ಸೋಮವಾರಪೇಟೆ ನ.25 NEWS DESK : ನಗರಳ್ಳಿ ಗ್ರಾಮದ ಕೂತಿನಾಡು ಶ್ರೀ ಸಬ್ಬಮ್ಮ ದೇವಿ ದೇವಾಲಯದ ಜೀರ್ಣೋದ್ಧಾರ ಮಾಡಲು ತೀರ್ಮಾನಿಸಿರುವ ಹಿನ್ನೆಲೆಯಲ್ಲಿ ನಗರಳ್ಳಿ ಗ್ರಾಮದ ದೇವರ ಬನದಲ್ಲಿ ಪ್ರತಿಷ್ಠಾಪನೆ ಬಗ್ಗೆ ಆರೋಡ ತಾಂಬೂಲ ಪ್ರಶ್ನೆ ಕಾರ್ಯಕ್ರಮ ನಡೆಯಿತು. ಮಂಗಳೂರಿನ ಕದ್ರಿ ದೇವಾಲಯದ ತಂತ್ರಿ ಎಸ್. ಶ್ರೀರಂಗ ಐತಾಳ್ ನೇತೃತ್ವದಲ್ಲಿ ನಡೆದ ತಾಂಬೂಲ ಪ್ರಶ್ನೆ ಕಾರ್ಯಕ್ರಮದಲ್ಲಿ ದೇವಸ್ಥಾನದ ದೈನಂದಿನ ಪೂಜೆ, ಆಚರಣೆಗಳು, ಮುಂದೆ ಯಾವ ರೀತಿಯಲ್ಲಿ ಮುಂದುವರೆಯಬೇಕು ಎಂದು ಅವರು ತಿಳಿಸಿದರು. ಕೂತಿ ನಾಡು ಶ್ರೀ ಸಬ್ಬಮ್ಮ ದೇವಿಯ ಉತ್ಸವಕ್ಕೆ ಸಂಬಂಧಿಸಿದ ಕೂತಿ, ನಗರಳ್ಳಿ, ಹೆಮ್ಮನಗದ್ದೆ, ಕುಂದಳ್ಳಿ, ಕನ್ನಳ್ಳಿ, ಬೇಕನಳ್ಳಿ, ಹಳ್ಳಿಯೂರು, ಬೆಟ್ಟದಳ್ಳಿ, ಬೆಟ್ಟದ ಕೊಪ್ಪ, ಜಕ್ಕನಳ್ಳಿ, ಇನಕನಳ್ಳಿ, ಕೊತ್ತನಳ್ಳಿ, ಕುಡಿಗಾಣ, ಬೆಂಕಳ್ಳಿ, ಬೀಕಳ್ಳಿ, ನಾಡ್ನಳ್ಳಿ, ತಡ್ಡಿಕೊಪ್ಪ, ಸಕಲೇಶಪುರ ತಾಲ್ಲೂಕಿನ ಓಡಳ್ಳಿ ಗ್ರಾಮಗಳ ಪ್ರಮುಖ ದೇವತೆಯಾಗಿದ್ದು, ಬಹಳ ಹಿಂದಿನಿಂದಲೂ ಇಲ್ಲಿ ಶ್ರದ್ಧಾ ಭಕ್ತಿಯಿಂದ ಪೂಜೆಗಳು ನಡೆದುಕೊಂಡು ಬರುತ್ತಿದೆ. ಈಗಿನ ದೇವಾಲಯವನ್ನು ಜೀರ್ಣೋದ್ಧಾರ ಮಾಡಲು ಸಮಿತಿ ತೀರ್ಮಾನಿಸಿದ್ದು, ತಾಂಬೂಲ ಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭ ಸಮಿತಿಯ ಅಧ್ಯಕ್ಷ ಕೆ. ಬಿ. ಜಗದೀಶ್, ಉಪಾಧ್ಯಕ್ಷ ಸಿ.ಎಸ್. ಬೋಪಯ್ಯ, ಕಾರ್ಯದರ್ಶಿ ಕೆ.ಯು. ಜಗದೀಶ್, ಖಜಾಂಚಿ ಎನ್.ಬಿ. ಸುರೇಶ್, ಸಂಚಾಲಕ ಸುರೇಶ್, ಪ್ರಮುಖರಾದ ಕೆ.ಟಿ. ಜೋಯಪ್ಪ, ಡಿ.ಕೆ. ರಜಿತ್, ಕೂತಿ ಗ್ರಾಮಧ್ಯಕ್ಷ ಹೆಚ್. ಎಂ. ಜಯರಾಮ್ ಇದ್ದರು.