ವಿರಾಜಪೇಟೆ ನ.25 NEWS DESK : ಕಡಂಗ ಅರಪಟ್ಟು ಗ್ರಾಮದ ದೇವರಕಾಡಿನಲ್ಲಿ ನೆಲೆಸಿರುವ ನೆಲ್ಯಾಳು ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದ ವಾರ್ಷಿಕ ಮಹಾಪೂಜಾ ಸೇವೆಯು ಶ್ರದ್ಧಾಭಕ್ತಿಯಿಂದ ನಡೆಯಿತು. ಮುಂಜಾನೆಯಿಂದಲೇ ಶ್ರೀ ಅಯ್ಯಪ್ಪ ಸ್ವಾಮಿಗೆ ಅಭಿಷೇಕ, ಕ್ಷೀರಾಭಿಷೇಕ, ಅಲಂಕಾರ ಸೇವೆ, ವಿಶೇಷ ಕರ್ಪೂರ ಆರತಿಯನ್ನು ಮಾಡಿ ಪ್ರಾರ್ಥಿಸಿದರು. ಗ್ರಾಮಸ್ಥರು ಹರಕೆ ವಸ್ತುಗಳಾದ ಹುಲಿ, ನಾಯಿ, ಹಂದಿ, ಹಸು ಮೊದಲಾದ ಸಾಕು ಪ್ರಾಣಿಗಳ ಮಣ್ಣಿನ ಮೂರ್ತಿಗಳನ್ನು ಸಮರ್ಪಿಸಿದರು. ದೇವಾಲಯದ ಅರ್ಚಕರಾದ ರಾಮ್ ಪ್ರಸಾದ್ ಭಟ್ ಪೂಜಾ ವಿಧಾನಗಳನ್ನು ನೆರವೇರಿಸಿದರು. ಮಧ್ಯಾಹ್ನ ನೆರೆದಿದ್ದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ನೆಲ್ಯಾಳು ಕುಟುಂಭಸ್ಥರು, ಗ್ರಾಮಸ್ಥರು ಉಪಸ್ಥಿತರಿದ್ದರು. ಪ್ರತಿವರ್ಷ ನ.16 ರಿಂದ ಡಿ.15 ರ ತನಕ ಈ ದೇವಾಲಯದಲ್ಲಿ ಪ್ರತಿದಿನ ನಿತ್ಯ ಪೂಜೆಯು ನಡೆಯುತ್ತದೆ.