ಮಡಿಕೇರಿ ಡಿ.2 NEWS DESK : 2024-25ನೇ ಸಾಲಿನ ಪರಿಶಿಷ್ಟ ಜಾತಿ ಉಪಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿ ಯುವಕ, ಯುವತಿಯರಿಗೆ ಡಿ.6 ರಿಂದ ಡಿ.17 ರವರೆಗೆ ವಿಡಿಯೋಗ್ರಫಿ ತರಬೇತಿ ಶಿಬಿರ (12 ದಿನಗಳು), ಡಿ.3ರಿಂದ 17 ರವರೆಗೆ ಜಿಮ್, ಫಿಟ್ನೆಸ್ ತರಬೇತಿ ಶಿಬಿರ(15 ದಿನಗಳು)ಗಳನ್ನು ಇಲಾಖೆ ವತಿಯಿಂದ ಆಯೋಜಿಸಲಾಗುವುದು. ದ್ವಿತೀಯ ಪಿಯುಸಿ(ಪಾಸ್/ಫೇಲ್) ಕನಿಷ್ಠದ 18 ವರ್ಷದಿಂದ 40 ವರ್ಷ ಒಳಗಿರಬೇಕು. ಡಿಸೆಂಬರ್, 06 ರಿಂದ 17 ರವರೆಗೆ ವಿಡಿಯೋಗ್ರಫಿ ತರಬೇತಿ ಶಿಬಿರವು ಬೆಂಗಳೂರಿನ ಕುಂಬಳಗೋಡು ತರಬೇತಿ ಕೇಂದ್ರದಲ್ಲಿ ನಡೆಯಲಿದೆ. ಜಿಮ್/ಫಿಟ್ನೆಸ್ ತರಬೇತಿ ಶಿಬಿರವು ಡಿ.3 ರಿಂದ 17 ರವರೆಗೆ ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದೆ. ಅದರಂತೆ ತರಬೇತಿ ಪಡೆಯಲು ಇಚ್ಚಿಸುವ ಪರಿಶಿಷ್ಟ ಜಾತಿ ಯುವಕ ಯವತಿಯರಿಗೆ ತರಬೇತಿ ಶಿಬಿರಗಳ ಅರ್ಜಿ ಸಲ್ಲಿಸಲು, ಅರ್ಜಿ ನಮೂನೆಗಳನ್ನು ಸಹಾಯಕ ನಿರ್ದೇಶಕರ ಕಚೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣ, ಮಡಿಕೇರಿ ಈ ಕಚೇರಿಯಿಂದ ಪಡೆದು ಡಿಸೆಂಬರ್, 02 ಒಳಗೆ ಕಚೇರಿಗೆ ಸಲ್ಲಿಸುವುದು. ಹೆಚ್ಚಿನ ಮಾಹಿತಿಗೆ ದೂ.ಸಂ.08272-220986 ನ್ನು ಕಚೇರಿಯಲ್ಲಿ ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.











