿಸಿದರು. ಕನಕದಾಸರು ಸಮಾಜದಲ್ಲಿರುವ ತಾರತಮ್ಯ ಹೋಗಲಾಡಿಸಲು ಪ್ರಯತ್ನಿಸಿದ್ದಾರೆ. ಎಲ್ಲರೂ ಸಮಾನವಾಗಿ ಬದುಕಬೇಕು ಎಂಬುದನ್ನು ಒತ್ತಿ ಹೇಳಿದ್ದಾರೆ ಎಂದು ಶಾಸಕರು ನುಡಿದರು. ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಮಾತನಾಡಿ ಕನಕದಾಸರ ಪ್ರಸಿದ್ಧ ಕೀರ್ತನೆಯಾದ ಕುಲ-ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲವನ್ನೇನಾದರೂ ಬಲ್ಲಿರಾ, ಇದು ಇಂದಿಗೂ ಪ್ರಸ್ತುತವಾದ ಮಾತಾಗಿದೆ ಎಂದು ತಿಳಿಸಿದರು. ಕನಕದಾಸರ ಕೀರ್ತನೆಯಲ್ಲಿರುವ ಸಂದೇಶವನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದರು. ಸಾಹಿತಿ ಉ.ರಾ.ನಾಗೇಶ್ ಅವರು ಮಾತನಾಡಿ ಕನಕದಾಸರು ದಾಸ ಶ್ರೇಷ್ಠರಲ್ಲಿ ಒಬ್ಬರು. ಸಮಾಜದಲ್ಲಿರುವ ಅಂಕು-ಡೊಂಕು, ತಾರತಮ್ಯವನ್ನು ಖಂಡಿಸಿ, ತಮಗಿದ್ದ ಸಿರಿತನದ ವೈಭವವನ್ನು ತ್ಯಜಿಸಿ ಜನರ ಕಷ್ಟಕ್ಕೆ ಸ್ಪಂದಿಸಲು ಮುಂದಾದರು ಎಂದು ನುಡಿದರು. ಸುಮಾರು 300 ಹೆಚ್ಚು ಕೀರ್ತನೆಗಳನ್ನು ರಚಿಸಿರುವ ಕನಕದಾಸರು ತಮ್ಮಲ್ಲಿರುವ ಶ್ರದ್ದೆ, ಭಕ್ತಿಯಿಂದ ಶ್ರೀ ಕೃಷ್ಣನ ದರ್ಶನವನ್ನು ಪಡೆದರು. ಇದಕ್ಕೆ ಸಾಕ್ಷಿ ಉಡುಪಿಯಲ್ಲಿರುವ ಕನಕನ ಕಿಂಡಿಯನ್ನು ಕಾಣಬಹುದಾಗಿದೆ. ಇದರಿಂದ ಕನಕದಾಸರ ಸಾಧನೆ, ಶಕ್ತಿಯು ತಿಳಿಯುತ್ತದೆ ಎಂದು ಹೇಳಿದರು. ಯಾವುದೇ ವ್ಯಕ್ತಿಗೆ ಶಕ್ತಿ ಬರಬೇಕೆಂದರೆ ಸಾಧನೆ ಮುಖ್ಯವಾಗುತ್ತದೆ. ಸಾಧನೆ ಮಾಡಲು ಪರಿಶ್ರಮ ಮುಖ್ಯ. ತಮ್ಮನ್ನು ತಾವು ನಂಬಿ ಇತರರಿಗೆ ಕೇಡನ್ನು ಬಯಸದೆ ಉತ್ತಮ ದಾರಿಯಲ್ಲಿ ತನ್ನ ಸಾಧನೆಯ ದಾರಿಯಲ್ಲಿ ನಡೆದರೆ ಪ್ರತಿಫಲ ದೊರೆಯುತ್ತದೆ ಎಂದು ಉ.ರಾ.ನಾಗೇಶ್ ಅವರು ಪ್ರತಿಪಾದಿಸಿದರು. ಸಂತರು ಲೋಕದ ಜನರ ಬಾಳು, ಬದುಕು, ಶಾಂತಿ, ನೆಮ್ಮದಿ ನೆಲಸಲೆಂದು ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದಂತವರು. ಆ ದಿಸೆಯಲ್ಲಿ ಕನಕದಾಸರು ಶ್ರೇಷ್ಠ ಸಂತರ ಸಾಲಿನಲ್ಲಿ ಇಂದಿಗೂ ಪ್ರಸ್ತುತರಾಗಿದ್ದಾರೆ ಎಂದರು. ಸಂತ ಶ್ರೇಷ್ಠ ಕನಕದಾಸರ ಆದರ್ಶಗಳು, ಕೀರ್ತನೆಗಳು ಇಂದಿಗೂ ಪ್ರಸ್ತುತವಾಗಿದೆ. ಅವುಗಳನ್ನು ಯುವ ಜನರು ತಿಳಿದುಕೊಳ್ಳಬೇಕು ಎಂದು ಉ.ರಾ.ನಾಗೇಶ್ ಅವರು ಹೇಳಿದರು. ‘ದಾಸ ಶ್ರೇಷ್ಠ ಕನಕದಾಸರು ಉತ್ಸವ ಮೂರ್ತಿಯಲ್ಲ, ಬದಲಾಗಿ ಉತ್ಸಾಹದ ಸ್ಪೂರ್ತಿ, ಭಕ್ತಿ, ಜ್ಞಾನ ಹಾಗೂ ಮುಕ್ತಿ ಮಾರ್ಗದ ಮೂಲಕ ಸಮಾಜಕ್ಕೆ ತಮ್ಮದೇ ಆದ ಸಂದೇಶ ನೀಡಿದ್ದಾರೆ ಎಂದು ಉ.