ಮಡಿಕೇರಿ ಡಿ.5 NEWS DESK : ಅನ್ಯಾಯ, ಹಿಂಸಾಚಾರ ಮಾಡುವವರನ್ನು ತಡೆಯುವುದು ಪ್ರವಾದಿಯವರ ಬೋಧನೆಯ ಒಂದು ಭಾಗವಾಗಿದೆ ಎಂದು ಸಮಸ್ತ ಕೇಂದ್ರ ಮುಶಾವರ ಸದಸ್ಯ ಹಾಗೂ ಕೊಡಗು ಜಿಲ್ಲಾ ನಾಯಿಬ್ ಖಾಝಿ ಎಂ.ಎಂ.ಅಬ್ದುಲ್ಲಾ ಮುಸ್ಲಿಯಾರ್ ಎಡಪಲಾ ಹೇಳಿದರು. ಸಿದ್ದಾಪುರದ ಮದರಸ ಆವರಣದಲ್ಲಿ ಕೊಡಗು ಜಿಲ್ಲಾ ಎಸ್‌ಕೆಎಸ್‌ಎಸ್‌ಎಫ್ ಆಯೋಜಿಸಿದ್ದ ಜಿಲ್ಲಾ ಮಟ್ಟದ ಇಸ್ಲಾಮಿಕ್ ಕಲಾ ಸಾಹಿತ್ಯ ಸ್ಪರ್ಧೆ ಕಲೋತ್ಸವದ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅನ್ಯಾಯದ ವಿರುದ್ಧ ಹೋರಾಡಲು ಕಲೆ ಮತ್ತು ಸಾಹಿತ್ಯವನ್ನು ಬಳಸಿಕೊಳ್ಳಬೇಕು. ಕಲೋತ್ಸವು ಯುವ ಪ್ರತಿಭೆಗಳಿಗೆ ಒಳ್ಳೆಯ ಅವಕಾಶವಾಗಿದೆ ಎಂದು ಅವರು ಹೇಳಿದರು. ಎಸ್.ಕೆ.ಎಸ್.ಎಸ್.ಎಫ್ ಜಿಲ್ಲಾಧ್ಯಕ್ಷ ಶುಹೈಬ್ ಫೈಝಿ ಕೊಳಕೇರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್‌ಕೆಎಸ್‌ಎಸ್‌ಎಫ್ ಕೇಂದ್ರ ಉಪಾಧ್ಯಕ್ಷ ಸೈಯದ್ ಫಕ್ರುದ್ದೀನ್ ತಂಗಳ್ ಮುಖ್ಯ ಭಾಷಣ ಮಾಡಿದರು. ರಫೀಕ್ ಬಾಖವಿ, ಆರಿಫ್ ಫೈಝಿ, ಸಿಪಿಎಂ ಬಶೀರ್ ಹಾಜಿ, ಯು.ಎಂ.ಮುಸ್ತಫಾ ಹಾಜಿ, ಅಬ್ದುಲ್ ರವೂಫ್ ಹಾಜಿ, ಅಶ್ರಫ್ ಫೈಝಿ, ರವೂಫ್ ಹುದವಿ, ತಮ್ಲೀಕ್ ದಾರಿಮಿ, ಜಮ್ಶೀರ್ ವಾಫಿ ಮತ್ತು ಸಿದ್ದೀಕ್ ಮತ್ತಿತರರು ಹಾಜರಿದ್ದರು.
ಪಂಜ ಕುಸ್ತಿಪಟು ಹಸ್ಸನ್ ಗೆ ಸನ್ಮಾನ :: ಅಕ್ಟೋಬರ್ ತಿಂಗಳಲ್ಲಿ ಮುಂಬೈನಲ್ಲಿ ನಡೆದ ಏಷಿಯನ್ ಪ್ಯಾರಾಪಂಜ ಕುಸ್ತಿ ಕ್ರೀಡಾಕೂಟದಲ್ಲಿ ಭಾಗವಹಿಸಿ 3ನೇ ಸ್ಥಾನ ಪಡೆದ ಮಡಿಕೇರಿ ತಾಲ್ಲೂಕು ಅರೆಕಾಡು ಗ್ರಾಮದ ವಿಶೇಷ ಚೇತನರಾದ ಕೆ.ಎಂ ಹಸ್ಸನ್ ಹಾಗೂ ಕೇರಳ ರಾಜ್ಯದ ವಯನಾಡಿನ ಮುಂಡಕೈನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಸಂತ್ರಸ್ತರ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಕೊಡಗು ಜಿಲ್ಲೆಯ ಎಸ್.ಕೆ.ಎಸ್.ಎಸ್.ಎಫ್ ಮಿಖಾಯ ಸದಸ್ಯರನ್ನು ಎಸ್.ಕೆ.ಎಸ್.ಎಸ್.ಎಫ್ ಸಿದ್ದಾಪುರ ವಲಯ ಮತ್ತು ಎಸ್.ಕೆ.ಎಸ್.ಎಫ್ ಕೊಡಗು ಜಿಲ್ಲಾ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.