ಸುಂಟಿಕೊಪ್ಪ ಡಿ.6 NEWS DESK : ಮಕ್ಕಳ ಪ್ರತಿಭೆಗಳನ್ನು ಹೊರ ತರುವಲ್ಲಿ ಶಾಲಾ ವಾರ್ಷಿಕೋತ್ಸವ ಸೂಕ್ತ ವೇದಿಕೆಯಾಗಿದೆ ಎಂದು ಬೆಳ್ತಂಗಡಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಮಾರ್ ಲಾರೆನ್ಸ್ ಮುಕ್ಕಾಜಿ ಹೇಳಿದರು. 7ನೇ ಹೊಸಕೋಟೆ ದೀಪ್ತಿ ಶಾಲೆಯಲ್ಲಿ ಆಯೋಜಿಸಲಾಗಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಆರ್ಶಿವಚನ ನೀಡಿದರು. ಮಕ್ಕಳು ಇಡೀ ವರ್ಷ 4 ಗೋಡೆಗಳ ನಡುವೆ ಕಲಿಯುತ್ತಾರೆ. ಪೊಷಕರು ಮತ್ತು ಶಿಕ್ಷಕರ ನಡುವೆ ಅಂತರವಿರುತ್ತದೆ. ಆದರೆ ವಾರ್ಷಿಕೋತ್ಸವ ಸಂದರ್ಭ ಶಿಕ್ಷಕರು, ಪೋಷಕರು, ಮಕ್ಕಳು ಒಟ್ಟಾಗಿ ಬೆರೆಯುವುದರಿಂದ ಪರಸ್ಪರ ಸ್ನೇಹ ವಿಶ್ವಾಸ ವೃದ್ಧಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು. ಸೋಮವಾರಪೇಟೆ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಹೇಮಂತ್ ಕುಮಾರ್ ಮಾತನಾಡಿ, ಶಾಲೆಯು ಶಿಸ್ತು ಮತ್ತು ಪ್ರೇಮಮಯ ವಾತವಾರಣದಲ್ಲಿ ನಡೆಯುತ್ತಿದ್ದು, ವಿದ್ಯಾರ್ಥಿಗಳು ಅತ್ಯಂತ ಸಂತಸದಿಂದ ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಮಕ್ಕಳಲ್ಲಿರುವ ಸೂಕ್ತ ಪ್ರತಿಭೆಯನ್ನು ಹೊರ ತರುವಲ್ಲಿ ಶಾಲಾ ವಾರ್ಷಿಕೋತ್ಸವ ಒಂದು ಪ್ರೇರಣೆ ಮತ್ತು ವೇದಿಕೆಯಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾದ್ಯಾಯನಿ ಟೆಸಿಮ್ಯಾನುವೇಲ್ ವಹಿಸಿದ್ದರು.ವೇದಿಕೆಯಲ್ಲಿ ಎಜುಕೇಷನ್ ಕೌನಿಲ್ಸ್‍ರ್ ಸೌಮ್ಯಮರಿಯ, ಗ್ರಾ.ಪಂ.ಅಧ್ಯಕ್ಷ ಇ.ವಿ.ಜೋಸೆಫ್, ಸಂತ ಸೆಬಾಸ್ಟೀನ್ ದೇವಾಲಯದ ಧರ್ಮಗುರುಗಳಾದ ವಂ.ರೆ.ಫಾದರ್ ಸೆಬಾಸ್ಟೀನ್ ಪೂವತ್ತಿಗಲ್, ಕಾಫಿ ಬೆಳೆಗಾರರಾದ ದಾಸಂಡ ರಮೇಶ್ ಚಂಗಪ್ಪ, ಪಂಚಾಯಿತಿ ಸದಸ್ಯ ಮುಸ್ತಾಫ ಮತ್ತು ಶಾಜಿ ಮತ್ತಿತರರು ಇದ್ದರು. ಮೊದಲಿಗೆ ಶಾಲಾ ಮಕ್ಕಳು ಕವಾಯತ್ ವಾದ್ಯಗೋಷ್ಠಿಯೊಂದಿಗೆ ಅತಿಥಿಗಣ್ಯರನ್ನು ಸಮಾರಂಭದ ವೇದಿಕೆಗೆ ಕರೆ ತಂದರು. ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮವು ನೆರೆದಿದ್ದವರ ಮನಸೂರೆಗೊಳಿಸಿದ್ದವು. ಮುಖ್ಯೋಪಾದ್ಯಾಯನಿ ಟೆಸಿಮ್ಯಾನುವೇಲ್ ಸ್ವಾಗತಿಸಿದರು. ಶಿಕ್ಷಕ ಸತ್ಯದಾಸ್ ವಂದಿಸಿದರು.