ರಾ.ನಾಗೇಶ್ ಅವರು ಪ್ರತಿಪಾದಿಸಿದರು.’ ಕೊಡಗು ಜಿಲ್ಲಾ ಕುರುಬ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎ.ಗಂಗಾಧರ ಅವರು ಮಾತನಾಡಿ ದಾಸ ಶ್ರೇಷ್ಠ ಕನಕದಾಸರು ಸಮಾಜದಲ್ಲಿನ ಅಸಮಾನತೆ ಹೋಗಲಾಡಿಸಲು ತಮ್ಮ ಕೀರ್ತನೆಗಳ ಮೂಲಕ ಶ್ರಮಿಸಿದ್ದಾರೆ ಎಂದು ತಿಳಿಸಿದರು. ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್, ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ, ಜಾನಪದ ಪರಿಷತ್ತು ಮಡಿಕೇರಿ ತಾಲ್ಲೂಕು ಘಟಕದ ಅಧ್ಯಕ್ಷರಾದ ಅನಿಲ್ ಎಚ್.ಟಿ, ಪೌರಾಯುಕ್ತರಾದ ರಮೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಕುಮಾರ ಇತರರು ಇದ್ದರು.
Breaking News
- *ಕನಕದಾಸರು ಕೀರ್ತನೆಗಳ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಿದರು : ಶಾಸಕ ಡಾ.ಮಂತರ್ ಗೌಡ*
- *ಜೋಡುಬೀಟಿ- ಕುಂದ ಸಂಪರ್ಕ ರಸ್ತೆಗೆ ನಾಯಕ್ ಕೂಕಂಡ ಎನ್.ಪೊನ್ನಪ್ಪ ನಾಮಕರಣ : ಎಲ್ಲೆಡೆ ವೀರಯೋಧರಿಗೆ ಗೌರವಸಲ್ಲಿಸುವ ಕಾರ್ಯವಾಗಬೇಕು : ಕೊಟ್ಟುಕತ್ತಿರ ಸೋಮಣ್ಣ*
- *ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹೆಗ್ಗಳಕ್ಕೆ ಸುವರ್ಣ ಕರ್ನಾಟಕ ರಾಜ್ಯೋತ್ಸವದ ಪ್ರಶಸ್ತಿ*
- *ನ.19 ರಂದು ಮಡಿಕೇರಿ ತಲುಪಲಿದೆ ಮದ್ರಾಸ್ ಎಂಜಿನಿಯರಿಂಗ್ ಆರ್ಮಿ ಗ್ರೂಪ್ನ ಬೈಕ್ ರ್ಯಾಲಿ*
- *ಫೀ.ಮಾ.ಕಾರ್ಯಪ್ಪ ಕಾಲೇಜ್ ನಲ್ಲಿ ಕನಕದಾಸ ಜಯಂತಿಯ ಅರ್ಥಪೂರ್ಣ ಆಚರಣೆ : ದಾಸ ಸಾಹಿತ್ಯಕ್ಕೆ ಮಹತ್ವದ ಕೊಡುಗೆ ನೀಡಿದ ಕನಕದಾಸರು : ಮೇಜರ್ ಡಾ.ರಾಘವ ಶ್ಲಾಘನೆ*
- *ನ.21 ರಂದು ಮಡಿಕೇರಿಯಲ್ಲಿ ರಕ್ತದಾನ ಮತ್ತು ಕಣ್ಣು ತಪಾಸಣಾ ಶಿಬಿರ*
- *ಮಡಿಕೇರಿಯಲ್ಲಿ ವಕೀಲರ ಕ್ರೀಡಾಕೂಟ : ಕ್ರೀಡಾ ಸ್ಫೂರ್ತಿ ಜೀವನಕ್ಕೂ ಸ್ಫೂರ್ತಿಯಾಗಲಿ : ಶಾಸಕ ಡಾ.ಮಂತರ್ ಗೌಡ*
- ಕನಾ೯ಟಕ ಪ್ಲಾಂಟಸ್೯ ಅಸೋಸಿಯೇಷನ್ ನ ವಾಷಿ೯ಕ ಸಮ್ಮೇಳನ : ಕಾಫಿ ಕೃಷಿಕರ ನೆರವಿಗೆ ಸಕಾ೯ರ ಧಾವಿಸಬೇಕು : ಮ್ಯಾಥ್ಯು ಅಬ್ರಾಹಂ*
- *ಡಾ.ಸೂರ್ಯ ಕುಮಾರ್ ಅವರ “ಮಂಗಳಿ” ಪುಸ್ತಕ ಬಿಡುಗಡೆ*
- *ಸಿದ್ದಾಪುರದಲ್ಲಿ ನೃತ್ಯ ಸಂಭ್ರಮ : ಗಮನ ಸೆಳೆದ ನೃತ್ಯ ವೈಭವ*