ಮಡಿಕೇರಿ ನ.25 NEWS DESK : ನಗರದ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯಲ್ಲಿ ವಾರ್ಷಿಕ ಬಹುಮಾನ ವಿತರಣಾ ಸಮಾರಂಭವನ್ನು ಆಚರಿಸಲಾಯಿತು. ಪದ್ಮಭೂಷಣ ಜನರಲ್ ತಿಮ್ಮಯ್ಯನವರ ಪ್ರತಿಮೆಗೆ ಪುಷ್ಪಾರ್ಚನೆಯನ್ನು ಮಾಡಿ, ಅತಿಥಿಗಳಿಂದ ಧ್ವಜಾರೋಹಣ ನೆರವೇರಿತು. ನಂತರ ಆಯಾಯ ಗುಂಪಿನ ನಾಯಕರುಗಳ ನೇತೃತ್ವದಲ್ಲಿ ಪಥಸಂಚಲವನ್ನು ಮಾಡಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರೊ.ಕಂಬೆಯಂಡ ಸಿ.ಬೆಳ್ಯಪ್ಪ, ಮಕ್ಕಳ ಸತತ ಪ್ರಯತ್ನದಿಂದ ಮುಂದೆ ಬರಬೇಕು ಹಾಗೂ ಮಾತೃಭಾಷೆಯು ತುಂಬಾ ಪ್ರಮುಖವಾಗಿದ್ದು, ಸಂವಹನೆಗೆ ಆಂಗ್ಲ ಭಾಷೆ ಹಾಗೂ ಇತರ ಭಾಷೆಯನ್ನು ಆಲಿಸುವುದು ಮತ್ತು ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಡಿಕೇರಿ ಕೊಡವ ಸಮಾಜ ಹಾಗೂ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಮಂಡುವಂಡ ಮುತ್ತಪ್ಪ, ಮಕ್ಕಳ ವಿದ್ಯಾಭ್ಯಾಸದೊಂದಿಗೆ ಇತರ ಚಟುವಟಿಕೆಗಳಲ್ಲಿ ಅವರ ಪ್ರಗತಿ ಹಾಗೂ ಸಾಧನೆ ಹೇಗಿದೆ, ಮುಂದೆ ಹೇಗಿರಬೇಕು ಎನ್ನುವುದನ್ನು ಮನದಟ್ಟು ಮಾಡಿದರು. ಕಾರ್ಯಕ್ರಮದಲ್ಲಿ ಅತಿಥಿಗಳಾದ ತಾರಾ ಬೆಳ್ಯಪ್ಪ, ಶಾಲಾ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಕೇಕಡ ಎ.ದೇವಯ್ಯ, ಶಾಲಾ ಆಡಳಿತಾಧಿಕಾರಿ ಮುಕ್ಕಾಟಿರ ಪೊನ್ನಮ್ಮ, ಪ್ರಾಂಶುಪಾಲರಾದ ಎಂ.ಜಿ.ನವಿತ, ಶಾಲಾ ಆಡಳಿತ ಮಂಡಳಿ ಸದಸ್ಯರುಗಳಾದ ಅಮ್ಮಾಟಂಡ ಪಾರ್ವತಿ ಅಪ್ಪಯ್ಯ, ಕನ್ನಂಡ ಸಂಪತ್, ಬೊಪ್ಪಂಡ ಸರಳ ಕರುಂಬಯ್ಯ, ಕಾಂಡೆರ ಲಲ್ಲೂ ಕುಟ್ಟಪ್ಪ, ಮಂಡಿರ ಡಿ.ಮುದ್ದಪ್ಪ ಹಾಜರಿದ್ದರು. ವಾರ್ಷಿಕ ಕ್ರೀಡಾಕೂಟದ ಸ್ಪರ್ಧಾ ವಿಜೇತರುಗಳಿಗೆ ಹಾಗೂ ಅಜ್ಜಿ ತಾತಂದಿರ ದಿನದ ಸ್ಪರ್ಧಾ ವಿಜೇತರುಗಳಿಗೆ ಗಣ್ಯರಿಂದ ಬಹುಮಾನ ವಿತರಣೆ ಮಾಡಲಾಯಿತು. ಶಿಕ್ಷಕರಿಗೆ ಹಾಗೂ ಪ್ರತಿಭಾನ್ವಿತ ಮಕ್ಕಳಿಗೆ ಸ್ಮರಣ ನಿಧಿ ಬಹುಮಾನವನ್ನು ನೀಡಲಾಯಿತು. ಶಾಲಾ ನಾಯಕಿ ಜನಿಷಾ ಸುಬ್ರಮಣಿ ಸ್ವಾಗತಿಸಿದರು. ಶಿಕ್ಷಕಿ ಬಿ.ಪಿ.ಟೈನಿ ಅತಿಥಿಗಳನ್ನು ಪರಿಚಯಿಸಿದರು. ಕೆ.ಎಸ್.ಡೆಸ್ಟೈನ್ ಟಿಯಾನ ತಂಗಮ್ಮ ಹಾಗೂ ಮನ್ಸೂರ್ ಜಿ.ವಿ.ಲಿಖಿತ್ ಕಾರ್ಯಕ್ರಮ ನಿರೂಪಿಸಿದರು. ಶಾಲಾ ನಾಯಕಿ ಯುಕ್ತ ನೀಲಮ್ಮ ವಂದಿಸಿದರು. ವಿದ್ಯಾರ್ಥಿಗಳು ಯೋಗ, ಕರಾಟೆ, ನೃತ್ಯದಲ್ಲಿ ಶೌರ್ಯ ಮತ್ತು ಪ್ರತಿಭೆಯನ್ನು ಪ್ರದರ್ಶಿಸಿದರು.